#ಚಿತ್ರಕ್ಕೊಂದು_ಬರಹ
#ಹಂಬಲ....
ನಿನ್ನ ಪ್ರೀತಿಯಿಂದಲೇ
ನೋವೆಲ್ಲಾ ಮಾಯವಾಗಿದೆ;
ಈ ತನು-ಮನ ನಿನ್ನದೇ
ಶರಣಾಗತಿಯಿಂದ ಮನವು ಹಾಯಾಗಿದೆ....
ಹಸಿವಿಲ್ಲ, ದಣಿವಿಲ್ಲ
ನಿನ್ನ ನೆನೆದರೆ;
ನಿನ್ನ ಸೇರುವ ಬಯಕೆಯೊಂದೇ
ಮನದಲಿ ತೀರದ ದಾಹವಾಗಿದೆ....
ಎಷ್ಟು ಕೂಗಿದರು ಕೇಳಿಸದೇ ನಿನಗೆ
ನಿನ್ನ ಪ್ರೀತಿಯ ಬಯಸಿಹೆನು;
ಇಂದೋ! ನಾಳೆಯೋ ! ಬರುವಿಯೆಂಬ
ಹಂಬಲವೊಂದೆ ಈ ಜೀವಕೆ....
ಬಾ,ಬಾ ನಿನ್ನ ಕಾಣಬೇಕೆಂಬ ಹಂಬಲವೊಂದೆ
ಒಮ್ಮೆ ಮುಖತೋರು ಬಾ...
ಇಷ್ಟುಕಾಲ ಸತಾಯಿಸಿದ್ದು ಸಾಕು
ಈ ಜೀವ ಹೋಗುವ ಮುನ್ನ
ಒಮ್ಮೆ ನನ್ನ ಸಂತೈಸು,
ಈ ಸಂಘರ್ಷವ ಕೊನೆಗೊಳಿಸು ಬಾ ....!!
#ರಾಧಾಕೃಷ್ಣ ❤️
#ಶುಭರಾತ್ರಿ 😴💤💤
#💓ಮನದಾಳದ ಮಾತು #📝ನನ್ನ ಕವಿತೆಗಳು #🖋️ ನನ್ನ ಬರಹ #📜ಕವಿತೆ #😍 ನನ್ನ ಸ್ಟೇಟಸ್