Ram Ajekar
593 views
5 months ago
#🕺ಭಾನುವಾರದ ಶುಭಾಶಯಗಳು ರೈತನ ಬೆವರಿನ ಮೌಲ್ಯ, ಬದುಕು ಎಂದರೆ ಹೀಗೆ— ಕಷ್ಟದ ಹೊತ್ತಿನಲ್ಲಿ ಸುರಿದ ಬೆವರೇ ಸಂತೋಷದ ಬೆಳಕನ್ನು ತರುತ್ತದೆ. ಗದ್ದೆಯಲ್ಲಿ ಹಗಲಿರುಳು ಶ್ರಮಿಸಿ, ಮಣ್ಣಿಗೆ ಜೀವ ತುಂಬಿ, ಗೊಬ್ಬರ ಹಾಕಿ, ನಾಟಿ ಮಾಡಿ, ಉಳುಮೆ ನಡೆಸಿದಾಗ ಮಾತ್ರ ನಮ್ಮ ಬಾಯಿಗೆ ಅನ್ನದ ತುತ್ತು ತಲುಪುತ್ತದೆ. ನಾವು ತಿನ್ನುವ ಪ್ರತಿಯೊಂದು ಅಕ್ಕಿ ಕಣದಲ್ಲೂ ರೈತನ ಕನಸುಗಳು, ಅವನ ಶ್ರಮದ ಹನಿ, ಅವನ ಬದುಕಿನ ತುಂಡು ಸೇರಿಕೊಂಡಿರುತ್ತದೆ. ಆದರೂ ನಾವು “ಹೆಚ್ಚಾಗಿದೆ” ಎಂದು ಸುಲಭವಾಗಿ ಬಿಸಾಡಿಬಿಡುತ್ತೇವೆ. ಆ ತುತ್ತಿನ ಹಿಂದಿರುವ ನೋವು, ಬೆವರು, ಹೋರಾಟ ನಮಗೆ ಕಾಣುವುದಿಲ್ಲ. ಒಮ್ಮೆ ಕಾಲದಲ್ಲಿ ರೈತನಿಗೆ ಹೊಲವೇ ದೇವರ ಮಂದಿರ. ರಾತ್ರಿಯನ್ನೂ ಗದ್ದೆಯ ಅಂಗಳದಲ್ಲೇ ಕಳೆಯುತ್ತ, ಬೆಳೆ ಜಾನುವಾರುಗಳಿಂದ ರಕ್ಷಿಸುವ ಆತನ ಜೀವನ. ಎತ್ತರದ ಮರಕ್ಕೆ ಕಟ್ಟಿದ ಗಂಟೆಯ ಶಬ್ದದಲ್ಲೂ ಆತನ ಕನಸುಗಳ ತಾಳ, ಬದುಕಿನ ಹೋರಾಟದ ಹಾದಿ ಮೊಳಗುತ್ತಿತ್ತು. ರೈತನಿಗೆ ಪ್ರತಿಯೊಂದು ಅಕ್ಕಿ ದಾಣ್ಯವೇ ಪ್ರಾಣದಂತೆ. ಅವನು ತಿಳಿದಿದ್ದಾನೆ— ಒಂದು ಕಣ ವ್ಯರ್ಥವಾದರೂ ಅದು ತನ್ನ ಶ್ರಮವನ್ನು ಹಾಳು ಮಾಡುವುದು, ತನ್ನ ಬದುಕಿನ ಒಂದು ಭಾಗವೇ ಕಳೆದುಹೋಗುವುದು. ಅನ್ನವೆಂಬುದು ಕೇವಲ ಹೊಟ್ಟೆ ತುಂಬುವ ಆಹಾರವಲ್ಲ, ಅದು ರೈತನ ಹೃದಯದ ತುಂಡು, ಅವನ ಬೆವರಿನ ಪವಿತ್ರ ಪ್ರಸಾದ. ಆಹಾರವನ್ನು ವ್ಯರ್ಥ ಮಾಡಬೇಡಿ. ಅದು ರೈತನ ಪರಿಶ್ರಮದ ಮೌಲ್ಯ, ಅವನ ಬದುಕಿನ ಪ್ರತಿಬಿಂಬ. ರಾಂ ಅಜೆಕಾರು ಕಾರ್ಕಳ #FormerTulunad #TulunadHeritage #TulunadCulture #TulunadHistory #TulunadLegacy #TulunadPride #TulunadTradition #TulunadSpirit #TulunadVibes #TulunadRoots #ಶುಭ ರವಿವಾರ #ರವಿವಾರ....ರಜಾವಾರ.... ##💐ಶುಭ ರವಿವಾರ 🌄 #ಜೈ ಶ್ರೀ ಅಯ್ಯಪ್ಪಸ್ವಾಮಿ ಶುಭ ರವಿವಾರ 🚩