#😏ಇದೇ ಪ್ರಪಂಚ ಶ್ರೀ ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಭಗವದ್ಗೀತೆ, ಉಪನಿಷತ್ತು, ಬ್ರಹ್ಮ ಸೂತ್ರಗಳಿಂದ ಬ್ರಹ್ಮಾಂಡದ ಮೂಲವಾದ ಒಬ್ಬ ಪರಮಾತ್ಮನ ಬಗ್ಗೆ ಬೋಧಿಸಿದಾಗ ಜನರಿಗೆ ದೇವರ ಬಗ್ಗೆ ಏಕೆ ಗೊಂದಲವಿದೆ?
ಅಲೋವೆರಾದಲ್ಲಿ ಇರುವ ಪೌಷ್ಟಿಕ ಅಂಶಗಳು ಯಾವವು?
ನೀವು ದೊಡ್ಡ ಠೇವಣಿ ಮಾಡಿದಾಗ ಬ್ಯಾಂಕುಗಳು ನಿಮ್ಮನ್ನು ವಿಭಿನ್ನವಾಗಿ ಪರಿಗಣಿಸುತ್ತವೆಯೇ?
ಮೃತ್ಯು ಹೊಂದಿದ ಮಾನವನ ಆತ್ಮ ಪುನರ್ಜನ್ಮ ಹೊಂದುವುದು ಅನ್ನುವದಾದರೆ ಪಿತೃಪಕ್ಷದಂದು ಏಕೆ ಆತ್ಮಗಳಿಗೆ ಪೂಜೆ ಮಾಡುತ್ತರೆ ಮತ್ತು ಪುನರ್ಜನ್ಮ ಹೊಂದಿದ ಆತ್ಮವು ಆ ದಿನ ಬರುವುದು ಹೇಗೆ ಸಾಧ್ಯ?
BXO ಸಮಸ್ಯೆ ಅಪಾಯವೇ?
ದೇವರ ಅಸ್ತಿತ್ವದ ಪುರಾವೆಗಳ ಅವಶ್ಯಕತೆಯಿಂದ ಮುಳುಗಿರುವವರು, ವಿಜ್ಞಾನವು ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಬಹುದಾದರೂ, ಅನೇಕರು ಸೃಷ್ಟಿ ಮತ್ತು ದೇವರ ಅಸ್ತಿತ್ವದ ಬಗ್ಗೆ ನಂಬಲಾಗದವರಾಗಿಯೇ ಇರುತ್ತಾರೆ, ನೀವು ಒಪ್ಪುವುದಿಲ್ಲವೇ?
ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವಷ್ಟು ಸರ್ವಜ್ಞರು ನಾವಲ್ಲ ನಾವಂತು ಇಂತವರ ಪ್ರಶ್ನೆಯನ್ನು ಕಸದಬುಟ್ಟಿಗೆ ಹಾಕುವವರು. ವಿಜ್ಞಾನವು ಎಷ್ಟೆ ಮುಂದುವರಿದರು ಮಣ್ಣಿನಿಂದಾಗಲಿ ಇಥವಾ ಇನ್ಯಾವುದೆ ವಸ್ತುವಿನಿಂದ ಎಲ್ಲರೀತಿಯ ಜೀವಿಗಳನ್ನು ಸೃಷ್ಟಿಸುವುದು ಅಸಾಧ್ಯ ದೇವರು ಸೃಷ್ಟಿಸಿದಂತೆ ತದ್ರೂಪವನ್ನು ಸೃಷ್ಟಿಸಿದರು ಅದರಲ್ಲಿ ದೇವರು ಸೃಷ್ಟಿಸಿದ ಮನುಷ್ಯನ ರೂಪಕ್ಕೆ ಬುದ್ದಿಮತ್ತೆಗೆ ಕಾರ್ಯವಿಧಾನಕ್ಕೆ ಸಮನಾಗಲಾರವು ಯಂತ್ರಗಳಾಗಲಿ ಮಣ್ಣಿನ ಮುದ್ದೆಯಾಗಲಿ ತಮ್ಮ ಸಂಕುಲವನ್ನು ವೃದ್ದೀಮಾಡುವ ಕೆಲಸ ಅದರಿಂದ ಆಗದು ಅದು ದೇವರು ಸೃಷ್ಟಿಸಿದ ಜೀವಿಗಳಲ್ಲಿ ಮಾತ್ರ ಮುಂದುವರೆಯುವಂತಾದ್ದು. ಇಷ್ಟೆಲ್ಲಾ ಪುರಾವೆ ಇದ್ದರು ಮನುಷ್ಯ ದೇವರನ್ನು ನಂಬದೆ ಕುಚೋದ್ಯದ ಪ್ರಶ್ನೆ ಕೇಳುವುದು ಮೋರ್ಖತನವೋ ಅಹಂಕಾರವೊ ಅನುಮಾನವೋ ಅಥವಾ ಅಪನಂಬಿಕೆಯೋ ಗೊತ್ತಿಲ್ಲ
ನಾವು ಕೆಲವು ವಿಮೆಗಳಿಗೆ ಕಟ್ಟಿದ ಹಣವನ್ನು ನಾವು ಎಂದಿಗೂ ಹಿಂದೆ ಕೇಳುವುದಿಲ್ಲ. ಆಗ ಆ ಹಣ ಎಲ್ಲಿಗೆ ಹೋಗುತ್ತದೆ? ಉದಾಹರಣೆಗೆ: ವಾಹನ ವಿಮೆ
ಗುಡ್ ಡೌಟ್.. ನಾವು ಹಲವಾರು ರೀತಿಯ ವಿಮೆ ಮಾಡುತ್ತೇವೆ. ಆದರೆ ದೇವರ ದಯೆಯಿಂದ ದಿನಗಳು ಯಾವುದೇ ಅಪಾಯವಿಲ್ಲದೆ ಕಳೆಯಲಿ ಎಂದು ಪ್ರಾರ್ಥಿಸುತ್ತೇವೆ. ಇದು ಸಹ ಸಂಭವಿಸುತ್ತದೆ. ಆದರೆ ತುರ್ತು ಸಮಯದಲ್ಲಿ ನಮಗೆ ಸಹಾಯ ಮಾಡುವ ವಿಮೆಯನ್ನು ನಾವು ಮೊದಲು ನಂಬುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಆಯಾ ವಿಮಾ ಕಂಪನಿ ಪರಿಹಾರ ನೀಡಲಿದೆ. ಇದು ನಮಗೆ ಗೊತ್ತು. ಏನೂ ಆಗದಿದ್ದರೆ ಏನು? ನಾವು ಕಟ್ಟುವ ವಿಮಾ ಕಂತು ಏನಾಗುತ್ತದೆ... ಇದನ್ನು ತಿಳಿಯುವ ಮೊದಲು ವಿಮಾ ಕಂಪನಿಯ ಪಾಲಿಸಿಗಳನ್ನು ಅರ್ಥಮಾಡಿಕೊಳ್ಳೋಣ.. ವಿಮಾ ಕಂಪನಿಯು ಪಾವತಿಸುವ ಹಣ ವಿಮಾ ಕಂಪನಿಗೆ ಸೇರಿಲ್ಲ. ನಮ್ಮದು.. ಅಂದರೆ ಹೇಗೆ? ಉದಾಹರಣೆಗೆ ಹತ್ತು ಮಂದಿಗೆ ವಿಮೆ ಇದೆ ಎಂದಿಟ್ಟುಕೊಳ್ಳೋಣ.. ಅವರಲ್ಲಿ ಒಬ್ಬರಿಗೆ ಪರಿಹಾರ ನೀಡಬೇಕಾದರೆ ಉಳಿದ ಒಂಬತ್ತು ಮಂದಿಗೆ ಪರಿಹಾರ ನೀಡಲಾಗುವುದು. ಏಕೆಂದರೆ ನಾವು ಕಟ್ಟುವ ಪ್ರೀಮಿಯಂಗಿಂತ ನಮಗೆ ಸಿಗುವ ವಿಮೆ ಪರಿಹಾರವೇ ಹೆಚ್ಚು. ಇದೆಲ್ಲವನ್ನೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDIA) ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ. ಆದ್ದರಿಂದ ನಾವು ಕಳೆದುಕೊಳ್ಳುವ ಯಾವುದೇ ಅವಕಾಶವಿಲ್ಲ. ಸರಿ ನಿಮ್ಮ ಉತ್ತರ ಸಿಕ್ಕಿದೆ. ಇಲ್ಲಿ ಇನ್ನೊಂದು ಅನುಮಾನವಿದೆ. ಎಲ್ಲರಿಗೂ ಒಂದೇ ಬಾರಿ ಪರಿಹಾರ ನೀಡಬೇಕಾದರೆ? ಭೂಕಂಪಗಳು ಮತ್ತು ಅಗ್ನಿ ಅವಘಡಗಳಂತಹ ಸಾಮೂಹಿಕ ವಿಪತ್ತುಗಳ ಸಂದರ್ಭದಲ್ಲಿ, ವಿದೇಶಿ ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡುವ ಮೊದಲು ವಿಮಾ ಕಂಪನಿಯು ಜಾಗರೂಕರಾಗಿರುತ್ತದೆ. ಉದಾಹರಣೆಗೆ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿಯು ಪ್ಯಾರಿಬಸ್ ಕಂಪನಿಯೊಂದಿಗೆ ಈ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.. ಈ ಮಟ್ಟಿಗೆ, ಅದು ಪಡೆಯುವ ಪ್ರೀಮಿಯಂನ ಭಾಗವನ್ನು ಆ ಕಂಪನಿಗೆ ಪಾವತಿಸುತ್ತದೆ.. ಮತ್ತು ನಮ್ಮ ಸಾರ್ವಜನಿಕ ವಲಯದ ಎಲ್‌ಐಸಿಗೆ ಕೇಂದ್ರ ಸರ್ಕಾರವು ಖಾತರಿ ನೀಡುತ್ತದೆ... . ಧನ್ಯವಾದ.
ಜೀವನದ ಕೆಲವು ಕಟು ಸತ್ಯಗಳು ಯಾವುವು?
ಜೀವನದಲ್ಲಿ ಕಟುಸತ್ಯಗಳು ಅಥವಾ ಕಠಿಣ ಸತ್ಯಗಳು ಹಲವಾರು ಇರಬಹುದು. ಇವು ವ್ಯಕ್ತಿಗಳಿಗೆ ಅನುಭವಿಸಬಹುದಾದ ಕಠಿಣ ಸತ್ಯಗಳಾಗಿವೆ:
1. ಮರಣ: ಸತ್ಯಾಂಶವೇನೆಂದರೆ ನಾವು ಎಂದೆಂದಿಗೂ ಬದುಕುತ್ತಿರುವುದೆಂದಲ್ಲ. ನಮ್ಮಲ್ಲಿ ಒಂದು ದಿನ ಬದುಕುವ ಕೊನೆಯ ಸಮಯವನ್ನು ಅನುಭವಿಸಬೇಕು.
2. ಸಹನಶೀಲತೆ: ಸಮಸ್ಯೆಗಳು ಮತ್ತು ಕಠಿಣತೆಗಳು ನಮ್ಮ ಜೀವನದ ಒಂದು ಅವಶ್ಯಕ ಭಾಗವಾಗಿವೆ. ನಾವು ಅವುಗಳನ್ನು ಸಹನೆಯಿಂದ ಎದುರಿಸಬೇಕಾಗುತ್ತದೆ.
3. ಸಹಜವಾದ ಬದಲಾವಣೆ: ಬದಲಾವಣೆ ಜೀವನದ ಸ್ವಭಾವವಾಗಿದೆ. ಯಾವುದೇ ಸ್ಥಿತಿ ಅಥವಾ ಸ್ಥಿತಿ ಸ್ಥಿತಿಗೆ ಬದಲಾಗುತ್ತದೆ.
4. ಸ್ವಾರ್ಥತೆ ಮತ್ತು ಅಸತ್ಯ: ಸತ್ಯವನ್ನು ಮರೆಯುವುದು ಮತ್ತು ಸ್ವಾರ್ಥತೆ ಅಥವ ಮಿಥ್ಯಾಪ್ರಮಾಣಗಳನ್ನು ಅನುಸರಿಸುವುದು ನಮ್ಮ ಜೀವನಕ್ಕೆ ಕಟುಸತ್ಯಗಳಾಗಬಹುದು.
5. ಸಂಕಟ ಮತ್ತು ದುಃಖ: ಜೀವನದಲ್ಲಿ ಸಂಕಟ ಮತ್ತು ದುಃಖಗಳು ಅನಿವಾರ್ಯ ಭಾಗಗಳು. ಇವು ಎದುರಿಸುವುದು ಮತ್ತು ಅವುಗಳಿಂದ ಪಾಠ ಕಲಿಯುವುದು ಆವಶ್ಯಕ.
6. ಮೃತ್ಯುವಿಗೆ ಸಿದ್ಧನಾಗುವುದು: ಜೀವನದಲ್ಲಿ ಯಾವುದೇ ಸಮಯದಲ್ಲಿ ಮೃತ್ಯು ನಮಗೆ ಕರಾರುವಾಗಬಹುದು. ಇದು ಅನಿವಾರ್ಯ ಸತ್ಯ.
7. ನಿಷ್ಕಳಂಕ ಸ್ನೇಹ: ಎಲ್ಲ ಸ್ಥಿತಿಗಳಲ್ಲಿಯೂ ನಿಷ್ಕಳಂಕ ಸ್ನೇಹವು ಕಠಿಣ ಸತ್ಯವಾಗಬಹುದು. ಸ್ನೇಹವು ತಲುಪುವುದು ಮತ್ತು ನಿಭಾನುಭವಿಸುವುದು ಕೂಡ ಅತ್ಯಂತ ಪ್ರಮುಖ.
ಭಗವದ್ಗೀತೆ, ರಾಮಾಯಣ ಎಲ್ಲಾ ಸುಳ್ಳು ಎನ್ನುವ ಬುದ್ಧಿಜೀವಿಗಳು, ಕುರಾನ್, ಬೈಬಲ್ ಸುಳ್ಳು ಎಂದೇಕೆ ಹೇಳುವುದಿಲ್ಲ?
ಈ ಪ್ರಶ್ನೆಗೆ ಬುದ್ದಿ ಜೀವಿಗಳು ಕುರಾನ್ ಮತ್ತು ಬೈಬಲ್ ಸುಳ್ಳು ಎಂದು ಹೇಳಿಕೆ ಕೊಡಬೇಕೇ? ಕೇವಲ ಒಂದು ವರ್ಗದವರನ್ನು ತೃಪ್ತಿ ಪಡಿಸಬೇಕೇ?
ಬುದ್ದಿಜೀವಿಗಳು ವಿಷಯವನ್ನು ತಾರ್ಕಿಕವಾಗಿ ಆಲೋಚಿಸುತ್ತಾರೆ. ಸಾಕ್ಷ್ಯಾಧಾರಗಳನ್ನು ನೋಡುತ್ತಾರೆ. 2000 ವರ್ಷದಷ್ಟು ಹಳೆಯ ಧರ್ಮ ಗ್ರಂಥಗಳು ಮೂಲ ಪ್ರತಿಗಳ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ರಾಮಾಯಣ, ಮಹಾಭಾರತ,ಭಗವತ್ಗೀತೆ ಸತ್ಯವಿರಬಹುದು! 4000 ವರ್ಷ ಹಳೆಯವು! ಸಾಕ್ಷಿಯ ಕೊರತೆ ಇದೆ. ಸಾಕ್ಷ್ಯಗಳು ಸಿಕ್ಕಿದರೆ ಅವರ ಆಲೋಚನೆಗಳು ಬದಲಾಗಿ ಒಪ್ಪಿಕೊಳ್ಳುತ್ತಾರೆ. ದೊರೆತಿರುವ ಮೂಲ ಪ್ರತಿಗಳನ್ನು ಮ್ಯೂಸಿಯಂ ನಲ್ಲಿ ಇಡಿ.
ಇಂದಿನ ಕಂಪ್ಯೂಟರ್ ಯುಗದಲ್ಲಿ ನೀವು ನಾವೆಲ್ಲರೂ ಬುದ್ದಿ ಜೀವಿಗಳಿಗಿಂತ ಹೆಚ್ಚಾಗಿದ್ದೇವೆ. ತಾರ್ಕಿಕವಾಗಿ ಯೋಚಿಸುತ್ತಿಲ್ಲ!
ನಾನು ಮಹಾಭಾರತವನ್ನು ನಂಬುತ್ತೇನೆ ಹಾಗೆಯೇ ಮಸ್ಕಿ ಶಾಸನವನ್ನು ನಂಬುತ್ತೇನೆ. ಮಸ್ಕಿ ಶಾಸನ 2200 ವರ್ಷ ಹಳೆಯದು ಹಾಗೆಯೇ ಮಹಾಭಾರತ 3000 ದಿಂದ 4000 ಹಳೆಯದು.
ಇತಿಹಾಸ ತಜ್ಞರು ಮತ್ತು ಬುದ್ದಿಜೀವಿಗಳು ಶಾಸನವನ್ನು ನೋಡುವ ದೃಷ್ಟಿಕೋನವೇ ಬೇರೆ. ಕೆತ್ತನೆಯಲ್ಲಿನ ಪ್ರತಿಯೊಂದು ವಿಚಾರವನ್ನು ತಾರ್ಕಿಕವಾಗಿ ನೋಡುತ್ತಾರೆ.
ಪ್ರತಿಯೊಂದು ಧರ್ಮಗ್ರಂಥಗಳಲ್ಲೂ ನ್ಯೂನತೆಗಳಿರುತ್ತವೆ ಕಾಲದಿಂದ ಕಾಲಕ್ಕೆ ಬದಲಾಗುವ ಯುವ ಸಮೂಹವು ಓದಿ ಗ್ರಹಿಸುವ ಮನಃಸ್ಥಿತಿಯ ಮೇಲೆ ತೂಗಬಹುದು.
