Vikas Chandra
527 views
6 days ago
#😏ಇದೇ ಪ್ರಪಂಚ ಜೀವನದ ಬಗ್ಗೆ ನಮಗೆ ತಿಳಿಯದಿರುವ ಮೋಹ ಇದರರ್ಥ. ಯಾರಿಗೆ ಜೀವನ ಸರಿಯಾಗಿ ಅರ್ಥ ವಾಗಿಲ್ಲವೋ , ಯಾರು ಯಾವುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೊ , ಎಲ್ಲದರ ಬಗ್ಗೆ ನಮಗೆಷ್ಷೆ ಆಸೆ, ಬಯಕೆ ಮೋಹವಿದ್ದರೂ ನಾವದನ್ನು ಅನುಭವಿಸಲು ಸಾದ್ಯವಿಲ್ಲವೆಂದು ತಿಳಿದಾಗ ನಮಗೆ ಬೇಸರವಾಗುತ್ತದೆ.ನೆನಪಿಡಿ - ಜೀವನ ನಶ್ವರ ಎಂದು ತಿಳಿಯುವುದು ಸಂಪೂರ್ಣವಾಗಿ ಎಲ್ಲವನ್ನೂ ಅನುಭವಿಸಿದಾಗ,/ ಯಾವುದೂ ಬೇಡವೆಂದು ತಿರಸ್ಕರಿಸಿದಾಗ ಮಾತ್ರ. ಒಂದೇ ಜೀವನದಲ್ಲಿ ಎಲ್ಲವನ್ನೂ ಅನುಭವಿಸಲು ಸಾದ್ಯವೇ ಎಂದು ಪ್ರಶ್ನಿಸಿದಾಗ, ಇಲ್ಲ ಅದು ಸಾದ್ಯವಿಲ್ಲ, ಕಾರಣ ಪ್ರತೀ ಜನ್ಮದಲ್ಲೂ ನಾವು ಸುಕಾಸುಮ್ಮನೆ ಯಾವುದೆಲ್ಲವನ್ನೂ ಬಯಸುತ್ತೇವೊ ಅದನ್ನು ಅನುಭವಿಸುತ್ತಲೇ ಸಾಗುತ್ತೇವೆ , ಈ ಜನ್ಮದಲ್ಲಿ ಯಾವುದನ್ನು ಸರಿಯಾಗಿ ಅನುಭವಿಸಲು ಸಾದ್ಯವಿಲ್ಲದೆ ನೊಂದುಕೊಳ್ಳುತ್ತೇವೊ , ಅದಕ್ಕಾಗಿ ಅತಿ ಹೆಚ್ಚು ಶ್ರಮ/ಶ್ರದ್ಧೆ ಹಾಕಿರುತ್ತೇವೊ , ಆದರೂ ಅದು ಸಿಗದೆ ಕೊನೆಗೆ ನಾವು ಸಾವನ್ನಪ್ಪತ್ತೇವೊ ಅದು ನಮಗಾಗಿ ಕಾಯ್ದಿರಿಸಿದ ಮೀಸಲಾಗಿರುತ್ತದೆ. ಅದು ಕೈಹಾಕಿದರೂ ಹಾಕದಿದ್ದರೂ ಆಕಸ್ಮಿಕವಾಗಿ ಸಿಗುತ್ತದೆ. ಒಂದು ರೀತಿ ಪುಣ್ಯ/ಅದೃಷ್ಟದ ಹಾಗೆ. ಹೀಗೆ ಪ್ರತೀ ಜನ್ಮದಲ್ಲೂ ನಾವು ಪ್ರತಿಯೊಂದನ್ನೂ ಅನುಭವಿಸಿದ ನಂತರ ನಮಗೆ ಬದುಕು ಸಾಕೆನಿಸುತ್ತೆ .ಆಗ ಬದುಕು ನಶ್ವರ ಎಂಬ ಅರಿವಾಗುತ್ತದೆ ಮನುಷ್ಯ ಜೀವನದ ಹಾದಿಯಲ್ಲಿ ಸರಿಯಾಗಿ ನಡೆದುಕೊಳ್ಳುವುದನ್ನ ಕಲಿಯುತ್ತಾನೆ.