manmohan
506 views
1 days ago
ಇನ್ನು ಕೇವಲ 79 ರೂ.ಗೆ JioHotstar ಚಂದಾದಾರಿಕೆ: ಇಲ್ಲಿದೆ ಪೂರ್ತಿ ಮಾಹಿತಿ! ಭಾರತದ ಪ್ರಮುಖ ಆನ್‌ಲೈನ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಒಂದಾದ ಜಿಯೋಹಾಟ್‌ಸ್ಟಾರ್ (JioHotstar) ತನ್ನ ಚಂದಾದಾರಿಕೆ ಮಾದರಿಯನ್ನು ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಿದೆ. ಜನವರಿ 28ರಿಂದ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯಲ್ಲಿ ಬದಲಾವಣೆಯಾಗಲಿದ್ದು, ಎಲ್ಲಾ ಪ್ಲ್ಯಾನ್‌ಗಳಿಗೂ ಮಾಸಿಕ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ. ಇಲ್ಲಿ ಸಿಹಿಸುದ್ದಿ ಏನೆಂದರೆ, ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯ ಆರಂಭಿಕ ದರ ಕೇವಲ 79 ರೂ.ಗಳು.! ಹಾಗಾದರೆ, ಹೊಸದಾಗಿ ಬರುತ್ತಿರುವ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ. ಜಿಯೋಹಾಟ್‌ಸ್ಟಾರ್ ಪರಿಚಯಿಸುತ್ತಿರುವ ಹೊಸ ಚಂದಾದಾರಿಕೆ ವ್ಯವಸ್ಥೆಯಲ್ಲಿಯೂ ಮೊಬೈಲ್, ಸೂಪರ್ ಮತ್ತು ಪ್ರೀಮಿಯಂ ಎಂಬ ಮೂರು ಹಂತದ ಚಂದಾದಾರಿಕೆಗಳನ್ನು ಮುಂದುವರಿಸಲಾಗದೆ. ಮೊಬೈಲ್ ಮತ್ತು ಸೂಪರ್ ಪ್ಲ್ಯಾನ್‌ಗಳು ಜಾಹೀರಾತು ಆಧಾರಿತವಾಗಿದ್ದು, ದಿನನಿತ್ಯದ ಮನರಂಜನೆಗಾಗಿ ಕಡಿಮೆ ದರದ ಆಯ್ಕೆಗಳನ್ನು ಹುಡುಕುವ ಬಳಕೆದಾರರಿಗೆ ಉದ್ದೇಶಿಸಲಾಗಿದೆ. ಪ್ರೀಮಿಯಂ ಪ್ಲ್ಯಾನ್ ಮಾತ್ರ ಹೆಚ್ಚು ಗುಣಮಟ್ಟದ ವೀಕ್ಷಣಾ ಅನುಭವವನ್ನು ಬಯಸುವ ಕುಟುಂಬಗಳು ಮತ್ತು ದೊಡ್ಡ ಪರದೆ ಬಳಕೆದಾರರತ್ತ ಗಮನಹರಿಸಿದೆ. ಈ ಪ್ಲ್ಯಾನ್‌ಗಳ ಲಾಭಗಳು ಈ ಕೆಳಕಡಂತಿವೆ. 79 ರೂ.ಗೆ ಮೊಬೈಲ್ ಪ್ಲ್ಯಾನ್: ಜಿಯೋಹಾಟ್‌ಸ್ಟಾರ್ ಮೊಬೈಲ್ ಪ್ಲ್ಯಾನ್‌ನಲ್ಲಿ ಒಬ್ಬ ಬಳಕೆದಾರರು ಒಂದೇ ಸಮಯದಲ್ಲಿ ಒಂದೇ ಮೊಬೈಲ್ ಸಾಧನದಲ್ಲಿ ಕಂಟೆಂಟ್ ವೀಕ್ಷಿಸಲು ಅವಕಾಶವಿರುಂತೆ ರೂಪಿಸಲಾಗಿದೆ. ಇದರ ಮಾಸಿಕ ಶುಲ್ಕ ರೂ.79 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.149 ಮತ್ತು ವಾರ್ಷಿಕ ಪ್ಲ್ಯಾನ್ ರೂ.499 ದರದಲ್ಲಿ ಲಭ್ಯವಿದೆ. ಈ ಪ್ಲ್ಯಾನ್‌ನಲ್ಲಿ 720p ಎಚ್‌ಡಿ ಸ್ಟ್ರೀಮಿಂಗ್ ಸಿಗುತ್ತದೆ. ಆದರೆ ಹಾಲಿವುಡ್ ಸಿನಿಮಾಗಳು ಮತ್ತು ಸೀರಿಸ್‌ಗಳು ಈ ಪ್ಯಾಕ್‌ನಲ್ಲಿ ಸೇರಿಲ್ಲ. ಅವುಗಳನ್ನು ಪ್ರತ್ಯೇಕ ಆಡ್‌ಓನ್ ರೂಪದಲ್ಲಿ ಪಡೆಯಬೇಕಿದ್ದು, ಇದಕ್ಕೆ ಮಾಸಿಕ ರೂ.49 ವೆಚ್ಚವಾಗುತ್ತದೆ. ತ್ರೈಮಾಸಿಕ ಮತ್ತು ವಾರ್ಷಿಕ ಅಡ್‌ಓನ್‌ಗಳ ದರಗಳು ಕ್ರಮವಾಗಿ ರೂ.129 ಮತ್ತು ರೂ.399 ಆಗಿವೆ. ಎರಡು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ: ಜಿಯೋಹಾಟ್‌ಸ್ಟಾರ್ ಸೂಪರ್ ಪ್ಲ್ಯಾನ್ ಕುಟುಂಬದ ಚಿಕ್ಕ ಬಳಕೆಗೆ ಸೂಕ್ತವಾಗಿದ್ದು, ಒಂದೇ ಸಮಯದಲ್ಲಿ ಎರಡು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ ನೀಡುತ್ತದೆ. 1080p ಫುಲ್ ಎಚ್‌ಡಿ ಗುಣಮಟ್ಟದ ಸ್ಟ್ರೀಮಿಂಗ್‌ ಜೊತೆಗೆ ಮೊಬೈಲ್, ವೆಬ್ ಮತ್ತು ಬೆಂಬಲಿತ ಸ್ಮಾರ್ಟ್ ಟಿವಿಗಳಲ್ಲಿ ಕಂಟೆಂಟ್ ನೋಡಬಹುದು. ಇದರ ಮಾಸಿಕ ದರ ರೂ.149 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.349 ಮತ್ತು ವಾರ್ಷಿಕ ಪ್ಲ್ಯಾನ್ ರೂ.1,099 ದರದಲ್ಲಿ ಲಭ್ಯವಿದೆ. ಈ ಪ್ಲ್ಯಾನ್‌ನಲ್ಲಿ ಹಾಲಿವುಡ್ ಕಂಟೆಂಟ್ ಕೂಡ ಬೇಸ್ ಪ್ಯಾಕ್‌ನಲ್ಲೇ ಸೇರಿದೆ. ದೊಡ್ಡ ಪರದೆಗಳಲ್ಲಿ ಮನರಂಜನೆ: ಹೊಸದಾಗಿ ಪರಿಚಯವಾಗುತ್ತಿರುವ ಪ್ರೀಮಿಯಂ ಪ್ಲ್ಯಾನ್ ಜಿಯೋಹಾಟ್‌ಸ್ಟಾರ್‌ನ ಅತ್ಯುತ್ತಮ ಆಯ್ಕೆಯಾಗಿದ್ದು, ದೊಡ್ಡ ಪರದೆಗಳಲ್ಲಿ ಮನರಂಜನೆ ಆನಂದಿಸುವವರಿಗೆ ವಿನ್ಯಾಸಗೊಳಿಸಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ, 4K ರೆಸಲ್ಯೂಶನ್ ಮತ್ತು ಡಾಲ್ಬಿ ವಿಷನ್ ಬೆಂಬಲ ಇದರ ಪ್ರಮುಖ ಆಕರ್ಷಣೆ. ಇದರ ಮಾಸಿಕ ದರ ರೂ.299 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.699 ಮತ್ತು ವಾರ್ಷಿಕ ಪ್ಲ್ಯಾನ್ ರೂ.2,199. ಲೈವ್ ಕ್ರೀಡೆಗಳು ಮತ್ತು ನೇರ ಪ್ರಸಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಕಂಟೆಂಟ್ ಜಾಹೀರಾತು ರಹಿತವಾಗಿ ಲಭ್ಯವಿರುತ್ತದೆ. #LATEST #TECHNOLOGY #JIOHOTSTAR #SUPER #PREMIUM #PLANS #FULLHD