sharath vasista ಕಲಾವಿದ1987🇮🇳🇮🇳🇮🇳
2.2K views
3 months ago
ಹಾಸನಾಂಬ ದೇವಾಲಯದ ಹಿನ್ನೆಲೆಯು ಸಪ್ತ ಮಾತೃಕೆಯರು (ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ) ವಾರಣಾಸಿಯಿಂದ ದಕ್ಷಿಣದ ಕಡೆಗೆ ಪ್ರಯಾಣಿಸುತ್ತಿದ್ದಾಗ ಹಾಸನದ ಸೊಬಗಿಗೆ ಮಾರುಹೋಗಿ ಅಲ್ಲೇ ನೆಲೆಸಿದ್ದರಿಂದ ಬಂದಿದೆ. ಈ ದೇವಸ್ಥಾನವು ಹುತ್ತದ ರೂಪದಲ್ಲಿರುವ ಆದಿಶಕ್ತಿ ಸ್ವರೂಪಿಣಿಯಾದ ಹಾಸನಾಂಬೆಯನ್ನು ಪೂಜಿಸುತ್ತದೆ, ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ವರ್ಷಕ್ಕೊಮ್ಮೆ ದರ್ಶನ ನೀಡುತ್ತದೆ. ದೇವತೆಗಳು ಇಲ್ಲಿ ನೆಲೆಸಿದ್ದರಿಂದ ಈ ಪ್ರದೇಶಕ್ಕೆ 'ಹಾಸನ' ಎಂಬ ಹೆಸರಾಯಿತು ಎನ್ನಲಾಗುತ್ತದೆ, ಮತ್ತು ಅಲ್ಲಿನ ದೇವತೆಯನ್ನು ಹಾಸನಾಂಬೆ ಎಂದು ಆರಾಧಿಸಲಾಗುತ್ತದೆ. ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ. (ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೆ ಸಪ್ತಮಾತೃಕೆಯರು). ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ, ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ. ಆದಿಶಕ್ತಿ ಸ್ವರೂಪಿಣಿ ಮಾತೃ ಸ್ವರೂಪಿಣಿಯಾಗಿರುವ ಹಾಸನಾಂಬೆ ಸಿಂಹಾಸನಾಪುರಿಯ ಅಧಿದೇವತೆ- ಭವತಾರಿಣಿ, ಅಸುರ ಸಂಹಾರಿಣಿ. ಬೇಡಿದ ವರಕೊಡುವ ಶಕ್ತಿದೇವತೆಯಾಗಿ ಜನಮಾನಸದಲ್ಲಿ ಕಾಣಿಸಿ ಕೊಂಡಿದ್ದಾಳೆ. ಕಳೆದ ವರ್ಷಕ್ಕಿಂತ ಈ ವರ್ಷದ ವ್ಯವಸ್ಥೆಯು ಅತ್ಯುತ್ತಮ ವಾಗಿದೆ ಪ್ರಾರಂಭದಲ್ಲಿ ಇದ್ದ ಹಾಗೇ ಕೊನೆಯ ವರಿಗೂ ಸಹ ಹೀಗೆ ಇರಬೇಕು. ಹೋದ ವರ್ಷ ಅದ ವೈಫಲ್ಯ ಈ ವರ್ಷ ಇರದಂತೆ ಉತ್ತಮ ರೀತಿಯಲ್ಲಿ ರಾಜ್ಯದ ಶ್ರೀಮತಿ ಡಿ.ಸಿ. ಲತಾ ಕುಮಾರಿ ರವರು ನೋಡಿಕೊಳ್ಳುತ್ತಿದ್ದಾರೆ ಪ್ರತಿ ಎರಡು ಗಂಟೆ ಒಂದು ಸಲ ಬಂದು ವ್ಯವಸ್ಥೆಯ ಸ್ಥಿತಿ ಗತಿಯನ್ನು ಬಗ್ಗೆ ಗಮನ ಹರಿಸಿ ಯಾವುದೇ ರೀತಿಯಲ್ಲಿಯೂ ಸಹ ಲೋಪದೋಷ ಅಗದ ಹಾಗೆ ನೋಡಿಕೊಳ್ಳುವುದರ ಜೊತೆಗೆ ಬಂದ ಭಕ್ತರಿಗೆ ಯಾವುದೇ ತರನಾದ ತೊಂದರೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ನಿಜಕ್ಕೂ ಶ್ಲಾಘನೀಯ ಹಾಗೂ ಮೆಚ್ಚುವಂತಹ ವಿಷಯ . ಈ ಬಾರಿಯ ದರ್ಶನದಲ್ಲಿ ಅತಿದೊಡ್ಡ ಬದಲಾವಣೆಯೆಂದರೆ ವಿಐಪಿ ಪಾಸ್‌ ರದ್ದು ಮಾಡಲಾಗಿದೆ. ಈ ಹಿಂದೆ ಗಣ್ಯರಿಗೆ ಮತ್ತು ವಿಶೇಷ ವರ್ಗಕ್ಕೆ ಮೀಸಲಾಗಿದ್ದ ವಿಐಪಿ ಪಾಸ್‌ ವ್ಯವಸ್ಥೆಯನ್ನು ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ಎಲ್ಲ ಭಕ್ತರಿಗೂ ಸಮಾನವಾದ ದರ್ಶನದ ಅವಕಾಶ ದೊರೆಯಲಿದೆ. ವಿಶೇಷವಾಗಿ ದರ್ಶನವನ್ನು ಶೀಘ್ರವಾಗಿ ಪಡೆಯಲು ಇಚ್ಛಿಸುವ ಭಕ್ತರಿಗಾಗಿ ಜಿಲ್ಲಾಡಳಿತವು 1000 ರೂಪಾಯಿ ಮತ್ತು 300 ರೂಪಾಯಿ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಟಿಕೆಟ್‌ಗಳನ್ನು ದೇವಸ್ಥಾನದ ಬಳಿಯ ಕೌಂಟರ್‌ಗಳಲ್ಲಿ ಅಥವಾ ಆನ್‌ಲೈನ್‌ ಮೂಲಕ ಪಡೆಯಬಹುದು. 1000 ರೂಪಾಯಿ ಟಿಕೆಟ್‌ ಪಡೆದ ಭಕ್ತರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯಿದ್ದು, ಇದರಿಂದ ಶೀಘ್ರ ದರ್ಶನ ಸಾಧ್ಯವಾಗಲಿದೆ. Your commitment to excellence is truly inspiring—keep up the amazing work!" "You consistently exceed expectations—thank you for your incredible effort!" Your hard work and dedication are truly appreciated." Congratulations on a job well done!" or "Your hard work and dedication are truly commendable". Best wishes for your dedication and great work smt Deputy Commissioner KS Latha Kumari Deputy Commissioner Hassan ! Hassan News ಹಾಸನ್ ನ್ಯೂಸ್ ! The Beauty Of Hassan - ಕಲೆಗಳ ಬೀಡು Krishna Byre Gowda #Hasanamba Temple: ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಮಧ್ಯರಾತ್ರಿಯಿಂದಲೇ ಸಾಲಿನಲ್ಲಿ ನಿಂತಿದ್ದ ಭಕ್ತರು