ಪ್ರಶ್ನೆಯನ್ನು ಕೇಳುವ ನಾವು ಹೆಚ್ಚೆಂದರೆ ಜೀವನದಲ್ಲಿ ನಾಲ್ಕಾರು ಸಾವಿರ ಜನರೊಡನೆ ಬೆರೆತು ವಿಷಯಗಳ ಪ್ರಸ್ತಾಪ ಮಾಡಿರಬಹುದು. ಬುದ್ದಿಜೀವಿಗಳು/ರಾಜಕಾರಣಿಗಳು ಲಕ್ಷಾಂತರ ಜನರ, ನುರಿತ, ಪರಿಣಿತರ, ತಂತ್ರಜ್ಞಾನಿಗಳೊಡನೆ ಬೆರೆತು ವಿಷಯಗಳನ್ನು ಹಂಚಿಕೊಂಡಿರುತ್ತಾರೆ. ಸಮಾಜಕ್ಕೆ ಯಾವುದನ್ನು ಹೇಗೆ ಹೇಳೆಬೇಕು ಎಂಬುದು ಅರ್ಥ ಮಾಡಿಕೊಂಡಿರುತ್ತಾರೆ. ಇಲ್ಲದಿದ್ದರೆ ಸಮನ್ವಯದ ಕೊರತೆ ಎದುರಾಗಿ ರಾಜ್ಯಗಳು ದೇಶಗಳಾಗಿ ಛಿದ್ರವಾಗುತಿತ್ತು ಎಂದು ನನ್ನ ಅನಿಸಿಕೆ.
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಜನರು ಇನ್ನೂ ಮೌಢ್ಯತೆಯಲ್ಲಿ ಜೀವಿಸುತ್ತಿರುವರು ಎಂದು ಅನಿಸುವುದಿಲ್ಲವೇ?
ಬೇರೆಯವರ ಮನೆಯಲ್ಲಿ ಅಥವಾ ಹೊರಗಡೆ ಸಿಗುವ ಊಟ ಏನಾದರೂ ಮಾಡಿದರೆ ಅದರ ಅನ್ನದ ಋಣ ನಮ್ಮ ಮೇಲೆ ಇರುತ್ತದೆಯೇ ದಯವಿಟ್ಟು ಇದರ ಬಗ್ಗೆ ತಿಳಿಸಿಕೊಡಿ ನಮ್ಮ ಅಮ್ಮ ಅವಾಗವಾಗ ಹೇಳಿ ತಿನ್ನಬೇಡ ಎಂದು ಬೈಯುತ್ತಿರುತ್ತಾರೆ? ತಿಳಿದಿರುವವರು ಹೇಳಿ ಅಸಭ್ಯ ಬರಹ ಬೇಡ
ಮನುಷ್ಯನ ಚಿಂತೆಯನ್ನು ಹೇಗೆ ತೆಗೆದುಹಾಕಬಹುದು?
ಮನಸ್ಸು ನೆಮ್ಮದಿಯಿ೦ದಿರಲು ಕೆಲವೊ೦ದು ಸಲಹೆಗಳು
ಘೋರವಾದ ಕೆಟ್ಟ ಕೆಲಸಗಳನ್ನು ಮಾಡಿದವರನ್ನು ತೀವ್ರವಾಗಿ ಖ೦ಡಿಸಬೇಕು ಎ೦ಬ ಭಾವನೆ ಹೊ೦ದಿರುವುದು.
ಆದರೆ ಇ೦ಥಹ ಕೆಟ್ಟ ಕೆಲಸಗಳನ್ನು ಅಪಸಾಮಾನ್ಯತೆಯಿ೦ದ ಅರಿಯದೆ ಮಾಡಿರುತ್ತಾರೆ ಅ೦ಥಹವನು ನಾವು ಬದಲಿಸಲು ಪ್ರಯತ್ನಿಸಬೇಕು.
ನಾವು ಅ೦ದುಕೊ೦ಡ೦ತೆ ಕೆಲಸಗಳು ಆಗದಿರುವುದು ಬಹಳ ಘೋರವಾದುದು ಎ೦ದುಕೊಳ್ಳುವುದು.
ಇದಕ್ಕೆ ಬದಲಾಗಿ ಕೆಟ್ಟ ಸ್ಥಿತಿಗಳ ಬಗೆಗೆ ನಾವು ನಿಯ೦ತ್ರಣ ಹೊ೦ದಬೇಕು. ಅಥವಾ ಗುರಿಯನ್ನು ಬದಲಿಸಿ ನಮ್ಮ ಸಾಮರ್ಥ್ಯಕ್ಕನುಗುಣವಾದ ಗುರಿಯನ್ನಿಟ್ಟುಕೊ೦ಡು ಸ೦ತ್ರಪ್ತಿ ಪಡೆಯಬೇಕು.
ಮನುಷ್ಯನಿಗೆ ಬರುವ ಕಷ್ಟಗಳು ಹೊರಗಿನ ಜನರಿ೦ದ ಮತ್ತು ಬಾಹ್ಯ ಘಟನೆಗಳಿ೦ದ ಬಲವ೦ತವಾಗಿ ಬರುತ್ತವೆ೦ಬ ಭಾವನೆ ಬೆಳೆಸಿಕೊ೦ಡಿರುವುದು.
ಬದಲಾಗಿ ದುರದ್ರುಷ್ಟ ಸ್ಥಿತಿಗಳನ್ನು ನಾವು ಕೈಗೊ೦ಡಿರುವುದರಿ೦ದ ಕಷ್ಟಗಳು ಬ೦ದಿವೆಯೆ೦ದು ಅರಿಯಬೇಕು.
ಏನೋ ಕೆಟ್ಟದ್ದಾಗಿರುವುದರಿ೦ದ ನಮಗೆ ಎಲ್ಲವೂ ತಲೆಕೆಳಗಾಗುತ್ತಿವೆ ಎ೦ಬ ಭಾವನೆ ಹೊ೦ದಿರುತ್ತೇವೆ.
ಬದಲಾಗಿ ಕಷ್ಟದ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸಬೇಕು ಸಾಧ್ಯವಿಲ್ಲದಿದ್ದರೆ ಇರುವುದನ್ನೇ ಒಪ್ಪಿಕೊಳ್ಳಬೇಕು.
ಜೀವನದ ಕಷ್ಟ-ದಾರ್ಪಣ್ಯಕ್ಕಾಗಿ ಮತ್ತು ಸ್ವಯ೦ ಜವಾಬ್ದಾರಿಗಳಿ೦ದ ದೂರವಿರುವುದು ಸುಲಭವಾದುದು ಎ೦ಬ ಭಾವನೆ ಬೆಳೆಸಿಕೊಳ್ಳುವುದು
ಬದಲಾಗಿ ಆದರೆ ಇದು ದೀರ್ಘಕಾಲದಲ್ಲಿ ವ್ಯಕ್ತಿಗೆ ತೊ೦ದರೆಯನ್ನು೦ಟು ಮಾಡುತ್ತದೆ.
ನಮಗಿ೦ತಲೂ ಬಲವಾದುದು ಅಥವಾ ದೊಡ್ಡದಿದೆ ಅದನ್ನು ನಾವು ಎಲ್ಲದಕ್ಕೂ ಅವಲ೦ಬಿಸಬೇಕು ಎ೦ಬ ಭಾವನೆ
ಇದಕ್ಕೆ ಬದಲಾಗಿ ಸರಿಯಾದ ಆಲೋಚನೆಯಿ೦ದ ಸ್ವತ೦ತ್ರವಾಗಿರುವುದನ್ನು ಕಲಿಯಬೇಕು.
ಎಲ್ಲಾ ವಿಷಯಗಳಲ್ಲೂ ನಾವು ದಕ್ಷರಾಗಿರಬೇಕು, ಬುದ್ಢಿವ೦ತರಗಿರಬೇಕು ಮತ್ತು ಸಾಧಕರಾಗಿರಬೇಕು ಎ೦ದು ತಿಳಿಯುವುದು.
ಇದಕ್ಕೆ ಬದಲಾಗಿ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಸಾಧಿಸುತ್ತಿದ್ದೇವೆ ಎ೦ಬ ಅರಿವನ್ನು ಬೆಳೆಸಿಕೊಳ್ಳಬೇಕು.
ಏನೋ ಒ೦ದು ಆಗಬಾರದ್ದು ಆಗಿದೆ ಅದುದರಿ೦ದ ಇದು ಜೀವನಪೂರ್ತಿ ನನಗೆ ತೊ೦ದರೆಯು೦ಟು ಮಾಡುತ್ತಿದೆ ಎ೦ಬ ಭಾವನೆ ಬೆಳೆಸಿಕೊಳ್ಳುವುದು.
ಬದಲಾಗಿ ಪೂರ್ವಾನುಭಗಳಿ೦ದ ಕಲಿತಿದ್ದೇ ಆದರೆ ಮತ್ತು ಅರ್ಥ ಪೂರ್ವಾಗ್ರಹಗಳಿ೦ದ ಕೂಡಿರುವುದನ್ನು ಕಲಿಯಬೇಕು.
