#❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐
ಕರಾವಳಿಯಲ್ಲಿ ಮತ್ತೆ ಸಂಪ್ರದಾಯಿಕ ಕಂಬಳಗಳ ಕಂಪು
ಕರಾವಳಿಯ ಮಣ್ಣಿನಲ್ಲಿ ಮತ್ತೊಮ್ಮೆ ಕಂಬಳದ ಕೋಣಗಳು ಪಾದಾರ್ಪಣೆ ಮಾಡಲು ಸಜ್ಜಾಗುತ್ತಿವೆ. ನಾಡಿನ ಪುರಾತನ ಸಂಸ್ಕೃತಿ, ನಂಬಿಕೆ ಮತ್ತು ಸಂಪ್ರದಾಯಗಳ ಸೊಗಡನ್ನು ಹೊತ್ತಿರುವ ಸಾಂಪ್ರದಾಯಿಕ ಕಂಬಳಗಳು ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ಹಾಗೂ ಉಡುಪಿ ತಾಲೂಕುಗಳ ಹಲವು ಭಾಗಗಳಲ್ಲಿ ಸಡಗರದಿಂದ ನಡೆಯುತ್ತಿವೆ.
ದೈವತ್ವದ ಗರಡಿ ಕಂಬಳಗಳು ಮತ್ತು ದೇವರ ಕಂಬಳಗಳು : ಇವುಗಳೆ ಕರಾವಳಿಯ ಜನಮನವನ್ನು ರಂಜಿಸುವ ಪ್ರಮುಖ ಆಕರ್ಷಣೆ. ಪ್ರತಿ ಕಂಬಳದ ದಿನಾಂಕವನ್ನು ನಿಗದಿಪಡಿಸುವಲ್ಲಿ ವಿಭಿನ್ನ ಪರಂಪರೆಗಳಿವೆ. ಕೆಲವೆಡೆ ಜೋಯಿಸರು ಉತ್ತಮ ದಿನವನ್ನು ನಿಗದಿಪಡಿಸುವರೆ, ಕೆಲವೆಡೆ ಸಂಕ್ರಾಂತಿಯ ದಿನ ದೈವದ ದರ್ಶನದ ನಂತರ ದಿನ ನಿಗದಿ ಮಾಡುವ ಪದ್ಧತಿ ರೂಢಿಯಲ್ಲಿದೆ. ಇನ್ನು ಕೆಲವರು ಇತರೆ ಕಂಬಳಗಳ ವೇಳಾಪಟ್ಟಿಗೆ ಅನುಗುಣವಾಗಿ ದಿನ ನಿಗದಿಪಡಿಸುತ್ತಾರೆ. ಸಾಮಾನ್ಯವಾಗಿ ಒಂದು ಸಂಕ್ರಮಣದಿಂದ ಮತ್ತೊಂದು ಸಂಕ್ರಮಣದೊಳಗೆ ಕಂಬಳ ಮುಗಿಯಬೇಕು ಅಂದರೆ, ಒಂದೇ ತಿಂಗಳ ಅವಧಿಯಲ್ಲಿ ಆಯೋಜನೆ ಪೂರ್ಣಗೊಳ್ಳಬೇಕು ಎನ್ನುವುದು ಸಂಪ್ರದಾಯ.
ಕೊಡಿ ತಿಂಗಳಲ್ಲಿ ನಲವತ್ತೈದು ಕಂಬಳಗಳು:ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 45 ಕಂಬಳಗಳು ಈಗಾಗಲೇ ನೋಂದಣಿ ಹೊಂದಿವೆ. ಸಂಪ್ರದಾಯಿಕ ಕಂಬಳ ಸಮಿತಿಯ ಸುಧಾಕರ ಹೆಗ್ಡೆ (ಹೇರಂಜೆ) ಅವರ ಪ್ರಕಾರ, “ಇನ್ನೂ ಹಲವಾರು ಕಂಬಳಗಳು ನೋಂದಣಿಗೆ ಬಾಕಿಯಾಗಿವೆ, ಶೀಘ್ರದಲ್ಲೇ ಅವುಗಳನ್ನೂ ಒಳಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಕಂಬಳದ ವೈಶಿಷ್ಟ್ಯ:ಸಂಪ್ರದಾಯಿಕ ಕಂಬಳವು ಜೋಡುಕೆರೆ ಕಂಬಳವಲ್ಲ. ಇಲ್ಲಿ ಕೇವಲ ಒಂದೇ ಟ್ರ್ಯಾಕ್‌ನಲ್ಲಿ ಕೋಣಗಳ ಓಟ ನಡೆಯುವುದು. ಕಂಬಳದ ಮೈದಾನದಲ್ಲಿ ದೈವ ಬಂಟರ ಹಾಜರಾತಿ ಎಲ್ಲೆಡೆ ಕಾಣ ಸಿಗುತ್ತದೆ. ತಾಸೆ ಕೊಂಬು, ದೋಲು, ಕೊಳಲು ಸೇರಿದಂತೆ ಹಲವು ವಾದ್ಯಗಳ ಸದ್ದಿನ ಮಧ್ಯೆ ಕಂಬಳದ ಉತ್ಸಾಹ ತುದಿಗಾಲಿನಲ್ಲಿ ತೇಲುತ್ತದೆ.
ಬ್ರಹ್ಮಾವರ ಹಾಗೂ ಕುಂದಾಪುರದ ಕೆಲವು ಭಾಗಗಳಲ್ಲಿ “ಪಟ್ಟದ ಕಂಬಳ” ಎಂಬ ವಿಶಿಷ್ಟ ಆಚರಣೆ ಪ್ರಚಲಿತದಲ್ಲಿದೆ. ಆ ಸಂದರ್ಭದಲ್ಲಿ ಮನೆಯ ಹಿರಿಯರನ್ನು ಪಟ್ಟಕ್ಕೆ ಕುಳ್ಳಿರಿಸಿ ಪೂಜೆ, ವಿಧಿ-ವಿಧಾನಗಳು ನೆರವೇರಿಸುತ್ತಾರೆ. ಪಟ್ಟಕ್ಕೆ ಕುಳಿತವರು ಕಂಬಳದ ಕಾಲಾವಧಿಯಲ್ಲಿ ಮಾಂಸಾಹಾರ ಸೇವನೆ ನಿಷೇಧ, ಸೂತಕದಲ್ಲಿರುವವರ ಸಂಪರ್ಕ ನಿಷೇಧ ಸೇರಿದಂತೆ ನಿಷ್ಠೆಯಿಂದ ನಿಯಮ ಪಾಲಿಸುತ್ತಾರೆ. ಕೆಲವೆಡೆ ಕಂಬಳದ ದಿನ ಹನಿಗೆ ಕುಳಿತುಕೊಳ್ಳುವ ಸಂಪ್ರದಾಯವೂ ಇದೆ.
ಸಂಪ್ರದಾಯ ಉಳಿಸಲು ಮನವಿ:ಸಾಂಪ್ರದಾಯಿಕ ಕಂಬಳಗಳ ನಿರ್ವಹಣೆ, ಕೋಣಗಳ ಯಜಮಾನರಿಗೆ ಗೌರವಧನ, ಹಾಗೂ ಆಯೋಜನೆಗೆ ಅಗತ್ಯವಾದ ವೆಚ್ಚಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಸುಧಾಕರ ಹೆಗ್ಡೆ ಅವರ ನೇತೃತ್ವದಲ್ಲಿ ಕಂಬಳ ಸಮಿತಿ ಮಂಡಿಸಿದೆ
ರಾಂ ಅಜೆಕಾರು ಕಾರ್ಕಳ
#ಕಂಬಳ #ರಾಂಅಜೆಕಾರು #ಉಡುಪಿ #ಸಾಂಪ್ರದಾಯಿಕಕಂಬಳ #ಹೆಬ್ರಿ #ಕುಂದಾಪುರ
http://ramajekar.travel.blog/2025/10/29/daily-stories-21/
#😔😔😔ಮುಗ್ದ,ಮನಸ 😔😔😔
#ಕಂಬಳ #ತುಳುನಾಡಿನ ಕಂಬಳ #ಕಂಬಳ ಲವ್💝🌟