#😭ಕನ್ನಡದ ಖ್ಯಾತ ನಿರ್ದೇಶಕ ನಿಧನ 💔😟 ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಎದುರಾಗಿದೆ. ಭರವಸೆಯ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿದ್ದ ಸಂಗೀತ್ ಸಾಗರ್ ಅವರು ಚಿತ್ರೀಕರಣದ ಸ್ಥಳದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ನಾಳೆ (ಡಿಸೆಂಬರ್ 5) ಸಿನಿಮಾ ಚಿತ್ರೀಕರಣಕ್ಕೆ ತೆರೆ ಬೀಳಬೇಕಿತ್ತು ಎನ್ನುವಾಗಲೇ ಈ ದುರಂತ ಸಂಭವಿಸಿದ್ದು, ಚಿತ್ರತಂಡಕ್ಕೆ ಆಘಾತ ಉಂಟಾಗಿದೆ.ಘಟನೆ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಸಂಗೀತ್ ಸಾಗರ್ ಅವರು ತಮ್ಮ ಮುಂಬರುವ ಸಿನಿಮಾ 'ಪಾತ್ರಧಾರಿ'ಯ (Paatradhari) ಚಿತ್ರೀಕರಣದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರು. ಕಳೆದ 20 ದಿನಗಳಿಂದ ಹರಿಹರಪುರ ಮತ್ತು ತೀರ್ಥಹಳ್ಳಿ ತಾಲೂಕುಗಳ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.ಘಟನೆ ನಡೆದ ದಿನ, ಸಂಗೀತ್ ಸಾಗರ್ ಅವರು ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ದೃಶ್ಯವೊಂದರ ಕುರಿತು ಆಯಕ್ಷನ್ ಹೇಳುತ್ತಿದ್ದರು. ಈ ವೇಳೆಗೆ ಅವರು ತೀವ್ರ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಿತ್ರತಂಡದ ಸದಸ್ಯರು ಅವರನ್ನು ಹತ್ತಿರದ ಕೊಪ್ಪ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿರ್ದೆಶಕ ಸಂಗೀತ್ ಸಾಗರ್ ವಿಧಿವಶರಾಗಿದ್ದಾರೆ.
#😞 ಮೂಡ್ ಆಫ್ ಸ್ಟೇಟಸ್