MS_CREATION_820
3.2K views
3 months ago
ನವರಾತ್ರಿಯ ಐದನೇ ದಿನ ಬಹಳ ವಿಶೇಷ. ಕಾರಣ ಅಂದಿನ ದೇವತೆ ಸ್ಕಂದಮಾತ. ಇದು ದುರ್ಗಾಮಾತೆಯ ಐದನೇ ಅವತಾರವಾಗಿದೆ. ಭಗವಾನ್ ಸ್ಕಂದದೇವನು ಕುಮಾರ ಕಾರ್ತಿಕೇಯ ಎಂಬ ಹೆಸರನ್ನು ಪಡೆದಿದ್ದಾನೆ. ಸಾಮಾನ್ಯವಾಗಿ ಭಕ್ತರು ಇವನನ್ನು ಸುಬ್ರಹ್ಮಣ್ಯ ಸ್ವಾಮಿ ಎಂದು ಪೂಜಿಸುತ್ತಾರೆ. ಸ್ಕಂದದೇವನು ದೇವತೆಗಳು ಮತ್ತು ರಾಕ್ಷಸರ ಯುದ್ಧದಲ್ಲಿ ದೇವತೆಗಳ ಸೇನಾಧಿಪತಿಯಾಗುತ್ತಾನೆ. ಈತನಿಗೆ ಪುರಾಣ ಗ್ರಂಥಗಳ ಪ್ರಕಾರ ಶಕ್ತಿಧರ ಮತ್ತು ಕುಮಾರಸ್ವಾಮಿ ಎಂಬ ಹೆಸರುಗಳು ಇವೆ. ಇವನ ವಾಹನವು ನವಿಲು ಆದ್ದರಿಂದ ಈತನಿಗೆ ಮಯೂರ ವಾಹನ ಎಂಬ ಹೆಸರು ಇದೆ. ಸ್ಕಂದದೇವನ ತಾಯಿಯಾದ ಕಾರಣ ದುರ್ಗೆಯನ್ನು ಸ್ಕಂದ ಮಾತ ಎಂದು ಕರೆಯುತ್ತಾರೆ.🙏🪷🌸 #🎶ನವರಾತ್ರಿ ಭಕ್ತಿಗೀತೆಗಳು🪘 #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #💪🏻 ನಮ್ಮ ತುಳುನಾಡು #🌸ಜೈ ಮಾತಾ