#🎥 Motivational ಸ್ಟೇಟಸ್ *ಬಿಜೆಪಿಯ ಅಚ್ಚರಿಯ ಆಯ್ಕೆಗಳಿಗೆ ಇವೆಲ್ಲ ಕೆಲವು ನಿದರ್ಶನಗಳು...!!!*
🪷🪷🪷
ಪಕ್ಷದ ಹಾಗೂ ಸಾಂವಿಧಾನಿಕ ಹುದ್ದೆಗಳಿಗೆ ಅಚ್ಚರಿಯ ಆಯ್ಕೆ ಮಾಡಿ ಯಶಸ್ವಿ ಆಗುವುದ್ರಲ್ಲಿ ಬಿಜೆಪಿಯನ್ನು ಮೀರಿಸಲು ಯಾರ್ಗೂ ಸಾಧ್ಯವಿಲ್ಲ.
ಮಧ್ಯಪ್ರದೇಶದಲ್ಲಿ ಸತತ 4 ಸಲ ಮುಖ್ಯಮಂತ್ರಿ ಆಗಿ, 5ನೇ ಬಾರಿಗೆ ಕೂಡ ಪಕ್ಷಕ್ಕೆ ಭರ್ಜರಿ ಬಹುಮತ ತಂದುಕೊಟ್ರೂ ಶಿವರಾಜ್ ಸಿಂಗ್ ಚೌಹಾಣ್ 5 ನೇ ಬಾರಿ ಮಾತ್ರ ಮುಖ್ಯಮಂತ್ರಿ ಆಗ್ಲಿಲ್ಲ.ಆಗ ಮುಖ್ಯಮಂತ್ರಿ ಆದವರು ಅಷ್ಟಾಗಿ ಪರಿಚಯವಿರದ ಯುವ ನೇತಾರ "ಮೋಹನ್ ಯಾದವ್".
ಅಸ್ಸಾಂ ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ "ಸರ್ಬಾನಂದ ಸೋನೋವಾಲ್" ಮೋದಿಜೀಯವರ ಖಟ್ಟರ್ ಅಭಿಮಾನಿ ಆಗಿದ್ರೂ ಕೂಡ 2ನೇ ಬಾರಿಗೆ ಮಾತ್ರ ಮುಖ್ಯಮಂತ್ರಿಯಾಗಿ ಮುಂದುವರೆಯಲಿಲ್ಲ.ಆಗ ಮುಖ್ಯಮಂತ್ರಿಯಾದವರು "ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ಹಿಮಂತ ಬಿಸ್ವಾ ಶರ್ಮ" ಎಂಬ ಖಟ್ಟರ್ ಹಿಂದುತ್ವವಾದಿ.
ಗುಜರಾತ್‌ನಲ್ಲಿ ಮೊದಲ ಬಾರಿ ಶಾಸಕರಾಗಿ ಮುಖ್ಯಮಂತ್ರಿ ಹುದ್ದೆಗೇರಿ ಆಯ್ಕೆಯಾದವರು "ಭೂಪೇಂದ್ರ ಪಟೇಲ್" ಅವರು.
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿ ಮತ್ತೆ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದಾಗ ಅಲ್ಲಿ ಕೂಡ ಮುಖ್ಯಮಂತ್ರಿ ಆಗಿದ್ದು "ಇವರ ಹೆಸರನ್ನು ಯಾರೂ ಕೂಡ ಕೇಳಿರದ" ರೇಖಾ ಗುಪ್ತ ಅವರು.
ಮಹಾರಾಷ್ಟ್ರದಲ್ಲಿ ಕೂಡ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದು ಕೂಡ "ಅಷ್ಟೇನೂ ಚಿರಪರಿಚಿತರಾಗಿರದ, ಈಗ ಜನಪ್ರಿಯರಾದ" ದೇವೇಂದ್ರ ಫಡ್ನವಿಸ್ ಅವರು.
