#🚨ಮೈಸೂರು ಅರಮನೆ ಮುಂದೆ ಭಾರಿ ಸ್ಫೋಟ, ದೇಹ ಛಿದ್ರ ಛಿದ್ರ! 🚨 ಮೈಸೂರು ಅರಮನೆ ಮುಂದೆ ಸ್ಪೋಟಕ ವಸ್ತುಗಳನ್ನು ಹೇಗೆ ಇಟ್ಟುಕೊಂಡರು ಅವರ ಉದ್ದೇಶ ಏನಾಗಿತ್ತು?? ತನಿಖೆ ನಡೆಯಲೇಬೇಕು,, ಮೈಸೂರು ಅರಮನೆ ದ್ವಾರದ ಬಳಿ ಹೀಲಿಯಮ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿರುವ ಸುದ್ದಿ ತಿಳಿದು ದುಃಖ ವಾಯಿತು.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಸುಡುವ / ಸ್ಫೋಟಕ ವಸ್ತುಗಳನ್ನು ಇಡುವುದು ಸುರಕ್ಷಿತವಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅವಘಡಗಳನ್ನು ಊಹಿಸಿ ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ.
ಗಾಯಗೊಂಡವರು ಶೀಘ್ರ ಗುಣಮುಖರಾಗಲಿ, ಪ್ರಸನ್ನ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಚಾಮರಾಜನಗರ