Malgudi Express
566 views
1 days ago
#📜ಪ್ರಚಲಿತ ವಿದ್ಯಮಾನ📜 ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ ದೆಹಲಿ: ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಪತನ ಕಂಡು ಆಡಳಿತಾರೂಢ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಮರ್ಥಕರ ಬಾಯಿ ಮುಚ್ಚಿಸಿದೆ. ಜನವರಿ 21, 2026ರಂದು ಅಮೆರಿಕನ್ ಡಾಲರ್ ಎದುರು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಪತನದಲ್ಲಿ ನೂತನ ದಾಖಲೆ ಸ್ಥಾಪಿಸಿದೆ. ಮೋದಿ ಆಪ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸುತ್ತಿರುವ ವಿವೇಚನಾರಹಿತ ತೆರಿಗೆ, ರಷ್ಯಾ – ಉಕ್ರೇನ್ ವಿರಸ, ತೈಲ ರಾಷ್ಟ್ರಗಳಲ್ಲಿ ಉಂಟಾಗಿರುವ ಅನಿಶ್ಚಿತತೆ ಮೊದಲಾದ ಕಾರಣಗಳು ಸೇರಿ ರೂಪಾಯಿ ಬಲಹೀನವಾಗಿದ್ದು, ಡಾಲರ್ ಬೆಲೆ ಗಗನಕ್ಕೇರಿದೆ. ಬುಧವಾರ ಜ.21ರಂದು ರೂಪಾಯಿ ಮೌಲ್ಯ 68 ಪೈಸೆ ಕುಸಿದು, ಒಂದು ಡಾಲರ್‌ಗೆ ಕನಿಷ್ಠ 91.66 ರೂಪಾಯಿಗೆ ತಲುಪುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಕುಸಿದಿದೆ. ರೂಪಾಯಿ 91.28ರ ಕನಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿ, ಇಂದು 91.66 ರೂಪಾಯಿಗೆ ಕುಸಿಯಿತು. ಇದರೊಂದಿಗೆ ಷೇರು ಮಾರುಕಟ್ಟೆ ಕೂಡ ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ನಿಫ್ಟಿ 75 ಅಂಶಗಳಷ್ಟು ಕುಸಿತ ಕಂಡು 25157.50 ಅಂಶಕ್ಕೆ ದಿನದ ವಹಿವಾಟು ಮುಗಿಸಿದರೆ, ಸೆನ್ಸೆಕ್ಸ್ 270.84 ಅಂಶಗಳನ್ನು ಕಳೆದುಕೊಂಡು ದಿನದ ವಹಿವಾಟಿನ ಅಂತ್ಯಕ್ಕೆ 81919.60 ಅಂಶಕ್ಕೆ ಕುಸಿಯಿತು. ಮಧ್ಯಾಹ್ನ 3:30ರ ವೇಳೆಗೆ ಬಂಗಾರದ ಬೆಲೆ 10 ಗ್ರಾಂಗೆ 7,145 ರೂಪಾಯಿ ಏರಿಕೆಯಾಗಿ, 1,57,710 ರೂಪಾಯಿಗೆ ತಲುಪಿದರೆ, ಬೆಳ್ಳಿ ದರ (1 ಕೆಜಿ) 10,982 ರೂ. ಏರಿಕೆಯಾಗಿ 3,34,654 ರೂಪಾಯಿ ತಲುಪಿತು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾಡಿದ್ದ ಹಳೆಯ ಟ್ವೀಟ್ ನೋಡಿ… https://x.com/TheShilpaShetty/status/369741251912163328?s=20 ನಿಮ್ಮ ಅಭಿಪ್ರಾಯ ತಿಳಿಸಿ. #Rupee #hits #alltime #low #against #dollar #malgudiexpress #malgudinews #news #TopNews