#😭ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ಹೀರೋ ಈಗ ದಿನಗೂಲಿ ಕಾರ್ಮಿಕ!💔 ಸಿನಿಮಾ ಎಲ್ಲರನ್ನು ಕೈಬೀಸಿ ಕರೆಯುತ್ತೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದೇ ಒಂದು ಚಿತ್ರದಿಂದ ಗಮನ ಸೆಳೆದವರು ಬಳಿಕ ಮೂಲೆ ಗುಂಪಾಗಿರುವ ಸಾಕಷ್ಟು ಉದಾಹರಣೆಗಳಿವೆ. ಸಿನಿಮಾ ಎಲ್ಲರಿಗೂ ಅಲ್ಲ ಎನ್ನುವ ಮಾತಿದೆ. ಅದು ನಿಜ ಕೂಡ.ಏಕಾಏಕಿ ಇದೊಂದು ಚಿತ್ರದ ನಟನೆಯಿಂದ ಎಲ್ಲರ ಗಮನ ಸೆಳೆದು ಬಳಿಕ ಮತ್ತೆರಡು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಸಿನಿಮಾ ಸಹವಾಸ ಬಿಟ್ಟು ಈಗ ಹಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ವ್ಯವಸಾಯ ಮಾಡಿಕೊಂಡಿರುವ ನಟ ಮರ ಹೊರುವ ಕಷ್ಟದ ಕೆಲಸಗಳನ್ನು ಮಾಡುತ್ತಾರೆ. ಅಂದ ಹಾಗೆ ಈತ ಮತ್ಯಾರು ಅಲ್ಲ ತಿಥಿ ಚಿತ್ರದ ನಟ ಅಭಿಷೇಕ್ ಹೆಚ್. ಎನ್.ಎಲ್ಲದಕ್ಕೂ ಸೈ, ನಾನು ಇಲ್ಲಿ ಏನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಬಂದವರು ಗೆಲ್ಲುತ್ತಾರೆ.ಆ ರೀತಿ ಬಂದವರೆಲ್ಲಾ ಗೆದ್ದಿದ್ದಾರೆ ಅನ್ನುವುದಕ್ಕೆ ಸಾಧ್ಯವಿಲ್ಲ. ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಬೇಕು. ಬರೀ ಅದೃಷ್ಟದಿಂದಲೇ ಇಲ್ಲಿ ಸಾಧನೆ ಶಿಖರ ಏರಿದವರು ಇದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಇಲ್ಲೊಬ್ಬ ನಟ ಕೂಲಿ ಕೆಲಸ ಮಾಡುತ್ತಿದ್ದಾರೆ. ಈತ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು ಎನ್ನುವುದು ಅಷ್ಟೇ ನಿಜ. ಆ ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು.