Ram Ajekar
802 views
2 months ago
ಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆ ಒಂದು ಕಾಲದಲ್ಲಿ ತುಳುನಾಡು ಮಲೆನಾಡಿನಲ್ಲೆಲ್ಲಾ ಹಸುಗಳ ಹಿಂಡೆಗಳು ಸಾಮಾನ್ಯವಾಗಿ ಕಾಣಿಸುತಿದ್ದವು. ಮಲೆನಾಡಿನ ಗಿಡ್ಡ ಹಸುಗಳು ರಸ್ತೆಗಳ ಬದಿಯಲ್ಲಿ ಮೇಯುತ್ತಾ, ತಮ್ಮ ಸದ್ದಿನಿಂದ ಊರನ್ನು ಗಲಿಬಿಲಿಗೊಳಿಸುತ್ತಿದ್ದ ಆ ದಿನಗಳು ಇನ್ನೂ ಮನಸ್ಸಿನಲ್ಲಿ ಹಸಿದಾಗಿವೆ. ತುಂಬಾ ತೊಂದರೆ ಕೊಡುವ, ಅಡ್ಡದಾರಿಯಲ್ಲಿ ಹೊಕ್ಕು ಗದ್ದೆ ಹಾಳುಮಾಡುವ ಹಸುಗಳಿಗೆ ಹಳ್ಳಿಯ ರೈತರು ಕುತ್ತಿಗೆಯಲ್ಲಿ ಮರದ ತುಂಡು ಕಟ್ಟುತ್ತಿದ್ದವರು. ಈ ಮರದ ತುಂಡಿನಿಂದ ಹಸುಗಳು ಗದ್ದೆಗೆ ನುಗ್ಗುವುದು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ರಸ್ತೆ ಬದಿಯಲ್ಲೇ ಹುಲ್ಲು ಮೇಯುತ್ತಾ ಹೊಟ್ಟೆ ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದವು. ಏನೇ ಬಳಲಲಿ ಹಸುವೂ ತನ್ನ ಹೊಟ್ಟೆಯ ಹಸಿವಿಗೋಸ್ಕರ ಸಾಗುವುದು ಸಹಜ. ಕೆಲವರು ಹಸುಗಳಿಗೆ ಕಂಚಿನ ಅಥವಾ ಕಬ್ಬಿಣದ ಘಂಟಾಮಣಿ ಕಟ್ಟುತ್ತಿದ್ದರು. ಕೆಲ ಹಳ್ಳಿಗರು ಬಿದಿರಿನಿಂದ ಮಾಡಿದ ಮೃದು ಧ್ವನಿಯ ಗಂಟೆಗಳನ್ನು ಬಳುಕುತ್ತಿದ್ದರು , ಹಸು ಇರುವಿಕೆಯ ಗುರುತು “ನಾನು ಇಲ್ಲಿದ್ದೇನೆ” ಎಂಬುದನ್ನು ರೈತನಿಗೆ ಸದ್ದಿನ‌ಮೂಲಕ ತಿಳಿಸುವ ಕೆಲಸ ಮಾಡುತಿತ್ತು. ಸಾಧಾರಣ ಹುಲ್ಲಿನಿಂದ ಹೊಟ್ಟೆ ತುಂಬದ ಕೆಲ ಜೋರು ಹಸುಗಳು ನಾಟಿದ ಗದ್ದೆಗಳಿಗೆ ಹೊಕ್ಕು ಭತ್ತದ ಚಿಗುರುಗಳನ್ನು ಸಾಕಷ್ಟು ತಿಂದುಬಿಡುತ್ತಿದ್ದವು. ಇದರಿಂದ ರೈತರು ಬೇಸರಗೊಂಡು ಮರದ ತುಂಡುಗಳನ್ನು “ಸ್ಪೀಡ್ ಗವರ್ನರ್” ಆಗಿ ಕುತ್ತಿಗೆಯಲ್ಲಿ ಕಟ್ಟುತ್ತಿದ್ದರು. ಹೀಗೆ ತೊಂದರೆ ಕೊಡುತ್ತಿದ್ದ ಹಸುಗಳಿಂದ ಕೆಲವು ಮನೆಗಳ ಯಜಮಾನರು ಸಹ ಬೇಸತ್ತು, ಆಕ್ರೋಶದಿಂದ ರೈತರ ನಡುವೆ ಗಲಾಟೆಗಳೂ ನಡೆಯುತಿದ್ದವು. ಒಮ್ಮೆ ಊರಿನ ಭೋಜಣ್ಣನ ಹಸು ಕೂಡಾ ಹೀಗೆಯೇ ಬೇರೆ ರೈತರ ಗದ್ದೆಗಳಿಗೆ ಹೋಗಿ ಬೆಳೆ ಹಾನಿ ಮಾಡುತ್ತಿತ್ತು. ಸಿಟ್ಟುಮಾಡಿ ಮೊದಲು ಗಂಟೆ ಕಟ್ಟಿ ನೋಡಿದರು . ಕೇಳದೇ ಹೋಗಿತ್ತು. ಭೋಜಣ್ಣನ ಹಾಗು ಪಕ್ಕದ ಮನೆಯ ರೈತನ ನಡುವೆ ಜಗಳವು ನಡೆದಿತ್ತು. ಬಳಿಕ ಕುತ್ತಿಗೆಗೆ ದೊಡ್ಡ ಮರದ ತುಂಡು ಕಟ್ಟಿಸಿ ಮೇಯಲು ಬಿಟ್ಟರು. ಸಂಜೆಯಾದರೂ ಹಸು ಮನೆಗೆ ಬರಲಿಲ್ಲ. ಚಿಂತೆಯಲ್ಲಿ ಮುಳುಗಿದ ಭೋಜಣ್ಣ ಸುತ್ತಲಿನಲ್ಲೇ ಹುಡುಕಲು ಶುರುಮಾಡಿದರು. ಇತ್ತೀಚೆಗೆ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಕೆಲಸ ನಡೆಯುತ್ತಿತ್ತು ಎನ್ನುವದು ನೆನಪಾಯಿತು. ಬೇರೆಯವರ ಗದ್ದೆಗಳಿಗೆ ಹೋಗುವ ಮಾರ್ಗವೂ ಅಲ್ಲಿಯೇ ಆಗಿತ್ತು. ಪೈಪ್ ಹಾಕುತ್ತಿದ್ದ ಹೊರರಾಜ್ಯದ ಭೈಯ್ಯನವರು ತಮಗೆ ಕೆಲಸ ಎಂದರೆ ಅಗೆದು ಹೋದರೆ ಸಾಕು, ಮಣ್ಣಿನಿಂದ ಮುಚ್ಚುವುದು, ಸುರಕ್ಷತೆ ಇತ್ಯಾದಿ ಅವರ ಗೊಣಗಾಟದಲ್ಲಿಲ್ಲ. ಸರಕಾರದ ಕೆಲಸಗಳೆ ಹಾಗೇ… ಅವರ ನಿರ್ಲಕ್ಷ್ಯದ ನಡುವೆ, ಭೋಜಣ್ಣನ ಹಸು ಕುತ್ತಿಗೆಯ ಮರದ ತುಂಡಿನಿಂದ ಹೊಂಡಕ್ಕೆ ಜಾರಿ ಸಿಲುಕಿತೋ? ಹೊಸ ಮಣ್ಣಿನ ವಾಸನೆಗೆ ಓಡಿತ್ತೋ? ಹಾದಿ ದಾಟಲು ಯತ್ನಿಸಿತ್ತೋ? ಯಾರು ಹೇಳಲು ಸಾಧ್ಯ? ಆದರೆ , ಹಸು ಹೊಂಡದೊಳಗೆ ಸಿಲುಕಿ ಉಸಿರುಗಟ್ಟಿಕೊಂಡಿತ್ತು. ರಾತ್ರಿ ತುಂಬಾ ಹುಡುಕಿ ಹೋದ ಭೋಜಣ್ಣಕ್ಕೆ, ಕೊನೆಗೆ ಹಸುವಿನ ಮೃತದೇಹ ಪೈಪ್‌ಲೈನ್ ಹೊಂಡದಲ್ಲಿ ಸಿಕ್ಕಿತು. ಆ ದಿನದ ನಂತರ ಉಳಿದ ಹಸುಗಳನ್ನು ಮನೆಯಲ್ಲೇ ಅಥವಾ ಹಗ್ಗದಲ್ಲಿ ಕಟ್ಟಿಕೊಂಡು ನೋಡಿಕೊಳ್ಳುವ ನಿರ್ಬಂಧದ ಬದುಕು ಶುರುವಾಯಿತು. ಹಸುಗಳು ತಪ್ಪೇನೂ ಮಾಡ್ತಿರಲಿಲ್ಲ ಹೊಟ್ಟೆಯ ಹಸಿವನ್ನು ನೀಗಿಸಲು ಹೋಗುತ್ತಿದ್ದವು. ಆದರೆ ಸರಕಾರದ ಕೆಲಸಗಳಲ್ಲಿ ಇರುವ ನಿರ್ಲಕ್ಷ್ಯ, ಕಾರ್ಮಿಕರ ಅರ್ದಂಬರ್ದ ಕೆಲಸಗಳು… ಇದರ ಮಧ್ಯೆ ಬದುಕು ಸಾಗಿಸಲು ಹೋರಾಡುವ ರೈತರ ಕಥೆಗಳು ಅನೇಕ. ರಾಂ ಅಜೆಕಾರು ಕಾರ್ಕಳ #ramajekar #dailystories #trendingstories #udupikarkala #karkala #udupimangalore #udupi #mangalore #cow http://ramajekar.travel.blog/2025/11/16/daily-stories-26/ #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು