ಹುಡುಗಿಯಾಗಿದ್ದ ಗಂಗೆ ನದಿಯಾದ ಕಥೆ:-
ಭಗವಂತ ವಾಮನ ಅವತಾರದಲ್ಲಿ ಬಂದು, ಬಲಿ ಚಕ್ರವರ್ತಿಯಿಂದ ಮೂರು ಹೆಜ್ಜೆ ದಾನ ತೆಗೆದುಕೊಳ್ಳಲು ತ್ರಿವಿಕ್ರಮ ನಾಗಿ ಬೆಳೆದು ನಿಂತು, ಮೊದಲು ಮೇಲಿನ ಲೋಕವನ್ನು ಅಳೆಯುವಾಗ ವಾಮನನ ಒಂದು ಪಾದದ ಉಗುರಿನ ಕೊನೆ ದೇವ ಲೋಕದ ಬಂಗಾರದ ಗೋಡೆಗೆ ತಗುಲಿ, ಬಿರುಕು ಬಿಟ್ಟ ಕಾರಣ ಭೂಮಂಡಲದ ಹೊರಗಿರುವ ನೀರೆಲ್ಲ ಒಳಗೆ ಬಂದಿತು. ನೀರಿನಿಂದ ಬ್ರಹ್ಮಾಂಡವೇ ಮುಳುಗಿ ಹೋಗುತ್ತಿತ್ತು. ಆಗ ಬ್ರಹ್ಮದೇವನು ತನ್ನ ಕಮಂಡಲ ದಲ್ಲಿ ನೀರನ್ನೆಲ್ಲ ಹಿಡಿದು, ಅದರಿಂದ ವಿಷ್ಣುವಿನ ಪಾದ ತೊಳೆದಾಗ ಪಾದದಿಂದ ಹರಿದು ಬಂದ ನೀರು 'ಗಂಗೆ' ಯಾದಳು.
ಎರಡನೇ ಜನ್ಮದಲ್ಲಿ, ಮೇನಾ ದೇವಿ ಮತ್ತು ಹಿಮವಂತ ರಾಜನಿಗೆ 'ಗಂಗೆ' ಹಿರಿಯ ಮಗಳಾಗಿ, ಪಾರ್ವತಿ ದೇವಿ ಎರಡನೇ ಮಗಳಾಗಿ, ಮೂರನೇ ಮಗ ನಾಗಿ ಮೈನಾಕ ಪರ್ವತ ಹುಟ್ಟಿದರು. ಕಾರಣಾಂತರದಿಂದ ಬಾಲ್ಯದಲ್ಲಿಯೇ ಗಂಗೆ ದೇವಲೋಕಕ್ಕೆ ಹೋದಳು. ಆದರೆ ಮತ್ತೆ ಭೂಮಿಗೆ ಇಳಿದು ಬರಬೇಕಾದ ಸಂದರ್ಭ ಬಂದಿತು.
ನದಿಯಾಗಿ ಹರಿದು ಬರಲು ಕಾರಣ, ಪರ್ವತರಾಜ ಹಿಮವಂತನ ಹಿರಿಯ ಮಗಳಾಗಿದ್ದಳು ಗಂಗೆ, ಚಿಕ್ಕ ಹುಡುಗಿಯಾ ಗಿದ್ದಾಗಲೇ ದೇವಲೋಕಕ್ಕೆ ಬಂದವಳು. ಮತ್ತೆ ಅವಳು ಭೂಲೋಕಕ್ಕೆ ಹೋಗಲಿಲ್ಲ. ಬಾಲಕಿ ಗಂಗೆಯನ್ನು ಬ್ರಹ್ಮನು ಬೆಳೆಸಿ ಅವಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದ. ಬಾಲಕಿಯಾಗಿದ್ದ ಗಂಗೆ ಒಮ್ಮೆ ಭೂಲೋ ಕದ ನದಿ ಹತ್ತಿರ ಆಟವಾಡುತ್ತಿದ್ದಳು. ಆ ಸಮಯದಲ್ಲಿ ದೂರ್ವಾಸ ಮುನಿಗಳು ಸ್ನಾನ ಸಂಧ್ಯಾವಂದನೆ ಮಾಡಲು ನದಿಗೆ ಬಂದಿದ್ದರು. ಎಲ್ಲಾ ಮುಗಿಸಿ ಇನ್ನೇನು ಹೊರಡಬೇಕು ಎಂದು ಎರಡು ಹೆಜ್ಜೆ ಮುಂದಿಟ್ಟರು, ದೂರ್ವಾಸರ ಮೈ ಮೇಲಿ
ನ ಬಟ್ಟೆ ಗಾಳಿಯಲ್ಲಿ ಹಾರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಅದನ್ನು ಹಿಡಿಯ ಲು ದೂರ್ವಾಸರು ಬಹಳ ಪ್ರಯತ್ನ ಪಡು ತ್ತಿದ್ದರು ಆದರೆ ಅವರ ಕೈಗೆ ಸಿಗುತ್ತಿರಲಿಲ್ಲ.
