Freaky Fishu
61.3K views
ಸಂಗೀತ್ ಸಾಗರ್ ಶಿವಮೊಗ್ಗದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ. ಸಾವು ಯಾವ ಕ್ಷಣದಲ್ಲಿ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ನಟಿಸುವಾಗಲೇ ನಿಧನ ಹೊಂದಿದ ಅನೇಕ ಕಲಾವಿದರು ಇದ್ದಾರೆ. ಈಗ ಕನ್ನಡದ ನಿರ್ದೇಶಕನೋರ್ವ ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ‘ಪಾತ್ರಧಾರಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದ ಸಂಗೀತ್ ಸಾಗರ್ ಮೃತ ದುರ್ಧೈವಿ. ಅವರ ಸಾವಿನಿಂದ ಇಡೀ ಕುಟುಂಬಕ್ಕೆ ಶಾಕ್ ಉಂಟಾಗಿದೆ. ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. #😭ಕನ್ನಡದ ಖ್ಯಾತ ನಿರ್ದೇಶಕ ನಿಧನ 💔😟