ಜೀವನ ಬಂಡಿ....
ಜೀವನ ಬಂಡಿ ಸಾಗಲೇಬೇಕು
ಕಷ್ಟ ಸುಖವು ಮೆಟ್ಟಿ ನಿಲ್ಲಬೇಕು
ಸೋಲು ಗೆಲುವು ಜೊತೆಗಿರಬೇಕು
ನಿತ್ಯ ಜೀವನ ಸಾಗಲೇಬೇಕು....
ದರ್ಪದಿ ಮೆರೆದವನು ಮಣ್ಣು ಮುಕ್ಕಲೇಬೇಕು
ಮನದಿ ಅಹಂಕಾರ ತೊಳೆಯಲೇಬೇಕು
ನಾನು ನನ್ನದು ಬಿಟ್ಟು ಹೋಗಲೇ ಬೇಕು
ಎಲ್ಲರಲ್ಲಿ ಒಂದಾಗಿ ಬಾಳಲೇಬೇಕು...
ಕಷ್ಟಕ್ಕೆ ನೀ ಕರಗಲೇ ಬೇಕು
ಸಂತೋಷಕ್ಕೆ ನೀ ಹಿಗ್ಗಲೇಬೇಕು
ಕನಸುಗಳು ನೂರು ಕಂಡಿರಲೇಬೇಕು
ಆಸೆ ದುಃಖಕ್ಕೆ ಮೂಲ ನೀ ಅರಿತಿರಬೇಕು...
ಯಾವುದು ಶಾಶ್ವತವಲ್ಲ ನೀ ತಿಳಿಯಬೇಕು
ಮಣ್ಣು ಹೆಣ್ಣು ಹೊನ್ನು ನೀ ಗೌರವಿಸಲೇಬೇಕು
ಮೋಸ ಕಪಟ ದ್ರೋಹ ಕೊನೆಗೊಳ್ಳಲೇಬೇಕು
ಸತ್ಯ ನ್ಯಾಯ ಶಾಶ್ವತ ನೀ ಅರಿತಿರಬೇಕು...
ಕಾಯಕದಲ್ಲಿ ಶ್ರದ್ಧೆ ನಿಷ್ಠೆ ಇರಬೇಕು
ಅವಮಾನ ಅಪಮಾನ ಗೆಲುವಾಗಬೇಕು
ತಂದೆ ತಾಯಿ ಗುರು ಹಿರಿಯರು ಗೌರವಿಸಬೇಕು
ನೀತಿ ನಿಯಮದ ನಡವಳಿಕೆ ನಿನ್ನದಾಗಬೇಕು...
#ಶುಭಸಂಜೆ.🦋
ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🌹🙏
#🖋️ ನನ್ನ ಬರಹ #📝ನನ್ನ ಕವಿತೆಗಳು #💓ಮನದಾಳದ ಮಾತು #😍 ನನ್ನ ಸ್ಟೇಟಸ್ #📜ಕವಿತೆ