Malgudi Express
600 views
#📜ಪ್ರಚಲಿತ ವಿದ್ಯಮಾನ📜 ನೇಕಾರ ಸಮ್ಮಾನ್‌ ಯೋಜನೆಯ ನೆರವಿನ ಪ್ರಮಾಣ ಹೆಚ್ಚಳ ಪರಿಶೀಲನೆಯಲ್ಲಿದೆ: ಶಿವಾನಂದ ಪಾಟೀಲ ಬೆಂಗಳೂರು: ನೇಕಾರ ಸಮ್ಮಾನ್‌ ಯೋಜನೆಯ ನೆರವಿನ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆಯ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರ ನೀಡುತ್ತಿರುವ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದ ಯೋಜನೆಗಳು ಮಾದರಿಯಾಗಿವೆ ಎಂದರು. ನೇಕಾರರಿಗೆ 2008-13ರ ಅವಧಿಯಲ್ಲಿ 145 ಕೋಟಿ ರೂ. ,  2013-18ರ ಅವಧಿಯಲ್ಲಿ 691 ಕೋಟಿ ರೂ. ಸಬ್ಸಿಡಿ ನೀಡಲಾಗಿತ್ತು. ಈ ಅವಧಿಯಲ್ಲಿ  824 ಕೋಟಿ ರೂ. ನೆರವು ನೀಡಲಾಗಿದೆ ಎಂದು ವಿವರಿಸಿದರು.ಜವಳಿ ಕ್ಷೇತ್ರದ ಉದ್ದಿಮೆದಾರರು, ನೇಕಾರರು ಹಾಗೂ ನೇಕಾರರ ಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮಾಡಿ 2025-30ರ ಅವಧಿಗೆ ನೂತನ ಜವಳಿ ನೀತಿ ಕರಡು ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು. #Increase #NekaraSamman #Yojana #assistance #amount #under #review #ShivanandPatil #malgudiexpress #malgudinews #news #TopNews