ವಿಷ್ಣು ಪ್ರಿಯ 🦚💙
718 views
#🔱 ಭಕ್ತಿ ಲೋಕ #ಪಾಂಡುರಂಗ ವಿಠ್ಠಲ 🙏ಈ ಬೆಳಗಿನಲ್ಲಿ ಪರಮಾತ್ಮನಲ್ಲಿ ಪ್ರಾರ್ಥನೆ 🙏 🌼 ಶ್ರೀಪಂಢರೀಶಾ ಪತಿತಪಾವನಾ| ಏಕ ವಿಜ್ಞಾಪನಾ ಪಾಯಾಂಪಾಶೀ||೧|| 🌺ಹೇ ಪತಿತಪಾವನಾ ಪಂಢರೀಶಾ, ನಿನ್ನ ಚರಣಗಳಲ್ಲಿ ನನ್ನದೊಂದು ವಿನಂತಿ ಇದೆ. 🌼ಅನಾಥಾ ಜೀವಾಂಚಾ ತೂ ಕಾಜಕೈವಾರೀ| ಐಸೀ ಚರಾಚರೀ ಬ್ರೀದಾವಳೀ||೨|| 🌺 ನೀನು ಅನಾಥ ಜೀವರುಗಳ ಕೈವಾರಿ(ಪರಮ ಮಿತ್ರ)ಯೆಂದು ಸಮಸ್ತ ಬ್ರಹ್ಮಾಂಡದಲ್ಲಿ ನಿನಗೆ ಬಿರುದಾವಳಿ ಇದೆ. 🌼ನ ಸಾಂಗತಾ ಕಳೇ ಅಂತರೀಚೇ ಗುಜ| ಆತಾ ತುಝೀ ಲಾಜ ತುಜ ದೇವಾ||೩|| 🌺ದೇವಾ, ಪ್ರತಿಯೊಬ್ಬರ ಅಂತಃಕರಣದಲ್ಲಿಯ ರಹಸ್ಯವು ನಿನಗೆ ತಿಳಿದಿದೆ.ಆದ್ದರಿಂದ ಸದಾ ನಿನ್ನ ನಾಮಸ್ಮರಣೆ ಮಾಡುವ ಭಕ್ತರ ಮರ್ಯಾದೆ ಉಳಿಸುವುದು ನಿನಗೇ ಬಿಟ್ಟಿದ್ದು. 🌼ಆಳಿಕರ ತ್ಯಾಚೇ ಕರಿಸೀ ಸಮಾಧಾನ| ಅಭಯಾಚೇ ದಾನ ದೇವೂನಿಯಾ||೪|| 🌺 ಏನಾದರೂ ಪ್ರಬಲ ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಭಕ್ತರಿಗೆ ಅಭಯದಾನ ಮಾಡಿ ನೀನು ಸಮಾಧಾನಪಡಿಸುತ್ತೀ. 🌼ತುಕಾಮ್ಹಣೇ ತೂಚಿ ಖೇಳೇ ದೋಹೀ ಠಾಯಿ| ನಸೇಲ ತೋ ದೇಯೀ ಧೀರ ಮನಾ||೫|| 🌺ಹೇ ದೇವಾ ಭಕ್ತರಲ್ಲಿ ಹೀಗೆ ಭಯವನ್ನುಂಟುಮಾಡುವವನು ನೀನೇ, ಅವರನ್ನು ನಿರ್ಭಯರನ್ನಾಗಿ ಮಾಡುವವನೂ ನೀನೇ(ಭಯಕೃತ್ -ಭಯನಾಶನಃ-ಶ್ರೀವಿಷ್ಣುಸಹಸ್ರನಾಮ) ಆದ್ದರಿಂದ ಸಂಕಟ ಪ್ರಸಂಗದಲ್ಲಿ ಅಧೈರ್ಯವುಂಟಾದಾಗ ನೀನು ನನ್ನ ಮನಸ್ಸಿನಲ್ಲಿ ಧೈರ್ಯ ತುಂಬಬೇಕೆಂದು ಸಂತ ತುಕಾರಾಮರು ಹೇಳುತ್ತಾರೆ. 🕉️ ಶ್ರೀಹರಿ ಸರ್ವೋತ್ತಮ ವಾಯು ಜೀವೋತ್ತಮ 🕉️ 🪷 ಜೈ ಜೈ ರಾಮಕೃಷ್ಣ ಹರಿ/ಶುಭೋದಯ 🪷 🌼 ದಿನಾಂಕ ೧೭/೧೨/೨೦೨೫ ಬುಧವಾರ 🌼 🙏ಈ ದಿನದ ಬೆಳಗಿನ ಕಾಕಡಾರತಿ ನಂತರದ🙏 🌷 ಭಗವಾನ್ ವಿಠ್ಠಲ ಹಾಗೂ ಭಗವತಿ ರುಗ್ಮೀಣಿ ಮಾತೆಯ ಶುಭ ದರ್ಶನ 🌷 💥ಭೂವೈಕುಂಠ ಸಂತರ ತವರುರೂ ಪಂಢರಪುರ 💥 🚩 ಅಪಾಯ ಕೋಟಿಗಳಿಗೆ ಉಪಾಯ ಒಂದೇ ಶ್ರೀಹರಿಯ ನಾಮಸ್ಮರಣೆ 🚩 💐 ಜೈ ಶ್ರೀ ರಾಮ್ 💐 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