ನಾವು ಘಟನೆಗಳ ಮೇಲೆ ಸ್ಪಷ್ಟವಾದ ನಿಯ೦ತ್ರಣ ಹೊ೦ದಿರಬೇಕು ಎ೦ಬ ಭಾವನೆ ಹೊ೦ದಿರವುದು.
ಬದಲಾಗಿ ಪ್ರಪ೦ಚದಲ್ಲಿ ಘಟನೆಗಳು ಸ೦ಭಾವ್ಯತೆ ಮತ್ತು ಅನಿರೀಕ್ಷಿತವಾಗಿ ನಡೆಯುತ್ತವೆಯಾದರೂ ಅದರಲ್ಲಿಯೇ ನಾವು ಆನ೦ದ ಪಡೆಯಬಹುದು ಎ೦ಬ ಅರಿವು ಬೆಳೆಸಿಕೊಳ್ಳಬೇಕು.
ನಾವು ಸುಮ್ಮನಿದ್ದರೆ ಎಲ್ಲವೂ ಸರಾಗವಾಗಿರುತ್ತದೆ ಮತ್ತು ಮನುಷ್ಯ ಸ೦ತೋಷದಿ೦ದಿರುತ್ತಾನೆ ಎ೦ಬ ಭಾವನೆ ಬೆಳೆಸಿಕೊಳ್ಳುವುದು
ಬದಲಾಗಿ ನೀವು ಕ್ರಿಯಾತ್ಮಕವಾಗಿ ಮಾಖ್ಯ ಕೆಲಸಗಳನ್ನು ಮಾಡಿದರೆ ನಮ್ಮನ್ನು ನಾವು ತೊಡಗಿಸಿಕೊ೦ಡರೆ ಸ೦ತೋಷದಿ೦ದಿರುತ್ತದೆ,
ನಮ್ಮ ಸ೦ವೇಗಗಳ ಮೇಲೆ ನಾವು ಯಾವುದೇ ನಿಯ೦ತ್ರಣ ಹೊ೦ದಿಲ್ಲ ನಮ್ಮ ಸ೦ವೇಗಗಳ ಗೊ೦ದಲಕ್ಕೆ ನಾವೇನೂ ಮಾಡಲೂ ಸಾಧ್ಯವಿಲ್ಲ ಎ೦ದು ತಿಳಿದಿರುವುದು ಬದಲಾಗಿ ನಮ್ಮ ಗೊ೦ದಲಭರಿತ ಸ೦ವೇಗಗಳ ಮೇಲೆ ನಿಯ೦ತ್ರಣ ಸಾಧಿಸಬಹುದು ಮತ್ತು ಒಳ್ಳೆಯ ಗುರಿಯನ್ನು ಆಯ್ಕೆ ಮಾಡಿಕೊ೦ಡು ನಮ್ಮನ್ನು ನಾವು ಸೂಕ್ತವಾಗಿ ತೊಡಗಿಸಿಕೊ೦ಡರೆ ಆನ೦ದ ಪಡೆಯಬಹುದು
ಜೀವನದ ಮುಖ್ಯ ಉದ್ದೇಶವೇನು?
ತುಂಬಾ ನಿಜವಾದ ಮಾತು ಇದನ್ನು ನೋಡಿ
ಜೀವನದ ಮುಖ್ಯ ಉದ್ದೇಶಗಳು ಮನುಷ್ಯರಲ್ಲಿ ಮನುಷ್ಯತ್ವ ಗುಣವನ್ನು ಬೆಳೆಸುವುದು. ದಿನಗಳಲ್ಲಿ ನಾವು ಎಷ್ಟೋ ಸಾಧನೆಗಳನ್ನು ಮಾಡುತ್ತೇವೆ. ಆದರೆ ಒಬ್ಬ ಮನುಷ್ಯನನ್ನು ನೋಡಿದಾಗ ಅವರ ಬಗ್ಗೆ ಮನುಷ್ಯತ್ವ ಅನ್ನೋದೇ ಕಳೆದು ಹೋಗಿದೆ. ನಮಗೆ ಜೀವನಕ್ಕೆ ಅನಿವಾರ್ಯವೇ ಆದ ಗಾಳಿ, ನೀರು ಯಾವುದರಿಂದ ಬರುತ್ತಿದೆ ಅಂತ ತಿಳಿದು ಮನುಷ್ಯ ನೀರನ್ನು ಪೋಲು ಮಾಡುತ್ತಾನೆ, ಅಂತರ್ಜಲ ನಾಶ ಮಾಡುತ್ತಾನೆ, ಪರಿಸರ ನಾಶ ಮಾಡುತ್ತಾನೆ. ನಿಜ ಅಂದ್ರೆ ಯೋಚನೆ ಮಾಡಿ " ಮನೆಗೊಂದು ಮರ ಊರಿಗೊಂದು ವನ" ಎಲ್ಲಿದೆ. ಈಗ ಮನೆ ಹತ್ತಿರ ಮರ ಇದ್ದರೆ ಅದು ಮನೆ ಕಟ್ಟಲು ತೊಂದರೆ ಆಗುತ್ತದೆ. ಎಲೆಯಿಂದ ಗೊಬ್ಬರವು ಸಹ ಪ್ಲಾಸ್ಟಿಕ್ ತರ ಕ್ಲೀನ್ ಸಿಟಿ ಆಗಿ ಆಗಿ ಮಾರ್ಪಟ್ಟಿದೆ.
ಎಲ್ಲರಿಗೂ ಗೊತ್ತು ಗಾಳಿ ಇಲ್ಲದೆ ಮನುಷ್ಯ ಬದುಕಲಾರ. ನೀರಿಲ್ಲದೆ ಬದುಕಲಾರ. ನಿದ್ದೆಯಿಲ್ಲದೆ ಬದುಕಲಾರ. ಆದರೆ ನೀರು ಎಷ್ಟು ಹಾಳು ಮಾಡುತ್ತಾರೆ. ಮರ ಬೆಳೆಸದೆ ನಾಶ ಮಾಡುತ್ತಾರೆ. ಮರ ಬೆಳೆಸದೇ ಗಾಳಿ ಸಿಗಲಾರದು. ಸಾಧನೆ ಅಂತ ಮನುಷ್ಯ ನಿದ್ದೆ ಇಲ್ಲದೆ ಕೆಲ್ಸ ಮಾಡುತ್ತಾನೆ. ಅದರಿಂದ ಎಷ್ಟು ಕೀರ್ತಿ ಪಡೆದರೆ ಏನು ಬಂತು ಆರೋಗ್ಯ ಇಲ್ಲದ ಮೇಲೆ. ಪ್ರತಿಯೊಬ್ಬರ ಜೀವನದ ಉದ್ದೇಶ ಮನುಷ್ಯತ್ವ ಗುಣವನ್ನು ಬೆಳೆಸುವುದಾಗಿರಲಿ. ಸ್ವಲ್ಪ ಯೋಚನೆ ಕಡೆ ಸಾಗಿದರೆ ಎಲ್ಲವೂ ಸಾಧ್ಯ ಎನ್ನುವ ಸಾಧನೆ ಮುಖ್ಯ ಎನ್ನುವ ಮಾತು ನೆನಪಿರಲಿ.
ಬೇರೆಯವರು ಮಾಡಲಿ ಎನ್ನುವ ಯೋಚನೆ ನಮ್ಮದಾಗಿರದೆ, ನಮ್ಮ ಜೀವನದ ಸಾಧನೆ ಏನು ಮಾಡಬೇಕು ಎಂದು ಯೋಚನೆ ಮಾಡುವ ಬದಲು ಭೂಮಿ ಉಳಿಸುವುದೇ ನಮ್ಮ ಯೋಚನೆ ಆಗಿರಬೇಕು ಎಂಬುದು ನನ್ನ ಯೋಚನೆ.
ಜೀವನದ ಮುಕ್ಯ ಉದ್ದೇಶವೇ ಮನುಷ್ಯತ್ವ ಗುಣ ಮತ್ತು ಭೂಮಿಯನ್ನು ಉಳಿಸುವುದು. ಹೇಳಿದರೆ ಹಲವಾರು ವಿಷಯಗಳಿವೆ. ಹೀಗೆ ಸ್ವಲ್ಪ ಸಮಯ ಯೋಚನೆ ಮಾಡಿ ನಿಮ್ಮ ಮುಂದೆ ನಡೆದ ಹಲವಾರು ಘಟನೆಗಳ ಯೋಚನೆಗಳು ಸಾಧ್ಯವಾಗಿ ಬರುತ್ತದೆ..
ಇದು ಯಾರ ಮೇಲೆ ದೂರು ಅಲ್ಲ. ಎಲ್ಲರ ಜೀವನದ ಉದ್ದೇಶ ಅಲ್ಲವೇ?
ಧನ್ಯವಾದಗಳು…..
ಅಂಬೇಡ್ಕರ್ ಬಗ್ಗೆ ಓಶೋನ ಅಭಿಪ್ರಾಯ ಏನಾಗಿತ್ತು?
ಉತ್ತಮವಾಗಿತ್ತು, ಅಂಬೇಡ್ಕರ್ ತನ್ನ ಇಡೀ ಜೀವನದಲ್ಲಿ ಅನುಭವಿಸಿದ ಎಷ್ಟೋ ನೋವುಗಳ ಕುರಿತು ಅನುಭವಿಸಿದ ಯಾತನೆಯನ್ನು ಒಂದು ಕ್ರಾಂತಿಯನ್ನಾಗಿಸಿದರು. ಚಿಕ್ಕ ವಯಸ್ಸಿನಲ್ಲೇ ಅವರು ಅದನ್ನು ಗಮನಿಸುತ್ತಾ ಬಂದರು, ಈ ಜಾತಿಯ ಭಾವನೆ ಕೇವಲ ನನ್ನ ಕುಟುಂಬಕ್ಕೆ ಮಾತ್ರ ಸೀಮಿತವೋ / ಇಡೀ ಸಮಾಜದ ನೋವೋ ಎಂಬುದನ್ನು ಅವರು ಅರಿಯ ತೊಡಗಿದರು. ಸಮಾಜದ ನೋವನ್ನ ತನ್ನ ನೋವನ್ನಾಗಿಸಿಕೊಂಡ ಮಹಾನ್ ವ್ಯಕ್ತಿ ಅವರಾದರು.
ಈ ಜನರು ಅದೆಷ್ಟು ಬೇಸತ್ತು ಹೋಗಿದ್ದರು ಎಂದರೆ, ಅವರಿಗೆ ನಾವು ಹುಟ್ಟಿರುವುದೇ ಹೀಗೆ, ಬದುಕಬೇಕಿರುವುದೇ ಹೀಗೆ, ಎಂಬಂತೆ ಮೌಡ್ಯತೆಯಲ್ಲಿ ಮುಳುಗಿ ಹೊಗಿದ್ದರು. ಇಂತವರಿಗಾಗಿ ನ್ಯಾಯ ದೊರಕಿಸಿಕೊಟ್ಟ ಮೇಲು ಸಮಾಜದ ಎತ್ತರದ ಸ್ಥಾನದ ವ್ಯಕ್ತಿಗಳು ಅದನ್ನು ಸಹಿಸದೆ ಮೇಲು ಕೀಳು ಎಂಬ ಭಾವನೆಯಲ್ಲಿ ಅವರನ್ನು ಕೀಳಾಗಿ ಕಾಣುವುದಲ್ಲದೆ, ಅಸಹ್ಯವಾಗಿ ನಡೆಸಿಕೊಂಡು ಬಂದದ್ದು, ಅಂಬೇಡ್ಕರ್ ಮನಸ್ಸಿನಲ್ಲಿ ಬೇರೆಯ ಭಾವನೆಯನ್ನೇ ಸೃಷ್ಟಿಸಿತು. ಈ ದೇಶದ ಜನರ ಮನಸ್ಥಿತಿ ಸಂಪ್ರದಾಯ, ಜಾತಿ, ಧರ್ಮ, ಮೇಲು ಕೀಳಿನ ಭಾವನೆ ಅಷ್ಟು ಸುಲಭವಾಗಿ ಹೋಗಲಾರದು ಮತ್ತದು ತೊಲಗಲು ಬಹಳಷ್ಟು ಬುದ್ದಿವಂತಿಕೆ, ಅರ್ಹತೆ ಬೇಕಾಗುತ್ತದೆ ಎಂಬುದನ್ನು ಅವರು ಅರಿತರು, ಈ ಕಾರಣದಿಂದಾಗಿ -
ತನ್ನ ಇಡೀ ಬದುಕಿನಲ್ಲಿ ಅವರು ತೆಗೆದು ಕೊಂಡ ನಿರ್ಧಾರ ಮತ್ತೆ ಎಂದಿಗೂ ಹಿಂದೂ ಧರ್ಮದಲ್ಲಿ ಜನಸಲಾರೆ, ಮುಂದಿನ ಜನ್ಮವಿದ್ದರೆ ಅದು ಬೌದ್ಧ ಧರ್ಮದಲ್ಲಿ ಮಾತ್ರ ಎಂದರು. ಕಾರಣ ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿ, ಬ್ರಾಹ್ಮಣ ಕ್ಷತ್ರಿಯ ವೈಶ್ಯ ಕ್ಷೂದ್ರ ವೆಂಬ ಪದ್ದತಿಗಳು. ಅದು ಇಂದಿಗೂ ಹಾಗೆ ಇದೆ ಬದಲಾವಣೆ ಎಲ್ಲಾಗಿದೆ.!?. ಜಾತಿಯ ಹೆಸರಿನಲ್ಲಿ ಕಚ್ಚಾಡುವರು, ದೊಂಬಿ ಗಲಾಟೆ ಮಾಡುವವರು, ನಿರಂತರ ಇದ್ದೇ ಇರುತ್ತಾರೆ. ಇವರಿಗೆ ರಾಜಕೀಯವಾಗಿ ಕುಮ್ಮಕ್ಕು ಬೇರೆ .! ಎಲ್ಲವೂ ನಮ್ಮ ಮೌಡ್ಯತೆ. ಇದನ್ನೇ ನಾನು ಓದಿದ್ದು.
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು?
ಬಾಣಂತಿಯರಿಗೆ ಯಾವ ಆಹಾರ ಕೊಟ್ಟರೆ ಹೊಳ್ಳೆಯದು?
ಭಾರತದಲ್ಲಿ ದೇವರ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವವರು ಯಾರು ಯಾರು?
ನನ್ನ ಪ್ರಕಾರ ದೇವರು ಇದ್ದರೆ ಇರಬಹುದು. ದೇವಾಲಯಗಳಲ್ಲಂತೂ ಇರುವುದಿಲ್ಲ. ದೇವಾಲಯಗಳು ಕಡಿಮೆ ಲಾಗತ್ತು ಹಾಕಿ ಅತಿ ಹೆಚ್ಚು ಲಾಭ ಪಡೆಯುವ ಅಂಗಡಿಗಳು.
ಜನರು ದೂರದ ಊರುಗಳಿಂದ ಕಷ್ಟಪಟ್ಟು ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದೇವಾಲಯಕ್ಕೆ ಪ್ರವೇಶ ಮಾಡಿ ದೇವರ(ಮೂರ್ತಿಯ) ಮುಂದೆ ಬಂದಾಗ ನಡೀರಿ ನಡೀರಿ ಎಂದು ಹೊರಗೆ ಅಟ್ಟುತ್ತಾರೆ. ಕೆಲವು ದೇವಾಲಯಗಳಲ್ಲಿ ಗರ್ಭಗುಡಿಯಲ್ಲಿ ಬೆಳಕೂ ಇರುವುದಿಲ್ಲ. ಮೂರ್ತಿಯೂ ಸರಿಯಾಗಿ ಕಾಣಿಸುವುದಿಲ್ಲ.
ದೊಡ್ಡ ದೊಡ್ಡ ಪ್ರಸಿದ್ಧ ದೇವಾಲಯಗಳಲ್ಲಿ ಹೆಚ್ಚು ಜನರು ಬಂದರಂತೂ ದೇವರ ದರ್ಶನ ಬೇಗ ಮಾಡಿಕೊಳ್ಳಿ ಎಂದು ನೂರೋ ಇನ್ನೂರೋ ರೂಪಾಯಿಯ ಟಿಕೆಟ್ ಮಾರುತ್ತಾರೆ. ಅಂತಹವರ ಕ್ಯೂ ಬೇರೆ ಇರುತ್ತದೆ. 800 ರೂಪಾಯಿ ಕೊಟ್ಟರೆ ಸೀದಾ ಗರ್ಭಗುಡಿಯವರೆಗೆ ಕರೆದುಕೊಂಡು ಹೋಗುತ್ತಾರೆ.
ಇದಲ್ಲದೆ ಆ ಸೇವೆ ಈ ಸೇವೆ ಅಂತ ಹೇಳಿ ತರಹತರಹದ ಟಿಕೆಟ್ ಮಾರುತ್ತಾರೆ.
ಒಂದು ವಿಗ್ರಹ ಫೇಮಸ್ ಆದರೆ ಕೋಟಿಗಟ್ಟಲೆ ಸಂಪಾದಿಸುತ್ತದೆ. ಫೇಮಸ್ ಆಗದಿದ್ದರೆ ಅದರ ಹತ್ತಿರ ಯಾರೂ ಸುಳಿಯುವುದಿಲ್ಲ.
ವಿಗ್ರಹ ತೋರಿಸಿ ದೇವರ ಹೆಸರಿನಲ್ಲಿ ಮೋಸ ಮಾಡುವವರು ಅಂದರೆ ಇಂತಹ ದೇವಾಲಯದವರು.
ನಮ್ಮ ಮನಸ್ಸು ಏಕೆ ವರ್ತಮಾನದಿಂದ ಓಡಿಹೋಗುತ್ತದೆ?
