#📢ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್ -ಎಲ್ಲರ ಕಾರ್ಡ್ ರದ್ದು😮❌ ಕುಟುಂಬದ ಸದಸ್ಯರೊಬ್ಬರು ತೆರಿಗೆ ಪಾವತಿದಾರರಾದರೆ ರಾಜ್ಯ ಸರಕಾರದ ಅನ್ನಭಾಗ್ಯ ಅಕ್ಕಿ ಸೇರಿ ಸೌಲಭ್ಯ ಪಡೆಯಲು ನೆರವಾಗಿರುವ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವುದು ಫಲಾನುಭವಿಗಳನ್ನು ದಂಗುಬಡಿಸಿದೆ.ಸಿಂಧನೂರು ತಾಲೂಕಿನಲ್ಲೇ 96 ಸಾವಿರಕ್ಕೂ ಅಧಿಕ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳಿದ್ದು, ಜಿಲ್ಲೆಯಲ್ಲಿಈ ಸಂಖ್ಯೆ ಲಕ್ಷಗಟ್ಟಲೇ ದಾಟಿದೆ.ಕಳೆದ ಎರಡು ತಿಂಗಳ ಅವಧಿಯಲ್ಲಿ ದಿಢೀರನೇ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ರದ್ದಿನಿಂದಾಗಿ ಕಂಗೆಟ್ಟಿರುವ ಫಲಾನುಭವಿಗಳು, ಆಹಾರ ಇಲಾಖೆ ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಮನೆಯಲ್ಲಿರುವ ಒಬ್ಬ ಸದಸ್ಯ ಆದಾಯ ತೆರಿಗೆ ಇಲಾಖೆಗೆ ಐಟಿಆರ್ (ಆದಾಯ ತೆರಿಗೆ ರಿಟನ್ಸ್‌ರ್) ಮಾಡಿಸಿದರೆ, ಇನ್ನುಳಿದವರನ್ನು ಸಹ ಬಿಪಿಎಲ್ ಕಾರ್ಡ್‌ನಿಂದ ಹೊರ ಹಾಕಿದರೆ ಹೇಗೆ? ಎಂಬ ಪ್ರಶ್ನೆ ಉದ್ಬವವಾಗಿದೆ.