ಏನೋ ಹೇಳಬೇಕು....
ಏನೋ? ತಲೆಯಲ್ಲಿದೆ, ತುಟಿಗೆ ಬಾರದು, ತುಟಿಗೆ
ಬಂದದ್ದು ಎದೆಯಿಂದ, ಏನು ಮಾತಾಡುವುದು?
ಇದು ತಪ್ಪು ಗೊತ್ತು, ಸರಿ ಯಾವುದು?
ಸರಿಯಾಗಿಯೇ ಮಾಡಬೇಕು ತಪ್ಪಾದರು!
ಎಲ್ಲರೊಪ್ಪಿಸುವ ದಾರಿ-ವಿಧಿ-ವಿಧಾನ ಇಲ್ಲಿಲ್ಲ,
ನಮ್ಮೊಪ್ಪಿಗೆಯೆ ಇಲ್ಲದೆ ಯಾರನ್ನೂ ಕೇಳಿ ಫಲವಿಲ್ಲ.
ನಾ ನಿನಗೆ ನೀ ನನಗೆ
ತುಸು ಮಾತು, ಪಿಸು ಮಾತು, ಉಳಿದೆಲ್ಲವೂ ನಗೆ.
ಏನೋ ಹೇಳಬೇಕು....
ಏನೋ? ತಲೆಯಲ್ಲಿದೆ, ತುಟಿಗೆ ಬಾರದು, ತುಟಿಗೆ ಬಂದದ್ದು ಎದೆಯಿಂದ, ಏನು ಮಾತಾಡುವುದು?
#💓ಮನದಾಳದ ಮಾತು