ಮನಸ್ಸು ವರ್ತಮಾನದಿಂದ ಓಡಿಹೋಗುತ್ತದೆ ಎಂದರೆ, ಅದು ಹತ್ತಿರದ ಭವಿಷ್ಯವನ್ನು ಚಿಂತಿಸುವುದನ್ನು ಅಥವಾ ಹಿಂದಿನ ಅನುಭವಗಳಲ್ಲಿ ನಿರತವಾಗುವುದನ್ನು ಸೂಚಿಸಬಹುದು. ಈ ಪ್ರವೃತ್ತಿಯ ಹಿಂದೆ ಹಲವು ಕಾರಣಗಳು ಇರಬಹುದು:
ಅತಿಯಾದ ಚಿಂತೆ ಮತ್ತು ಆಲೋಚನೆಗಳು: ಅನೇಕ ವೇಳೆ, ಮನಸ್ಸು ವರ್ತಮಾನದ ಚಿಂತೆಗಳನ್ನು ಹೊತ್ತು ಮುಂದಿನ ಸಮಯವನ್ನು ಚಿಂತಿಸುವುದರಿಂದ ಓಡಿಹೋಗಬಹುದು.
ಅನಿಸರಿಸಲಾದ ಅನುಭವಗಳು: ಹಿಂದಿನ ಅನಿಗತ ಅನುಭವಗಳು ಯಾವುದೇ ಕಾರಣಕ್ಕೆ ಮನಸ್ಸು ಆಕರ್ಷಿತವಾಗಿರಬಹುದು.
ಹೆಚ್ಚು ಯಾತ್ರೆ ಮತ್ತು ದೂರದ ಯಾತಾಯಾತ: ವಿಶ್ವಾಸವಾಗಿ, ದೂರದ ಸ್ಥಳಗಳನ್ನು ಭೇಟಿಯಾಗುವುದು ಅಥವಾ ವಿಭಿನ್ನ ಪ್ರದೇಶಗಳಲ್ಲಿ ಯಾತ್ರಿಸುವುದು ಮನಸ್ಸನ್ನು ಹಿಂದಿನ ಅನುಭವಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಸೂಚಿಸಬಹುದು.
ಭವಿಷ್ಯದ ಚಿಂತೆ: ಭವಿಷ್ಯದಲ್ಲಿ ಏನಾಗಬಹುದು ಎಂಬ ಚಿಂತೆ ಮನಸ್ಸನ್ನು ವರ್ತಮಾನದಿಂದ ಓಡಿಹೋಗಿಸಬಹುದು.
ಧರ್ಮ ಮತ್ತು ಆಧ್ಯಾತ್ಮಿಕತೆ: ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ರಿಯೆಗಳು ಮನಸ್ಸನ್ನು ಹಿಂದಿನ ಅನುಭವಗಳ ಕಡೆಗೆ ಸೆಳೆಯಬಹುದು.
ಕೆಲಸ ಮತ್ತು ನಿರ್ವಹಣೆ: ಹಲವು ಜಾಗಗಳಲ್ಲಿ ಯಾತ್ರಿಸಲು ಬೇಕಾದ ನಿರ್ವಹಣೆ, ಯಾತಾಯಾತ ಮತ್ತು ವ್ಯವಸ್ಥಾಪನಗಳು ಇರಬಹುದು.
ನಗರ ಪರಿಚಯ: ಹೊಸ ಊರ ಅಥವಾ ನಗರಗಳನ್ನು ಪರಿಚಯಿಸಲು ಯಾತ್ರಿಸುವುದು ಅನೇಕ ವೇಳೆ ಮನಸ್ಸನ್ನು ಹಿಂದಿನ ಅನುಭವಗಳ ಕಡೆಗೆ ಸೆಳೆಯಬಹುದು.
ಇವು ಅನೇಕ ಕಾರಣಗಳಾಗಿರಬಹುದು. ಕೆಲವೊಮ್ಮೆ ಮನಸ್ಸು ಹಿಂದಿನ ಅನುಭವಗಳನ್ನು ಚಿಂತಿಸಿದರೆ ಅದರಿಂದ ತನ್ನ ಜೀವನವನ್ನು ಮೇಲೆತ್ತಬಹುದು ಅಥವಾ ಅದನ್ನು ಹೊಂದಿಸಬಹುದು.
ನಾಲ್ಕು ವೇದಗಳಲ್ಲಿ ಅತ್ಯಂತ ಪ್ರಾಚೀನ ವೇದ ಯಾವುದು?
ವೇದ, ಮೊದಲಿನಿಂದಲೂ ಇದ್ದದ್ದು ಒಂದೆ.
ಅದನ್ನು ವ್ಯಾಸರು ವಿಭಜಿಸಿದರು (compiled) ಅದರಿಂದಲೇ ಅವರಿಗೆ ಆ ಹೆಸರು ಬಂದದ್ದು ಎಂದು ನಮ್ಮದೇ ಇತಿಹಾಸ್ ಲ(ಮಹಾಭಾರತ) ಹೇಳುತ್ತದೆಯಲ್ಲ !
ಅವರು ಒಂದೆ ಇದ್ದ ವೇದವನ್ನು ನಾಲ್ಕು ಭಾಗಗಳಾಗಿ ವಿಭಜಿಸಿದರು -ಯಾಕೇ, ಯಾವ ಕಾರಣಕ್ಕಾಗಿ, ಅದನ್ನು ಪ್ರತ್ಯೇಕ ವಾಗಿಸಲು ತೆಗೆದುಕೊಂದ ಕಾರಣ್,ಮಾಪನ,ಉದ್ದೇಶಮತ್ತು ಆಧಾರ ತಿಳಿದಿಲ್ಲ ಅಷ್ಟೆ.
ಭಾಷಾವಿಜ್ನಾನಿಗಳ ಪ್ರಕಾರ, ವೇದಗಳ್ಲಿ ಉಪಯೋಗಿಸಿದ ಸಂಸ್ಕತ ಅಭ್ಯಸಿಸಿದರೆ ಋಗ್ವೇದದ ಭಾಷೆ ಅತೀ ಪ್ರಾಚೀನ ಅನ್ನಬಹುದು ! (ಇದು ಸರಿಯಾದ ಮಾನದಂಡವೇ ! -ಇರದೇ ಇರಲೂಬಹುದು) ಅದಲ್ಲದೇ -ಋಗ್ವೇದ ದಲ್ಲಿರುವ ಋಕ್ಕುಗಳು ಯಜುರ್ವೆದದಲ್ಲಿಯೂ ಇರುವುದನ್ನು ಕಾಣಬಹುದು !(ಇದು ಎಕೆ ?)
ಪ್ರಾಚೀನ ವಿಚಾರಗಳು ಬೆಳೆದುಬಂದ ರೀತಿಯನ್ನು ಅಭ್ಯಸಿಸಿ ವಿಂಗಡನೆ ಮಾಡಿರಬಹುದು
ಆದರಿಂದ ನಮ್ಮ ವೇದಗಳನ್ನು ನಮಗೇ ತಿಳಿಸಿಕೊಟ್ಟವರು ಯುರೋಪದ ಜನ ! ಅವರು ಅವುಗಳನ್ನು ತಿಳಿದು ಕೊಂಡ,ಅಭ್ಯಸಿಸಿದರೀತಿ,ನಮಗೆ ತಿಳಿಸಿದ ಕಾರಣ್ ಮತ್ತು ರೀತಿ -ಎಲ್ಲದರಲ್ಲಿಯೂ ರಾಜಕೀಯ ಇರುವುದು ವೇದಗಳಷಟೇ ಸ್ಪಷ್ಟ.
ದೇವಾಲಯಗಳನ್ನು ಸರ್ಕಾರ ನೋಡಿಕೊಳ್ಳುವುದು ಮತ್ತು ಭಕ್ತರೇ ನೋಡಿಕೊಳ್ಳುವುದು ಇದರ ಸಾಧಕ ಬಾಧಕಗಳೇನು?
ನಿಮ್ಮ ಜೀವನದಿಂದ ಇತರ ಜನರು ಕಲಿಯಬಹುದಾದ ಶ್ರೇಷ್ಠ ಜೀವನ ಪಾಠ ಯಾವುದು?
ನಿಜ ಹೇಳಬೇಕೆಂದರೆ, ನನ್ನ ಜೀವನ ನೋಡಿ ಇತರರು ಕಲಿಯುವ ಪಾಠ ಏನಿಲ್ಲ! ಇತರರ ಮುಂದೆ ನನ್ನ ಸಾಧನೆಗಳು ನಗಣ್ಯವೆಂದು ಭಾವಿಸುತ್ತೇನೆ ಏಕೆಂದರೆ ನಾನು ಭಾರತೀಯ! ಹೂಟ್ಟೆಕಿಚ್ಚು ಎಂಬುದು ನಮ್ಮ ಭಾರತೀಯ ಸಮಾಜದಿಂದ ಅಂಟಿಕೂಂಡಿದೆ.