ಛತ್ತೀಸ್‌ಗಢದ ಭೂಪೇಶ್ ವಘೇಲ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ,ಮುಖ್ಯಮಂತ್ರಿ ಆಗಿದ್ದು "ಈಗಲೂ ಅವರ ಹೆಸರನ್ನು ಹಲವರು ಕೇಳಿರದ" ವಿಷ್ಣು ದೇವ್ ಸಾಯ್ ಅವರು.
ಈ ಪರಂಪರೆ ಈಗಲೂ ಮುಂದುವರೆದಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಮಾಧ್ಯಮಗಳ ಊಹೆ ಥರಥರಾವರಿಯದಾಗಿತ್ತು. ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಮುಂತಾಗಿ ಹೆಸರು
ಗಳು ತೇಲಿಬಂದಿದ್ವು. ಬಿಜೆಪಿಯ ಉನ್ನತ ಸ್ತರದ ಪದಾಧಿಕಾರಿಗಳಿಗೂ ಕೂಡ ಅದರ ಸುಳಿವಿರ್ಲಿಲ್ಲ.
ಯಾಕೆಂದ್ರೆ ಹಿಂದೆಲ್ಲ ಒಂದು ರಾಷ್ಟ್ರೀಯ ಪಕ್ಷ ವನ್ನು ಮುನ್ನಡೆಸುವ ಹೊಣೆಯನ್ನು "ಅನುಭವ ಇರ್ತದೆ, ವಯಸ್ಸಿನಲ್ಲಿ ಮಾಗಿರ್ತ್ತಾರೆ,ತಂತ್ರಗಳನ್ನು ರೂಪಿಸೋದ್ರಲ್ಲಿ ನಿಪುಣರಾಗಿರ್ತಾರೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ" ಹಿರಿಯ ನಾಯಕರಿಗೆ ಮುನ್ನಡೆಸುವ ಹೊಣೆಯನ್ನು ಹೊರಿಸಲಾಗ್ತಿತ್ತು.
ಆದ್ರೆ ಇದುವರೆಗೂ ಬಿಜೆಪಿ ಪಕ್ಷವು ಒಂದು ಬಾರಿಯೂ ಗೆಲ್ಲಲಾಗದ ತಮಿಳುನಾಡು,
ಕೇರಳ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ 45 ರ ಹರೆಯದ ಯಾರ್ಗೂ ಅಷ್ಟಾಗಿ ಪರಿಚಯವಿರದ ನಿತಿನ್ ನಬೀನ್ ಎಂಬ ಯುವಕನೊಬ್ಬನನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನಿಯುಕ್ತಿ ಮಾಡಿದಾರೆ ಅಂದ್ರೆ ಬಿಜೆಪಿ ವರಿಷ್ಠರ ಎಂಟೆದೆಯ ಧೈರ್ಯ
ವನ್ನು ಮೆಚ್ಲೇಬೇಕು. ಕಳೆದ ವಾರ ಬಿಹಾರ ಮೂಲದ 45 ರ ಹರೆಯದ ನಿತಿನ್ ನಬಿನ್ ಅವರು ಅವಿರೋಧವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಹಾರದಲ್ಲಿ ನಿತಿನ್ ನಬೀನ್ ಅವರು ಶ್ರೀಮಂತರ ಪ್ರತಿಷ್ಠಿತ ಕುಟುಂಬದವರಲ್ಲ. ಅವರ ತಂದೆ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಜೆಪಿಯ ಶಾಸಕರಾಗಿದ್ರು ಎನ್ನುವುದನ್ನು ಬಿಟ್ರೆ ನಿತಿನ್ ಅವರಿಗೆ ಬೇರೆ ಯಾವ ರಾಜಕೀಯ ಹಿನ್ನಲೆಯೂ ಇಲ್ಲ. ಕಾಯಸ್ಥ ಸಮುದಾಯಕ್ಕೆ ಸೇರಿದ ನಿತಿನ್ ಹುಟ್ಟಿದ್ದು ಝಾರ್ಖಂಡ್‌ಗೆ ಸೇರಿದ ರಾಂಚಿಯಲ್ಲಿ 1980 ರ ಮೇ 23 ರಂದು. ಅಚ್ಚರಿ ಅಂದ್ರೆ ಬಿಜೆಪಿ ಸಂಸ್ಥಾಪನೆಯಾಗಿದ್ದು 1980ರ ಏಪ್ರಿಲ್ 6 ರಂದು! ಬಿಜೆಪಿ ಸ್ಥಾಪನೆಯಾಗಿ 45 ವರ್ಷ. ನಿತಿನ್ ನಬೀನ್ ಅವರಿಗೂ ಈಗ 45ರ ಹರೆಯ. ಪತ್ನಿ ದೀಪಮಾಲ ಶ್ರೀವಾಸ್ತವ. ಒಂದು ಗಂಡು, ಒಂದು ಹೆಣ್ಣು ಸಂತಾನ ಇರುವ ಪುಟ್ಟ ಕುಟುಂಬ.
