manmohan
927 views
1 months ago
‌ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಈ ತಪ್ಪು ಮಾಡಲೇಬೇಡಿ: ಬ್ಯಾಂಕ್‌ನಲ್ಲಿದ್ದ ಹಣ ಖಾಲಿಯಾಗುತ್ತದೆ ಪಕ್ಕಾ!! ಭಾರತದಲ್ಲಿ ಕ್ರೆಡಿಟ್ ಕಾರ್ಡ್ (Credit Card) ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಹಿಂದೆ ಆರ್ಥಿಕವಾಗಿ ಸಬಲರ ಪಾಲಾಗಿದ್ದ ಕ್ರೆಡಿಟ್ ಕಾರ್ಡ್‌ಗಳು ಇದೀಗ ಎಲ್ಲರ ವಾಲೆಟ್ (Wallet) ಪ್ರವೇಶಿಸಿವೆ. ಡೆಬಿಟ್ ಕಾರ್ಡಿನಂತೆಯೇ ಸುಲಭವಾಗಿ ಲಭ್ಯವಾಗುತ್ತಿದ್ದು, ಆಜೀವ ಉಚಿತದಿಂದ ಹಿಡಿದು ಪ್ರೀಮಿಯಂ ಕಾರ್ಡ್‌ಗಳವರೆಗೆ ಹಲವು ಆಯ್ಕೆಗಳು ಮಾರುಕಟ್ಟೆಯಲ್ಲಿವೆ. ಕ್ರೆಡಿಟ್ ಕಾರ್ಡ್ ಎಂದರೇನು? 1)ಇದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನೀಡುವ ಒಂದು ಸಾಧನವಾಗಿದ್ದು, ನಿರ್ದಿಷ್ಟ ಮಿತಿಯವರೆಗೆ ಸಾಲ ಪಡೆಯಲು ಅನುವು ಮಾಡಿಕೊಡುತ್ತದೆ. 2)ನೀವು ಮಾಡಿದ ಖರ್ಚುಗಳ ಮೊತ್ತವನ್ನು ತಿಂಗಳ ಕೊನೆಗೆ ಮರುಪಾವತಿ ಮಾಡಬೇಕು. ಪಾವತಿ ವಿಳಂಬವಾದರೆ ಬಡ್ಡಿ ವಿಧಿಸಲಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಮತ್ತು ಆದಾಯದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್‌ಗಳು ದೊರೆಯುತ್ತವೆ. ಇವು ಹಲವು ರಿಯಾಯಿತಿಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ವಿಶೇಷ ಪ್ರಯೋಜನಗಳನ್ನು ನೀಡುತ್ತವೆ. ಆದರೆ, ನೀವು ಇತ್ತೀಚೆಗೆ ಹೊಸ ಕ್ರೆಡಿಟ್ ಕಾರ್ಡ್ ಪಡೆದಿದ್ದರೆ, ಕೆಲವು ಸಾಮಾನ್ಯ ತಪ್ಪುಗಳಿಂದ ಎಚ್ಚರವಹಿಸಬೇಕು. ಈ ತಪ್ಪುಗಳು ನಿಮ್ಮ ಕ್ರೆಡಿಟ್ ಆರೋಗ್ಯಕ್ಕೆ ಹಾನಿ ಮಾಡಬಹುದು. ಹಾಗಾಗಿ, ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ಈ 5 ಪ್ರಮುಖ ಅಂಶಗಳನ್ನು ಗಮನಿಸುವುದು ಅವಶ್ಯಕ. 1) ಸರಿಯಾದ ಕ್ರೆಡಿಟ್ ಕಾರ್ಡ್ ಆಯ್ಕೆ: ನಿಮ್ಮ ಆರ್ಥಿಕ ಅಗತ್ಯಗಳು ಮತ್ತು ಜೀವನಶೈಲಿಗೆ ಸರಿಹೊಂದುವ ಅತ್ಯುತ್ತಮ ಕಾರ್ಡ್ ಅನ್ನು ಆಯ್ಕೆ ಮಾಡಿ. ನೀವು ಆಗಾಗ್ಗೆ ಪ್ರಯಾಣಿಸುವವರಾಗಿದ್ದರೆ, ಏರ್‌ಪೋರ್ಟ್ ಲಾಂಜ್ ಪ್ರವೇಶ, ಏರ್ ಮೈಲ್‌ಗಳಂತಹ ಸೌಲಭ್ಯಗಳನ್ನು ನೀಡುವ ಕಾರ್ಡ್‌ಗಳನ್ನು ಪರಿಗಣಿಸಿ. ಆನ್‌ಲೈನ್‌ನಲ್ಲಿ ಹೆಚ್ಚು ಖರೀದಿ ಮಾಡುವವರು ಅದಕ್ಕೆ ಸಂಬಂಧಿಸಿದ ಕೊಡುಗೆಗಳಿರುವ ಕಾರ್ಡ್‌ಗಳನ್ನು ಆರಿಸಿಕೊಳ್ಳಬೇಕು. 