ಅನಾಮಿಕ
639 views
6 days ago
ಕಬಡ್ಡಿ : ಪುತ್ತೂರಿನ ಯುವಕ ಅದೀಶ್ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಂಧ್ರಪ್ರದೇಶದಲ್ಲಿ ಜನವರಿ 15 ರಂದು ನಡೆಯಲಿರುವ ಜ್ಯೂನಿಯ‌ರ್ ವಿಭಾಗ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ತಾಲೂಕಿನ ಕುಂಬ್ರದ ಯುವಕ ಅದೀಶ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು, ಪ್ರಸ್ತುತ ಇವರು ಮಂಗಳೂರಿನ ತೃಷಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಆಗಿದ್ದು, ತನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಶಕ್ತಿ ಕಾಲೇಜ್‌ನಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೂ ಮತ್ತು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ವಿದ್ಯಾರ್ಥಿಯಾಗಿದ್ದಾರೆ. ಕೋಡಿಂಬಾಡಿ ಬರೆಮೇಲು ದಿನೇಶ್ ಶೆಟ್ಟಿ ಮತ್ತು ಕೆದಂಬಾಡಿಗುತ್ತು ಶ್ರೀಮತಿ ಆಶಾ ದಿನೇಶ್ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಇವರು ಪ್ರಸ್ತುತ ಕುಂಬ್ರ ಬಡೆಕ್ಕೋಡಿ ನಿವಾಸಿಯಾಗಿದ್ದಾರೆ. #👑 ನನ್ನರಸಿ ರಾಧೆ 😍 #📺 ಟಿವಿ ಸೀರಿಯಲ್ ಸ್ಟೇಟಸ್ 😍 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #SCTV ಕನ್ನಡ #😎ಡಿ ಬಾಸ್