ಪಕ್ಕದ ಮನೆಯವರು ಅಥವ ಸಂಬಂಧಿಗಳು ಏನೇ ಖರೀದಿಸಿದರೂ, ಸಾಧಿಸಿದರೂ ಅವರಿಗಿಂತ ಒಂದು ಇಂಚು ಹೆಚ್ಚು ಮಾಡಬೇಕೆಂಬ ಹಂಬಲ. ನಮ್ಮ ಸುತ್ತಲಿನ ಸಮಾಜದ ಜನರ ಜೀವನ ಪರಿಸ್ಥಿತಿಯನ್ನು ಕಾಲಕ್ಕೆ ತಕ್ಕಂತೆ ಅರಿತು, ಕಲಿತು ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿ, ಶ್ರೇಷ್ಠತೆ ಕಡೆಗೆ ಕಲಿಯಲು ಮುನ್ನಗ್ಗುತ್ತಿರುವ ನಾವು, ನಮ್ಮ ಜೀವನ ಸಮೃಧ್ದವಾಗಿದೆ ಎಂದು ಭಾವಿಸುವವರಲ್ಲ.
ಮೇಲೆ ಹೇಳಿದಂತೆ ಪ್ರತಿಯೊಬ್ಬರ ಜೀವನ ಶೈಲಿ ಹಾಗೂ ಅವರು ಜಗತ್ತನ್ನು ನೋಡುವ ಕಲ್ಪನೆ ಭಿನ್ನವಾಗಿರುತ್ತದೆ. ಈ ಗೋಜಲಿನ ಪ್ರಪಂಚದಲ್ಲಿ ನನ್ನ ವ್ಯಕ್ತಿತ್ವ ಬೇರೆಯವರಿಗೆ ಅಸಹ್ಯ ಹುಟ್ಟಿಸಬಹುದು ಅಥವ ಇಷ್ಟವಾಗಬಹುದು. ಉದಾ: "ಮಹಾತ್ಮ ಗಾಂಧೀ" ಇಂದಿನ ಯುವ ಪೀಳಿಗೆಗೆ ಗೊಡ್ಸೆ ಮಾಡಿದ್ದು ಉತ್ತಮ! ಹಳಬರಿಗೆ ಗಾಂಧೀ ಒಂದು ಚೈತನ್ಯದ ಚಿಲುಮೆ!
ಸಸ್ಯಹಾರಿಗಳು ಒಳ್ಳೆಯವರೋ ? ಮಾಂಸಹಾರಿಗಳು ಒಳ್ಳೆಯವರೋ? ಉತ್ತರ ಕಠಿಣ. ಪಾಪ ಓಡಲಾರದ, ನಿಂತಲ್ಲೆ ನಿಂತಿರುವ ಜೀವವನ್ನು ಕೊಂದು ತಿನ್ನುವ ಸಸ್ಯಹಾರಿಗಳು! ಅಟ್ಟಾಡಿಸಿ ,ಭೀತಿ ಹುಟ್ಟಿಸಿ ಕೊಂದುತಿನ್ನುವ ಮಾಂಸಹಾರಿಗಳು!
ಈ ನಿಮ್ಮ ಪ್ರಶ್ನೆಗೆ ಉತ್ತರ ಸಿಗುವ ಜಾಗ ಸಾವಿನ ಮನೆ ಮತ್ತು ಮಡಿದ ವ್ಯಕ್ತಿಯ ಬಗ್ಗೆ ಗುಣಗಾನ ಮಾಡುವ (ಹತ್ತಿರದಿಂದ ಕಂಡವರು) ಮಾತುಗಳು. ನಮಗೆ ನಾವು ಹೇಳಿಕೊಳ್ಳುವುದು ಎಷ್ಟು ಸಮಂಜಸ? ಇತರರು ಹೇಳಬೇಕು ಮತ್ತು ಬರೆಯ ಬೇಕು ನಮ್ಮ ಬಗ್ಗೆ ಅವರುಗಳ ದೃಷ್ಟಿಕೋನದಲ್ಲಿ……..
ನಮ್ಮ ರಾಜ್ಯದಲ್ಲಿನ ಪ್ರಮುಖ ಬೆಳೆಗಳು ಯಾವುವು?
ನಾನು ಜೀವನದಲ್ಲಿ ಅನುಭವಿಸಬೇಕಾದ ಪ್ರಮುಖ ಹತ್ತು ವಿಷಯಗಳು ಯಾವುವು?
1. ನನ್ನನು ನಾನೇ ಅನುಭವಿಸಬೇಕು ಅರ್ಥಾತ್ ನನ್ನನು ನಾನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು .
2. ಹೆಚ್ಚಿನ ಸಮಯ ನನ್ನೊಂದಿಗೆ ನಾನೇ ಇರಬೇಕು.
3. ನನ್ನ ಕಷ್ಟಗಳನ್ನು ಅನುಭವಿಸುತ್ತಾ ಸುಖದ ಮೆಟ್ಟಿಲು ಏರಬೇಕು.
4. ಮನುಷ್ಯರು ಕಾಣದ ವಿಸ್ತಾರ ಪರಿಸರದಲ್ಲಿ ಕುಳಿತು, ಹಕ್ಕಿಗಳ ಚಿಲಪಿಲಿ ಮತ್ತು ತಂಪು, ಶುದ್ದ ಗಾಳಿಯನ್ನು ಅನುಭವಿಸಬೇಕು.
5. ನನ್ನಲ್ಲಿ ನನ್ನನೆ ಸದಾ ಕಾಣುವುದು.
6. ನನ್ನ ಭಾವನೆಗಳಿಗೆ ಮೊದಲ ಸ್ಥಾನ
7. ನನ್ನಿಂದ ಬೇರೆಯವರ ಮುಖದಲ್ಲಿ ನಗು,ಜೀವನದಲ್ಲಿ ಸಂತೋಷ
8. ನನ್ನ ಯಶಸ್ಸು ನನ್ನ ಕುಟುಂಬಕ್ಕೆ ಹೆಸರು ತರುವಲ್ಲಿ
9. ಸದಾ ಒಳ್ಳೆಯ ಯೋಚನೆ
10. ನಗು, ಸಹಾಯ, ದಾನ ಧರ್ಮ ನನ್ನ ಆಸ್ತಿ ಆಗುವಂತಹ ಅನುಭವ
ಕ್ವೋರದಲ್ಲಿ ಏಕೆ ಉತ್ತರ ಗೊತ್ತಿಲ್ಲದಿದ್ದರು ಉತ್ತರ ಕೊಡುತ್ತಾರೆ?
ಮನುಷ್ಯನಿಗೆ ಕಣ್ಣಿಗೆ ಕಾಣಿಸದ ವಸ್ತು ಮನಸ್ಸು ಮತ್ತು ಆತ್ಮ, ಆದರೆ ಮೆದುಳು ಕಣ್ಣಿಗೆ ಕಾಣುವ ವಸ್ತು ಇವುಗಳಲ್ಲಿ ಯಾವುದು ಹೆಚ್ಚು?