ಆಡುತ್ತಿದ್ದ ಬಾಲಕಿ ಗಂಗೆಗೆ ದೂರ್ವಾಸರ ಪರದಾಟ ನೋಡಿ ತಡೆಯ ಲಾರದಷ್ಟು ನಗು ಬಂದಿತು. ಎಷ್ಟೇ ಪ್ರಯತ್ನಿಸಿದರೂ ಅವಳಿಂದ ನಗು ತಡೆಯಲು ಆಗಲಿಲ್ಲ. ನೋಡಿದ ದುರ್ವಾಸರಿಗೆ ಕೋಪ ಬಂದಿ ತು. ಮೊದಲೇ ಕೋಪಿಷ್ಟರಾದ ಅವರು, ಇದೇನಿದು ನನ್ನ ಸ್ನಾನದ ಬಟ್ಟೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ನನ್ನ ಸ್ಥಿತಿಯನ್ನು ನೋಡಿ ಈ ಚಿಕ್ಕ ಹುಡುಗಿ ನಗುತ್ತಿದ್ದಾಳಲ್ಲ ಎಂದುಕೊಂಡು, ಗಂಗೆಯನ್ನು ಕರೆದು ನೀನು ದೇವತೆಯಾಗಿ ಸ್ವರ್ಗದಲ್ಲಿ ಸಂತೋ ಷವಾಗಿ ಓಡಾಡಿಕೊಂಡಿದ್ದೆ. ಭೂಲೋಕಕ್ಕೆ ಬಂದು ಇಂದಿನ ನನ್ನ ಸ್ಥಿತಿಯನ್ನು ನೋಡಿ ನಗುತ್ತಿದ್ದೀಯಾ? ನೀನು ಸಹ ಈ ಭೂಮಿ ಯಲ್ಲಿ ನದಿಯಾಗಿ ಹರಿದಾಡಿ ಕೊಂಡಿರು ವಂತೆ ಎಂದು ಶಾಪ ಕೊಟ್ಟು ಹೋದರು.
ಇದನ್ನೆಲ್ಲಾ ನೋಡಿ ಪುಟ್ಟ ಹುಡುಗಿ ಗಂಗೆ ಮನಸ್ಸಿಗೆ ನೋವಾಯಿತು. ತಾನು ನಕ್ಕಿದ್ದು ಅವಳಿಗೆ ತಪ್ಪು ಎಂದು ಈಗ ಅರ್ಥವಾಗುತ್ತಿದೆ. ಆದರೆ ಕಾಲ ಮಿಂಚಿ ಹೋಗಿತ್ತು ದುರ್ವಾಸರು ಶಾಪ ಕೊಟ್ಟಾ ಗಿದೆ. ಏನು ಮಾಡಲೂ, ತಿಳಿಯದೇ ಮಾಡಿದ ತಪ್ಪಿಗೆ ದುರ್ವಾಸರ ಶಾಪಕ್ಕೆ ಗುರಿಯಾದ ವಿಚಾರವನ್ನು ಬ್ರಹ್ಮನಿಗೆ ಹೇಳಿದಳು. ಶಾಪದ ಪ್ರಕಾರ ಭೂಮಿಯ ಲ್ಲಿ ನದಿಯಾಗಿ ಒಬ್ಬಂಟಿಯಾಗಿ ಹರಿಯು ವುದು ನನಗೆ ಇಷ್ಟವಿಲ್ಲ. ಏನಾದರೂ ಮಾಡಿ ಶಾಪವನ್ನು ವಾಪಸ್ಸು ಪಡೆವಂತೆ ತಿಳಿಸಿ ಎಂದು ಬ್ರಹ್ಮನಲ್ಲಿ ಬೇಡಿದಳು. ಆದರೆ ಯಾವುದೇ ಋಷಿಮುನಿಗಳು ಕೊಟ್ಟ ಶಾಪ ಹಿಂಪಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ ಬ್ರಹ್ಮ, ಆದರೆ ನಾನು ನಿನಗೆ, ಒಂದು ಅವಕಾಶ ಕೊಡುತ್ತೇನೆ. ನೀನು ಭೂಲೋಕದಲ್ಲಿ ನದಿಯಾಗಿ ಹರಿಯು ವಾಗ ನಿನ್ನನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅವರು ಮಾಡಿದ ಪಾಪಗಳನ್ನು ನಿನ್ನ ನದಿಯಲ್ಲಿ ಸ್ನಾನ ಮಾಡಿ ಅವರ ಪಾಪ ತೊಳೆದು ಕೊಳ್ಳು ವಂತೆ ವರ ಕೊಡುತ್ತೇನೆ. ಇದರಿಂದ ನೀನು ಭೂಲೋಕದಲ್ಲಿ ಒಬ್ಬಂಟಿಯಾಗಿ ಇದ್ದೇನೆ ಎಂದು ಅನಿಸುವುದಿಲ್ಲ ಎಂದು ಬ್ರಹ್ಮ ಹೇಳಿದ.
ಬ್ರಹ್ಮನ ಮಾತು ಕೇಳಿದ ಗಂಗೆ ಒಪ್ಪಿ ಕೊಂಡು ದೂರ್ವಾಸರಲ್ಲಿಗೆ ಬಂದು ಕ್ಷಮೆ ಯಾಚಿಸುತ್ತಾಳೆ. ದೂರ್ವಾಸರು ಪ್ರಸನ್ನ ರಾಗಿ ಬ್ರಹ್ಮನ ಹೇಳಿದಂತೆ ನೀನು, ಭೂ ಲೋಕದಲ್ಲಿ ನದಿಯಾಗಿ ಹರಿಯುವೆ. ಜನಗಳು ತಾವು ಮಾಡಿದ ಪಾಪವನ್ನು ಪವಿತ್ರ ಗಂಗಾ ನದಿಯಲ್ಲಿ ಮಿಂದು ಪರಿ ಹರಿಸಿಕೊಳ್ಳುತ್ತಾರೆ. ಹಾಗೆ ನೀನು ದೇವ ಲೋಕ ಭೂಲೋಕ ಪಾತಾಳಲೋಕ ಹೀಗೆ ಮೂರು ಲೋಕಗಳಲೂ ಪವಿತ್ರ ನದಿಯಾ ಗಿ ಹರಿಯುತ್ತಾ, ಭೂಲೋಕದಲ್ಲಿ ಪಾಪನಾಶಿನಿ 'ಗಂಗೆ' ಯಾಗಿ ಹೆಸರು ಪಡೆಯುವೆ ಎಂದು ಆಶೀರ್ವದಿಸಿದರು.
ಇತ್ತ ಭಗೀರಥನು, ತನ್ನ ಮುತ್ತಾತಂದಿರಿಗೆ ಮುಕ್ತಿ ಕೊಡಿಸುವ ಸಲುವಾಗಿ, ಕಠಿಣ ತಪಸ್ಸು ಮಾಡಿ ಭೂಮಿಗೆ ಗಂಗೆಯನ್ನು ಹರಿಸುವಂತೆ ಕೇಳಿದಾಗ ಬ್ರಹ್ಮನು ಹರಿಸಿ ದನು. ಅವಳ ರಭಸವನ್ನು ತಡೆಯಲು ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿ ನಿಧಾನವಾಗಿ ಗಂಗೆಯನ್ನು ಇಳಿಸುತ್ತಾನೆ. ಹೀಗೆ ಗಂಗೆ 3 ಜನ್ಮಗಳತ್ತಿ, ಹರಿ-ಹರ- ಬ್ರಹ್ಮರ ಮೂಲಕ ಭೂಮಿಗೆ ಹರಿದು 'ಪವಿತ್ರ ಗಂಗೆ'ಯಾದಳು.
ಭಗೀರಥನ ಮುತ್ತಾತಂದಿರ ಕುರಿತು:
ಇಕ್ಷ್ವಾಕುವಂಶದ ಸಗರ ಚಕ್ರವರ್ತಿ,ಅಶ್ವ ಮೇಧ ಯಾಗ ಮಾಡಲು ಯಾಗದ ಕುದುರೆಯನ್ನು ಬಿಟ್ಟಾಗ, ಇಂದ್ರ ಅದನ್ನು ಅಪಹರಿಸಿ 'ಕಪಿಲ' ಮುನಿಗಳ ಆಶ್ರಮ ದಲ್ಲಿ ಬಿಟ್ಟನು. ಸಗರ ಚಕ್ರವರ್ತಿಯ 60 ಸಾವಿರ ಮಕ್ಕಳು ಕುದುರೆಯನ್ನು ತರಲು ಹೊರಟವರು ಕಪಿಲ ಮುನಿಗಳ ಆಶ್ರಮ ದಲ್ಲಿದ್ದ ಕುದುರೆಯನ್ನು ನೋಡಿ ಅವರೇ ಕದ್ದಿದ್ದಾರೆಂದು ತಪ್ಪು ತಿಳಿದು, ಅವರ ತಪಸ್ಸಿಗೆ ತೊಂದರೆ ಮಾಡಿದರು.'ಕಪಿಲ' ಮುನಿಗಳ ಕೋಪದ ಶಾಪಕ್ಕೆ ಗುರಿಯಾಗಿ ಸಗರ ಚಕ್ರವರ್ತಿಯ 60.000 ಮಕ್ಕಳು ಸುಟ್ಟು ಭಸ್ಮವಾದರು.ಆದರೆ ಅವರಿಗೆ ಮೋಕ್ಷ ಸಿಗಲಿಲ್ಲ. ಮೋಕ್ಷ ಕೊಡಿಸುವ ಸಲುವಾಗಿ ಸಗರ ಚಕ್ರವರ್ತಿಯ ಇನ್ನೊಬ್ಬ ಮಗ ಅಸಮಂಜಸ, ಅವನ ಮಗ ಅಂಶು ಮಂತ, ಇವನ ಮಗ ದಿಲೀಪ, ಇವರೆಲ್ಲ ರೂ ಮೋಕ್ಷ ಕೊಡಿಸಲು ಸಾವಿರಾರು ವರ್ಷ ಕಾಲ ತಪಸ್ಸು ಮಾಡಿ ವೃದ್ಧರಾದು ದರಿಂದ ನಿಧನಹೊಂದಿದರು. ಆದರೆ ಇವರೆಲ್ಲರ ತಪಸ್ಸಿನ ಪುಣ್ಯದ ಫಲ ಹಾಗೆ ಇದ್ದು, ಮುಂದೆ ದಿಲೀಪನ ಮಗ ಭಗೀರಥ ಎಂಬ ರಾಜನು ಒಂಟಿ ಕಾಲಿನಲ್ಲಿ ನಿಂತು, ಬ್ರಹ್ಮನನ್ನು, ನಂತರ ಶಿವನನ್ನು ಕುರಿತು ತಪಸ್ಸು ಮಾಡಿ ತನ್ನ 60000 ಮುತ್ತಾ ತಂದಿರಿಗೆ ಮುಕ್ತಿಯನ್ನು ಕೊಡಿಸಿ ಎಂದು ಕಪಿಲ ಮುನಿಗಳನ್ನು ಬೇಡಿಕೊಂಡನು. ಪರಮೇಶ್ವರನು ಗಂಗೆಯನ್ನು ಧರೆಗಿಳಿಸಿದನು. ಈ ರೀತಿಯಾಗಿ ಭಗೀರಥನ ಪ್ರಯತ್ನದಿಂದಾಗಿ ಗಂಗೆ ಭೂಲೋಕಕ್ಕೆ ನದಿಯಾಗಿ ಹರಿದು ಬಂದಳು.
❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️
#😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್