2) ರಿವಾರ್ಡ್ ಪಾಯಿಂಟ್‌ಗಳ ಬಳಕೆ: ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ರಿವಾರ್ಡ್ ಪಾಯಿಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಅವಶ್ಯಕ. ಅವುಗಳ ಅವಧಿ ಮುಗಿಯುವ ಮುನ್ನ ಬಳಸಲು ಗಮನಹರಿಸಿ. ಶಾಪಿಂಗ್, ಪ್ರಯಾಣ ಅಥವಾ ಉಡುಗೊರೆ ವೋಚರ್‌ಗಳಿಗಾಗಿ ಇವನ್ನು ಸಕಾಲದಲ್ಲಿ ರಿಡೀಮ್ ಮಾಡಿ. ಸರಿಯಾಗಿ ಬಳಸಿದಲ್ಲಿ, ಈ ರಿವಾರ್ಡ್ ಪಾಯಿಂಟ್‌ಗಳು ನಿಮ್ಮ ಜೇಬಿಗೆ ಆರ್ಥಿಕ ಉಳಿತಾಯವನ್ನು ತರಬಲ್ಲವು. 3) ಕ್ರೆಡಿಟ್ ಮಿತಿ ಗಮನಿಸಿ: ಕ್ರೆಡಿಟ್ ಮಿತಿಯು ಅತ್ಯಂತ ಪ್ರಮುಖ ಅಂಶವಾಗಿದೆ. ಕ್ರೆಡಿಟ್ ಕಾರ್ಡ್ ಇದೆ ಎಂದು ಎಲ್ಲಾ ಖರೀದಿಗಳನ್ನು ಅದರ ಮೂಲಕ ಮಾಡಿದರೆ, ನಿಮ್ಮ ಮಿತಿ ಮೀರಬಹುದು. ಇದು ನಿಮ್ಮ ಕ್ರೆಡಿಟ್ ಆರೋಗ್ಯಕ್ಕೆ ಹಾನಿ ಮಾಡಿ, ಕ್ರೆಡಿಟ್ ಸ್ಕೋರ್ ಕುಸಿಯಲು ಕಾರಣವಾಗುತ್ತದೆ. ಆರ್ಥಿಕ ಭವಿಷ್ಯಕ್ಕೆ ಇದು ಮಾರಕ. ಹಾಗಾಗಿ, ನಿಮ್ಮ ಕ್ರೆಡಿಟ್ ಮಿತಿಯ 30 ಪ್ರತಿಶತದಷ್ಟನ್ನು ಮಾತ್ರ ಬಳಸಲು ಪ್ರಯತ್ನಿಸಿ. 4) ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ: ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಯಾವಾಗಲೂ ಸಕಾಲದಲ್ಲಿ ಸಂಪೂರ್ಣ ಮೊತ್ತದೊಂದಿಗೆ ಪಾವತಿಸಿ. ಬಾಕಿ ಉಳಿಸಿಕೊಂಡರೆ, ನಿಮ್ಮ ಸಾಲವು ವೇಗವಾಗಿ ಹೆಚ್ಚಾಗಬಹುದು. ಸಮಯಕ್ಕೆ ಸರಿಯಾದ ಪಾವತಿಗಳು ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಮತ್ತು ಅನಗತ್ಯ ಬಡ್ಡಿ ಹೊರೆಯನ್ನು ತಪ್ಪಿಸಲು ಸಹಾಯ ಮಾಡುತ್ತವೆ. 5) ಇಎಂಐ ಆಯ್ಕೆಗಳು: ಇಎಂಐ ಸೌಲಭ್ಯಗಳು ಅನುಕೂಲಕರವೆನಿಸಿದರೂ, ಕೆಲವೊಮ್ಮೆ ಅವು ಬಲೆಯಾಗಬಹುದು. ಇಎಂಐಗಳು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ದರ ಹಾಗೂ ಪ್ರೊಸೆಸಿಂಗ್ ಶುಲ್ಕಗಳನ್ನು ಹೊಂದಿರುತ್ತವೆ, ಇದರಿಂದ ಖರೀದಿಗಳು ದುಬಾರಿಯಾಗುತ್ತವೆ. ಕ್ರೆಡಿಟ್ ಕಾರ್ಡ್‌ನಲ್ಲಿ ಇಎಂಐ ಆಯ್ಕೆ ಮಾಡುವ ಮೊದಲು, ಎಲ್ಲಾ ಶುಲ್ಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅತಿಯಾದ ಶುಲ್ಕಗಳಿಲ್ಲ ಎಂದು ಖಚಿತಪಡಿಸಿಕೊಂಡು ಮುಂದುವರಿಯಿರಿ. ಈ ಐದು ಅಂಶಗಳನ್ನು ನಿರ್ಲಕ್ಷಿಸಿದರೆ,ಕ್ರೆಡಿಟ್ ಕಾರ್ಡ್ ನಿಮಗೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಆದರೆ, ಹಣಕಾಸು ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ, ಕ್ರೆಡಿಟ್ ಕಾರ್ಡ್ ಮೂಲಕ ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. #BUSINESS #CREDITCARD #REWARDPOINTS #EMIOPTIONS #GIFTVOUCHER