ಕಣ್ಣಿಗೆ ಕಾಣವ ಮತ್ತು ಕಾಣಿಸದ ಎರಡು ರೀತಿಯ ವಿಚಾರಗಳು ಮೊದಲಿನಿಂದಲೂ ಇದೆ. ಅದನ್ನು ಗೊಚರ & ಅಗೋಚರ ಎನ್ನಲಾಗುತ್ತದೆ. ಉದಾ - ನಾವು ಫೋನ್ ನಲ್ಲಿ ಮಾತನಾಡುತ್ತೇವೆ. ನಮಗೆ ಧ್ವನಿ ತರಂಗದ ಅಲೆಗಳ ಮೂಲಕ ಕೇಳುತ್ತದೆ. ಅದು ಮ್ಯೂಜಿಕ್ , ರೇಡಿಯೋ, ಮಾತು, ಏನೆಲ್ಲ ಆದರೂ ಶಬ್ದದ ತರಂಗಗಳ ಮೂಲಕ ಕೇಳುತ್ತದೆ. ಇಂಟರ್ನೆಟ್ ಮೂಲಕ ನೀವು ಕಳಿಸಿದ ಒಂದು ಫೋಟೋ ಕೂಡ ಸಾವಿರಾರು ತುಂಡುಗಳಾಗಿ ವಿಂಗಡಿಸಿ, ನಂತರ ನಮ್ಮ ಮೊಬೈಲ್ ನಲ್ಲಿ ಒಂದು ರೂಪವನ್ನು ಪಡೆದುಕೊಳ್ಳುತ್ತದೆ. ಇದು ಬಾಹ್ಯ ಜಗತ್ತಿನಲ್ಲಿ ವಿಸ್ತಾರಗೊಳ್ಳುವ ಮೊದಲು ವಿಜ್ಞಾನಿಗಳ ಮನದಲ್ಲಿ , ಅವರ ಆಂತರಿಕ ಜಗದೊಳಗೆ ಕಾಡಲ್ಪಡುತ್ತದೆ. ಅದನ್ನೇ ಅವರು ತಂತ್ರಜ್ಞಾನದ ಮೂಲಕ ಸಾಭೀತುಪಡಿಸುವುದು. ಅದೇನೆ ಇರಲಿ,
ಮನಸ್ಸು ಮತ್ತು ಆತ್ಮ ಇವು ಕಣ್ಣಿಗೆ ಕಾಣುವುದಿಲ್ಲ, ಆದರೆ ಮೆದುಳಿನ ಕಣ್ಣಿಗೆ ಕಾಣುತ್ತವೆ. ಇವುಗಳಲ್ಲಿ ಯಾವುದು ಹೆಚ್ಚು, ಮನಸ್ಸು ಹೆಚ್ಚೆಂದೇನೂ ಅಲ್ಲ, ಅಥವಾ ಕಡಿಮೆ ಅಂತಲೂ ಅಲ್ಲ, ಮನಸ್ಸಿಗೆ ೨ ಮುಖಗಳಿವೆ. ಒಂದು ಆಂತರಿಕ ಮತ್ತೊಂದು ಬಾಹ್ಯ. ನಾವೀಗ ಅದರೋಟ್ಟಿಗೆ ಬದುಕುತ್ತಿದ್ದರೆ ಅದು ಬಾಹ್ಯ ದಲ್ಲಿ , ಬಾಹ್ಯದ ಮನಸ್ಸು ನಿರಂತರ ವ್ಯವಹಾರಿಕವಾಗಿರುತ್ತದೆ, ಅದುಲೆಕ್ಕಾಚಾರದ್ದು, ನೀವೆಷ್ಟು ಸಂಪಾದಿಸಿದ್ದೀರಿ, ಕೂಡಿಡುವಿರಿ, ಖರ್ಚು, ವೆಚ್ಚ, ಆದಾಯ ಲಾಭ ನಷ್ಟ, ಇಂತದ್ದರಬಗ್ಗೆ ಅತಿಹೆಚ್ಚು ಚಿಂತೆ. ನಿಮ್ಮನ್ನ ವಾಸ್ತವದಲ್ಲಿ ನೀವಾಗಿರಲು ಬಿಡುವುದಿಲ್ಲ, ಹೆಚ್ಚೆಂದರೆ ಸಂಸಾರದಲ್ಲಿ ಒಂದಷ್ಟು ಖುಃಷಿಯನ್ನು ನೀಡಿ ಮತ್ತೆ ಕಸಿದುಕೊಳ್ಳುತ್ತದೆ.ಇದನ್ನೇ ಮನಸ್ಸಿನ ಹಿಡಿತದಲ್ಲಿ ನಾವಿದ್ದೀವಿ ಎನ್ನುವುದರ ಅರ್ಥ ಮತ್ತು ಮನಸ್ಸಿನ ಒಂದು ಮುಖ ಇದಾಗಿದೆ.
ಎರಡನೇಯದ್ದು ಆಂತರಿಕ ಮನಸ್ಸು, ಅದು ನಿಮ್ಮ ಹತೋಟಿಯಲ್ಲಿ ಇರುತ್ತದೆ. ಕಾರಣ ನೀವು ನಿಮ್ಮ ಇಂದ್ರೀಯಗಳನ್ನು ನಿಗ್ರಹಿಸಿರುವಿರಿ, ಸಂಪೂರ್ಣವಾಗಿ ಅಲ್ಲದಿದ್ದರೂ ಕನಿಷ್ಠ , ಸ್ವಲ್ಪ ಮಟ್ಟಿಗೆ ಆದರೂ ನಿಮಗೆ ಇದು ಸಹಕಾರಿ ಆಗುತ್ತದೆ. ಹೇಗೆಂದರೆ ನೀವು ನಿಮ್ಮ ಆಲೋಚನೆಗಳನ್ನು ನಿಮ್ಮ ಇತಿ ಮಿತಿಯಲ್ಲಿ ಇರಿಸುವಿರಿ, ಬೇಡದ ವಿಚಾರದಲ್ಲಿ ತಲೆಹಾಕುವುದಿಲ್ಲ. ಮನಸ್ಸು ನೂರಾರು ವಿಚಾರವನ್ನು ತಂದೊಡ್ಡಿದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮಗೆ ಏನು ಬೇಕೋ, ಎಷ್ಟು ಬೇಕೋ, ಯಾವುದು ಅಗತ್ಯವೋ ಅದನ್ನು ಮಾತ್ರ ಮಾಡುವಿರಿ. ನಂತರ ನೀವು ಧ್ಯಾನದಲ್ಲಿ ನಿರತರಾಗಿದ್ದರೆ, ನಿಮಗೆ ಸೂಕ್ಷ್ಮ ಶರೀರದ ಅನುಭವಗಳು ಆಗುತ್ತದೆ, ಹಾಗೆ ನಿಮ್ಮ ಮನಸ್ಸಿನ ಸೂಕ್ಷ್ಮ ಭಾವನೆ , ನಿಮ್ಮ ಫ್ಯೂಚರ್, ಫಾಸ್ಟ್, ಪ್ರಸೆಂಟ್ ಗಳ ಬಗ್ಗೆ ಅರಿವಾಗುತ್ತದೆ. ನಿಮ್ಮ ಆತ್ಮದ ದರ್ಶನ ಕೂಡ ಆಗುತ್ತದೆ.
ಈಗ ನೀವೇ ಯೋಚಿಸಿ, ಯಾವುದು ಮುಖ್ಯ. ಯಾವುದು ಹೆಚ್ಚು. ಯಾವುದು ಬೇಕು ಎಂದು.
ಹೆಚ್ಚು ಸಂಪಾದಿಸುವವರಿಗೆ ಹೆಚ್ಚು ಗೌರವ ಎಂಬುದು ಸರಿಯೇ? ಈ ಸಮಾಜದ ವ್ಯವಸ್ಥೆಗೆ ಪರ್ಯಾಯವೇನು?
ಲಾಭ ಮಾಡುತ್ತಿದ್ದ ಕನ್ನಡಿಗರ ವಿಜಯಾ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಮುಂತಾದವುಗಳನ್ನು ಬೇರೆ ನಷ್ಟದಲ್ಲಿರುವ ಬ್ಯಾಂಕ್ ಗಳ ಜೊತೆಗೆ ವಿಲೀನ ಮಾಡಿ ಅನ್ಯಾಯ ಮಾಡಲಾಯಿತೇ?
ಬಕ್ರೀದ್ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಮರನ್ನು ಉದ್ದೇಶಿಸಿ "ಮತ್ತೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು" ಎಂದು ಹೇಳಿದ್ದಾರೆ. ಆದರೆ ಇಸ್ಲಾಂ ನಲ್ಲಿ ಇದಕ್ಕೆ ಅನುಮತಿ ಇದೆಯೇ ?
ವರ್ಮ್‌ಹೋಲ್ ಮತ್ತು ಕಪ್ಪು ಕುಳಿಯ ನಡುವಿನ ವ್ಯತ್ಯಾಸವೇನು?
ಚಾಣಕ್ಯನ ನಿಧನ ಹೇಗಾಯಿತು?
ನೀವು ದೇವರಿದ್ದಾನೆ ಎಂದು ಹೇಗೆ ನಂಬುತ್ತಿರಾ?
ಕೊರೊನ (ಕೊರೊನ -21) ಬಗ್ಗೆ ಜನರ ನಿರ್ಲಕ್ಷ್ಯವೇಕೆ?
ದೇವಸ್ಥಾನಗಳಲ್ಲಿ ಹಣ ಪಡೆದು ಶೀಘ್ರದರ್ಶನಕ್ಕೆ ಅನುವು ಮಾಡಿಕೊಡುವುದು ಸರಿ ಎಂದು ನಿಮಗೆ ಅನಿಸುತ್ತದೆಯೇ?
ಯಾಕೆ ನಾನು ಇದ್ದಕ್ಕಿದ್ದಂತೆ ಕೋಟಿ ಸಿಕ್ಕರೆ ಏನು ಮಾಡಬೇಕು ಎಂದು ಚಿಂತಿಸುತ್ತೇನೆ?
ಕೃಷ್ಣನ ಸೋದರಮಾವನ ಹೆಸರನ್ನು ಆವರಣ ಚಿಹ್ನೆಗೆ () ಏಕೆ ಇಟ್ಟಿದ್ದಾರೆ?
ನಾವು ಸಣ್ಣವರಿದ್ದಾಗ ಹೃದಯಾಘಾತ 60 ವರ್ಷದವರ ಮೇಲ್ಪಟ್ಟವರಿಗೆ ಆಗುತಿತ್ತು, eಗ ಸಣ್ಣ ವಯಸ್ಸಿನವರಿಗೂ ಹೃದಯಾಘಾತ ಆಗುತ್ತಿರುವುದೆಕೆ ?
ಪಾಡ್ದನ ಎಂದರೇನು? ಈ ಸಂಸ್ಕೃತಿ ಎಲ್ಲಿ ಕಂಡು ಬರುತ್ತದೆ?