ಭದ್ರಾವತಿಯಲ್ಲಿ ಅಭಿಮಾನಿಗಳ ಭಕ್ತಿ ಶಿಖರಕ್ಕೆ: ಡಾ. ರಾಜ್ಕುಮಾರ್–ಪುನೀತ್ ರಾಜ್ಕುಮಾರ್ ದೇವಾಲಯ ಅನಾವರಣ - AIN Kannada
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಅಭಿಮಾನಿಗಳ ಭಕ್ತಿ ಮತ್ತೊಮ್ಮೆ ಅನನ್ಯ ರೂಪ ಪಡೆದಿದೆ. ವರನಟ ದಿವಂಗತ ಡಾ. ರಾಜ್ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಅಭಿಮಾನಿಗಳು ನಿರ್ಮಿಸಿರುವ ದೇವಾಲಯ ಮತ್ತು ಸುಮಾರು ಮೂರು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಗುರುವಾರ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ಭದ್ರಾವತಿ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿ ಸಂಘದ ವತಿಯಿಂದ ದೇವಾಲಯ ನಿರ್ಮಿಸಲಾಗಿದ್ದು, ಅಭಿಮಾನಿಗಳೇ ಹಣ ಸಂಗ್ರಹಿಸಿ ಸುಮಾರು 15