ಮೈಲನಹಳ್ಳಿ ದಿನೇಶ್ ಕುಮಾರ್
701 views
13 days ago
ಕರ್ನಾಟಕವನ್ನು ಶೈಕ್ಷಣಿಕವಾಗಿ–ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಅಗ್ರಗಣ್ಯರಾದ ಜ್ಞಾನದಾಸೋಹಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಶಿರಸಂಗಿ‌‌ ಸಂಸ್ಥಾನದ ಕೊನೆಯ ದೊರೆ, ತಮ್ಮ ಆಸ್ತಿಯನ್ನೆಲ್ಲ ಸಮಾಜ ಸೇವೆಗಾಗಿ ಧಾರೆ ಎರೆದ ದಾನವೀರ ಶಿರಸಂಗಿ ಲಿಂಗರಾಯ ದೇಸಾಯಿ ಅವರು 19ನೇ ಶತಮಾನದಲ್ಲೇ ಸಮಾಜವನ್ನು ಎಚ್ಚರಿಸಿ, ಶಿಕ್ಷಣದ ಜ್ಯೋತಿ ಬೆಳಗಿದರು. ಜನಕಲ್ಯಾಣಕ್ಕಾಗಿ ಕೆರೆ–ಕಟ್ಟೆಗಳು, ಕಾಲುವೆಗಳನ್ನು ನಿರ್ಮಿಸಿ ವೈಜ್ಞಾನಿಕ ಕೃಷಿಗೆ ದಿಕ್ಕು ತೋರಿದ ಜಲತಜ್ಞರು. ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸಿ, ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ದೇಣಿಗೆ ನೀಡಿ ಮೊದಲ ಎರಡು ಅವಧಿಗೆ ಅದರ ಅಧ್ಯಕ್ಷರಾಗಿ ಮಹಾಸಭಾವನ್ನು ಮುನ್ನಡೆಸಿದರು. ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣ ಮತ್ತು ಅಭಿವೃದ್ಧಿಗೆ ದಾನಮಾಡಿದ ಮಹಾದಾನಿಯ ಸೇವೆಯ ಫಲವಾಗಿ BLDE, KLE, BVV ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಅನ್ನದಾಸೋಹ ಕೇಂದ್ರಗಳು ಹುಟ್ಟಿ ಇಂದು ಕೂಡ ಜ್ಞಾನ ದಾಸೋಹದ ಪರಂಪರೆಯನ್ನು ಮುಂದುವರಿಸುತ್ತಿವೆ. ಸಮಾಜಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಆ ಮಹಾನ್ ಚೇತನ ಸದಾ ನಮಗೆ ಪ್ರೇರಣೆ. ✍🏻- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Shirasangi #lingaraja #Desai #jayanti #ಶಿರಸಂಗಿ #ಲಿಂಗರಾಜ #ದೇಸಾಯಿ #ಶಿರಸಂಗಿ ಲಿಂಗರಾಜ ದೇಸಾಯಿ ಜಯಂತಿ #🔱 ಭಕ್ತಿ ಲೋಕ