ಕರಿ ಎಳ್ಳು ಬಿಳಿಯಾಗಿಸಿ
ನೆಲಗಡಲೆ ಕೆಂಪಾಗಿಸಿ
ಹೆಚ್ಚಿದ ಸವಿ ಬೆಲ್ಲಸೇರಿಸಿ
ಒಂದಿಷ್ಟು ಹುರಿಗಡಲೆ ಬೆರೆಸಿ
ಬಿಳಿದಾದ ಕೊಬರಿಯಿಂದ ಸಿಂಗರಿಸಿ
ಮಲ್ಲಿಗೆಯ ಬಿಳುಪ ಅಚ್ಚ ತರಿಸಿ
ಜೊತೆಗೆ ಸಿಹಿಯಾದ ಕಬ್ಬನ್ನಿರಿಸಿ
ಕಿತ್ತಳೆ ಬಾಳೆಹಣ್ಣು ವೀಳ್ಯವಿರಿಸಿ
ನಿಮಗಾಗಿ ಎಳ್ಳು ಬೆಲ್ಲ ತಂದಿರಿಸಿ
ಸವಿಯಿರಿ ಮಾಗಿಯ ಚಳಿಯಲ್ಲಿ
ಸಂಕ್ರಾಂತಿಯ ಎಳ್ಳನ್ನು ಖುಷಿಯಲ್ಲಿ #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #😍 ನನ್ನ ಸ್ಟೇಟಸ್ #🤔ಜೀವನದ ಪಾಠಗಳು
ಒಳ್ಳೊಳ್ಳೆ ಮಾತಾಡಿ ಶುಭಕೋರಿ
ಕೊಡಲಿ ಸಕಲ ಭಾಗ್ಯವನ್ನು ಆ ಶ್ರೀಹರಿ
" ಸಂಕ್ರಾಂತಿ ಹಬ್ಬದ ಶುಭಾಶಯಗಳು "