ಕದ್ದುಮುಚ್ಚಿ ಶಾಸ್ತ್ರೋಕ್ತವಾಗಿ ಮದುವೆ ಆದ್ರಾ ಧನುಶ್-ಮೃಣಾಲ್ ಠಾಕೂರ್? ಫೋಟೋಸ್ ವೈರಲ್ - AIN Kannada
ನಟ ಧನುಶ್ ಹಾಗೂ ನಟಿ ಮೃಣಾಲ್ ಠಾಕೂರ್ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಫೆಬ್ರವರಿ 14, ಪ್ರೇಮಿಗಳ ದಿನದಂದು ಇಬ್ಬರೂ ವಿವಾಹವಾಗಲಿದ್ದಾರೆ ಎಂಬ ಗಾಸಿಪ್ ಜೋರಾಗಿದ್ದು, ಈಗಾಗಲೇ ಕದ್ದು ಮುಚ್ಚಿ ಮದುವೆಯಾಗಿದಾರೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಫೋಟೋ ಹಾಗೂ ವಿಡಿಯೋ. ಅದರಲ್ಲಿ ಧನುಶ್ ಬಿಳಿ ಬಣ್ಣದ ಧೋತಿ–ಶರ್ಟ್ ಧರಿಸಿಕೊಂಡಿದ್ದು, ಮೃಣಾಲ್ ಠಾಕೂರ್ ಸೀರೆ ಉಟ್ಟಿದ್ದು, ಕೂದಲಿಗೆ ಮಲ್ಲಿಗೆ ಹೂ