ಬಿಹಾರದಲ್ಲಿ ನಿತಿನ್ ನಬೀನ್ ಬಿಜೆಪಿ ಈ ಬಾರಿ ಅತಿ ಹೆಚ್ಚು ಶಾಸಕರನ್ನು ಹೊಂದುವಂತಾಗುವು ದ್ರಲ್ಲೂ ಶ್ರಮಿಸಿದ್ರು.ನಿತಿನ್ ನಬೀನ್ ಅವರು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಹುದ್ದೆ ನಿರ್ವಹಿಸಿ ದೇಶದುದ್ದಗಲದ ರಾಜಕೀಯ ಸಮೀಕರಣವನ್ನೂ ಬಲ್ಲವರು. ದೆಹಲಿಗೆ ನಿಮ್ಮ ವಸತಿಯನ್ನು ಬದಲಾಯಿಸಬೇಕಾಗುತ್ತದೆ ಎಂದು ಅಮಿತ್ ಶಾ ಕೆಲವು ದಿನಗಳ ಮೊದಲು ಸೂಚಿಸಿದಾಗ "ತನ್ನನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾಡಬಹುದೆಂದು" ನಿತಿನ್ ಭಾವಿಸಿದ್ರಂತೆ. ಆದರೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡ್ಬಹುದು ಎಂಬ ಕಲ್ಪನೆ ಅವರಿಗೂ ಇರ್ಲಿಲ್ಲ.
ಬಿಜೆಪಿಯು ಕಾರ್ಯಕರ್ತರ ಶ್ರಮದ ಮೇಲೆಯೇ ಅಷ್ಟೆತ್ತರಕ್ಕೆ ಏರಿರುವ ಪಕ್ಷ. ಅಧ್ಯಕ್ಷರು ಯಾರೇ ಆಗಿರ್ಲಿ ಪಕ್ಷದ ಸೋಲು-ಗೆಲುವುಗಳು ಕಾರ್ಯಕರ್ತರನ್ನೇ ಅವಲಂಬಿಸಿದೆ. ಆದರೆ ಯಾವ ಅಧ್ಯಕ್ಷರೂ ಇದುವರೆಗೂ ಯಾರದ್ದೋ ಕೈಗೊಂಬೆಯಾಗಿ ವರ್ತಿಸಿ ನಿಷ್ಕ್ರಿಯರೆನಿಸಿ ಕೊಂಡಿಲ್ಲ.ಹೋರಾಟದ ಹಿನ್ನೆಲೆಯಿಂದಲೇ ಅಧ್ಯಕ್ಷ ಗಾದಿಗೇರಿರುವುದರಿಂದ ಕಾರ್ಯಕರ್ತರ ನಾಡಿ ಬಡಿತ ಹೇಗಿರುತ್ತದೆ? ಎಂಬುದು ಅವರಿಗೆ ಗೊತ್ತಿರುತ್ತದೆ. ಇತರೆ ಪಕ್ಷಗಳಲ್ಲಿರುವಂತೆ ಅಧ್ಯಕ್ಷರು ತಮ್ಮ ಸುತ್ತಮುತ್ತ ಠಳಾಯಿಸುವ ಪಟಾಲಂ ಮಾತನ್ನೇ ನಿಜವೆಂದು ಭಾವಿಸುವ ಕೆಟ್ಟ ಪರಿಪಾಠ ಬಿಜೆಪಿಯಲ್ಲಿಲ್ಲ. ಪಟಾಲಂ ಮಾತನ್ನೆ ನಂಬಿ ಕಾರ್ಯಕರ್ತರ ಮಾತನ್ನು ಕಡೆಗಣಿಸಿದರೆ ಯಾವ ಪರಿ ಪಶ್ಚಾತ್ತಾಪ ಪಡಬೇಕಾದೀತೆಂಬ ಅಂದಾಜು ಅಧ್ಯಕ್ಷ ಗಾದಿಗೇರಿದವರಿಗೆ ಇದ್ದೇ ಇರುತ್ತದೆ,ಇರ್ಬೇಕು ಕೂಡ. ಬಿಜೆಪಿಯು A Party with a difference ಎಂಬ ಪ್ರಶಂಸೆಗೆ ಪಾತ್ರವಾಗಿರುವುದಕ್ಕೂ ಇದೇ ಕಾರಣ.
ಆದರೆ ಬಿಜೆಪಿ ಈ ಬಾರಿ ಯುವ ನಾಯಕನಿಗೆ ಮಣೆ ಹಾಕಿ ಹೊಸ ಪ್ರಯೋಗಕ್ಕೆ ಕೈ ಹಾಕುವ ಸಾಹಸ ಮಾಡಿದೆ.ಹಾಗಂತ ನಿತಿನ್ ನಬೀನ್ ಅನನುಭವಿಯೇನೂ ಅಲ್ಲ. ಪಶ್ಚಿಮ ಪಾಟ್ನಾದಿಂದ ಒಂದು ಬಾರಿ ಹಾಗೂ ಬಂಕಿಪುರ ಕ್ಷೇತ್ರದಿಂದ ಸತತ ನಾಲ್ಕು ಬಾರಿ.ಹೀಗೆ ಒಟ್ಟು 5 ಬಾರಿ ಬಿಹಾರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ
ದ್ದಾರೆ. ಸಂಪುಟ ದರ್ಜೆಯ ಸಚಿವರಾಗಿ ರಸ್ತೆ, ನಗರಾಭಿವೃದ್ಧಿ, ಕಾನೂನು ಇತ್ಯಾದಿ ಇಲಾಖೆ ಗಳನ್ನು ನಿರ್ವಹಿಸಿದ್ದಾರೆ. ಛತ್ತೀಸ್‌ಗಢ, ದೆಹಲಿ, ಸಿಕ್ಕಿಂ ಮೊದಲಾದ ರಾಜ್ಯಗಳ ಚುನಾವಣೆಯಲ್ಲಿ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ.
ಛತ್ತೀಸ್‌ಗಢದಲ್ಲಿ ಮತ್ತೆ ಭೂಪೇಶ್ ವಘೇಲಾ ಅವರ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೇರಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದ್ದವು. ಆದರೆ ಆದದ್ದೇ ಬೇರೆ. ಬಿಜೆಪಿಗೆ ಅಲ್ಲಿ ಸ್ಪಷ್ಟ ಬಹುಮತ ದೊರಕಿತ್ತು. ದಿಲ್ಲಿಯಲ್ಲೂ ಆಮ್ ಆದ್ಮಿ ಪಕ್ಷ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇವರೆಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರು ವಂತೆ ಮಾಡುವಲ್ಲಿ ನಿತಿನ್ ನಬೀನ್ ಅವರ ತಂತ್ರಗಾರಿಕೆ, ಸಂಘಟನಾತ್ಮಕ ಕಾರ್ಯವು ಗೆಲುವು ಸಾಧಿಸಿತ್ತು. ಸದ್ಯದ ರಾಜಕೀಯ ವ್ಯವಸ್ಥೆ , ಚುನಾವಣೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಅಪಾರ ಜ್ಞಾನ ನಿತಿನ್‌ಗೆ ಇದೆ. ಮೋದಿ ಮತ್ತು ಅಮಿತ್ ಶಾ ಅವರಂತಹ ಘಟಾನುಘಟಿ ನಾಯಕರ ಬೆಂಬಲವಂತೂ ಅವರಿಗೆ ಸದಾ ಶ್ರೀರಕ್ಷೆಯಾಗಿದೆ.
