💐Appu creation 💐
76.7K views
#🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 ಚಿಕ್ಕಬಳ್ಳಾಪುರ : ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ತಾಯಿ ಮತ್ತು ತಂದೆ ಜೊತೆ 38 ವರ್ಷದ ಅಪರಾಧಿ ವಾಸಿಸುತ್ತಿದ್ದ.ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು. 2024ರ ಆ.4ರಂದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದ. ಕಿರುಚಾಡಿದರೂ ಬಿಡದೆ ಅವರನ್ನು ಮನೆ ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು.ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ ಅವರು ವಿಚಾರಣೆ ನಡೆಸಿದ್ದರು. ಅಪರಾಧಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 25 ಸಾವಿರ ದಂಡ ಸಹ ವಿಧಿಸಲಾಗಿದೆ. #😞 ಮೂಡ್ ಆಫ್ ಸ್ಟೇಟಸ್

More like this