45ರ ಹರೆಯದ ಯುವ ನಾಯಕನೊಬ್ಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪದವಿಗೇರಿದ್ದನ್ನು ಸಹಿಸಲಾಗದ ಕೆಲವು ಬಿಜೆಪಿ ವಿರೋಧಿಗಳು ನಾನಾ ಬಗೆಯ ಅಪಪ್ರಚಾರಕ್ಕೆ ಈಗ ಮುಂದಾಗಿರುವುದು ನಿರೀಕ್ಷಿತ ಬೆಳವಣಿಗೆಯೇ. “ನಿತಿನ್ ನಬೀನ್ ಏನಿದ್ದರೂ ಮೋದಿಜೀ, ಶಾಜೀ ಅವರ ಕೈಗೊಂಬೆ.ಅಡ್ವಾಣಿ, ಜೋಶಿ ಅಂತಹವರನ್ನೇ ಬದಿಗೆ ಸರಿಸಿದವರಿಗೆ ನಿತಿನ್ ನಬೀನ್ ಯಾವ ಲೆಕ್ಕ? ನಿತಿನ್ ಆಯ್ಕೆಗೆ RSS ಗೆ ಸಹಮತವಿರಲಿಲ್ಲ" ಹೀಗೆ ಇತ್ಯಾದಿ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಬಿಜೆಪಿ ಕೋಟಿಗಟ್ಟಲೆ ಪಕ್ಷದ ನಿಧಿ ಸಂಗ್ರಹಿಸಿದೆ. ದೇಶದಾದ್ಯಂತ ಪಕ್ಷದ ಭವ್ಯ ಕಚೇರಿಗಳನ್ನು ನಿರ್ಮಿಸಿದೆ ಎಂಬ ಟೀಕೆಗಳೂ ಕೇಳಿಬಂದಿವೆ. ಬಿಜೆಪಿ ಅನೈತಿಕ ಮಾರ್ಗದಲ್ಲಿ ಹಣ ಸಂಗ್ರಹಿಸಿದ್ರೆ, ಅಕ್ರಮವಾಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಿದ್ರೆ ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವ ಅವಕಾಶ ವಿರೋಧಿಗಳಿಗೆ ಇದೆ. ಹೋರಾಡಲಿ.ಅದು ಬಿಟ್ಟು ಬರಿದೇ ಆರೋಪ ಗಳನ್ನೆಸಗಿ "ಹಿಟ್ ಆಂಡ್ ರನ್" ಸೂತ್ರ ಅನುಸರಿಸಿದರೆ ಏನು ಪ್ರಯೋಜನ?
ರಾಜಕೀಯ ರಂಗದಲ್ಲಿ ಇದುವರೆಗಿನ ಅನುಭವ, ಪಕ್ಷದ ವರಿಷ್ಠರ ಭೀಮಬಲದ ಬೆಂಬಲ, ಜೊತೆಗೆ ಕಾರ್ಯಕರ್ತರ ಅಚಲ ಸಹಕಾರದ ಬಲದಿಂದಾಗಿ ಪಕ್ಷವನ್ನು ಮುನ್ನಡೆಸುವುದು ನಬೀನ್ ಅವರಿಗೆ ಕಷ್ಟದ ಸಂಗತಿಯಾಗಲಿಕ್ಕಿಲ್ಲ. ಆದರೆ ಹಾಗಂತ ಅವರಿಗೆ ಸವಾಲುಗಳೇನೂ ಇಲ್ಲವೆಂದಲ್ಲ. ಇದುವರೆಗೆ ಒಮ್ಮೆಯೂ ಅಧಿಕಾರಕ್ಕೇರಲಾಗದ ಕೇರಳ, ತಮಿಳುನಾಡು , ಪಶ್ಚಿಮ ಬಂಗಾಳ ಚುನಾವಣೆಗಳು ಅವರಿಗೆ ಸವಾಲಾಗಿ ನಿಂತಿವೆ. ಆ ರಾಜ್ಯಗಳಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ನಿತಿನ್ ನಬೀನ್‌ರವರು ಅಪಾರ ಶ್ರಮವಲ್ಲದೆ ತಂತ್ರಗಾರಿಕೆಯನ್ನೂ ಹೆಣೆಯಬೇಕಾಗುತ್ತದೆ.
ಕೇಂದ್ರದಲ್ಲಿ ಬಿಜೆಪಿ ಮಿತ್ರಪಕ್ಷಗಳ ಸಹಕಾರ ದೊಂದಿಗೆ ಅಧಿಕಾರ ನಡೆಸುತ್ತಿದೆ. ಈ ಮಿತ್ರರನ್ನು ಸಂಭಾಳಿಸಬೇಕಾಗುತ್ತದೆ. ಈಗೇನೋ ಮಿತ್ರರು ಹೊಂದ್ಕೊಂಡಿದ್ದಾರೆ. ಆದರೆ ಕಾಲ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ.ರಾಜಕೀಯ ಇಂದಿದ್ದಂತೆ ಮುಂದೆಯೂ ಇರುತ್ತದೆಂದು ಹೇಳಕ್ಕೆ ಆಗಲ್ಲ.ದೇಶದ ಜನರಿಗೆ ಯುವನಾಯಕ ಆಗಿರುವ ನಿತಿನ್ ಅದನ್ನೆಲ್ಲ ಹೇಗೆ ನಿರ್ವಹಿಸುತ್ತಾರೆಂಬ ಕುತೂಹಲವಂತೂ ಇರುತ್ತದೆ.
ಹೇಳಿ ಕೇಳಿ ಇದು ಜೆನ್ ಝೀಗಳ ಯುಗ. ಯುವ ಪೀಳಿಗೆಯೇ ದೇಶದ ಆಗುಹೋಗುಗಳನ್ನು ನಿರ್ಣಯಿಸುವ ಕಾಲಘಟ್ಟದಲ್ಲಿ ನಿತಿನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಅತ್ಯಂತ ಸಕಾಲಿಕ. ಯುವಕರನ್ನು ಮತ್ತಷ್ಟು ಪ್ರಮಾಣದಲ್ಲಿ ಪಕ್ಷದತ್ತ ಸೆಳೆಯುವ ಸವಾಲು ಕೂಡ ಅವರ ಮುಂದಿದೆ.
ಯುವನಾಯಕನೊಬ್ಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪದವಿಗೇರಿರುವ ವಿದ್ಯಮಾನವು ಕರ್ನಾಟಕ ರಾಜ್ಯ ಬಿಜೆಪಿಗೂ ಒಂದು ಎಚ್ಚರಿಕೆಯ ಸಂದೇಶ ವನ್ನು ರವಾನಿಸಿದೆ. ಕೆಲವು ಹಿರಿಯ ನಾಯಕರ ಸ್ವಪ್ರತಿಷ್ಟೆ , ಅಹಂಗಳಿಂದ ರಾಜ್ಯ ಬಿಜೆಪಿಯು "ಮನೆಯೊಂದು ಮೂರು ಬಾಗಿಲು" ಆಗ್ಬಾರ್ದೆಂಬ ಸ್ಪಷ್ಟ ಸಂದೇಶ ಅದ್ರಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಅಂತ್ಯಗೊಳ್ಳಬೇಕಾದರೆ ಈ ಸ್ಪಷ್ಟ ಸಂದೇಶವನ್ನು ರಾಜ್ಯ ಬಿಜೆಪಿ ಅನುಷ್ಠಾನಕ್ಕೆ ತರಲೇಬೇಕಾಗಿದೆ. (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,)
*ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂಥೆ ಉರಿಯುವಾ🔥🔥🚩*
*ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ*🙏🏻🚩