*ಇಂದು ಗುರು ಪೂರ್ಣಿಮೆ* ✨
ಗುರು ಪೂರ್ಣಿಮೆ ಎಂದರೆ ನಮಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ದಿನ, ಇದು ಕೇವಲ ಹಬ್ಬವಲ್ಲ, ನಮ್ಮ ಜೀವನದ ಜ್ಞಾನ ಯಾನಕ್ಕೆ ದೀಪ ಹಚ್ಚಿದ ದಿನ.!!
ಗುರುಗಳೆಂದರೆ ಮನೆಯೊಳಗಿನ ಹೆತ್ತವರು, ಮನೆ ಹೊರಗಿನ ಹೊತ್ತವರು, ಊರೊಳಗಿನ ಹಿರಿಯರು, ಅಕ್ಷರ ಕಲಿಸಿದ ಅಧ್ಯಾಪಕರು, ಮಾರ್ಗದರ್ಶನ ಮಾಡಿದ ಮಹನೀಯರು, ಇತ್ಯಾದಿ.!!
ಕೈ ಸೋತು, ಬದುಕು ಸೊರಗಿ, ದಾರಿ ಕಾಣದಾದಾಗ ನಮ್ಮನ್ನು ಬೆಂಬಲಿಸಿ ಹುರಿದುಂಬಿಸಿ, ಕೈ-ಹಿಡಿದು ನಡೆಸಿ, ಸ್ವಂತ ಬಲ ತುಂಬಿದವರೆಲ್ಲ ನಮ್ಮ ಗುರುಗಳೇ.!
ಅಂತಹ ಗುರುವರ್ಯರಿಗೆ ಗುರು ಪೂರ್ಣಿಮೆಯ ಶುಭಾಶಯಗಳು.!!
ಕಣ್ಮುಚ್ಚಿ, ಅಂತಹ ಮಹಾನುಭಾವರನೊಮ್ಮೆ ನೆನೆದು, ಅವರಿಗಿಂದು ಕನಿಷ್ಠ ಒಂದು ಕೃತಜ್ಞತೆಯ ಸಂದೇಶ ಕಳಿಸಲಾಗದೇ.?
ತಡವೇಕೆ, ನಿಮ್ಮ ಒಂದು ಮಾತು ಅವರಲ್ಲಿ ಧನ್ಯತಾ ಭಾವ ಮೂಡಿಸಬಹುದು.!!
ತಾವೂ ಯಾರದೋ ಬಾಳಿನಲಿ ಬೆಳಕಾಗಿರುತ್ತೀರಿ.!!,ಅದು ನನ್ನ ಬಾಳಿನಲ್ಲಿಯೂ ಕೂಡಾ.!!
*ತಮಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 🙏*
#ಗುರು ಪೂರ್ಣಿಮಾ #ಗುರು / ವ್ಯಾಸ ಪೂರ್ಣಿಮಾ #ಗುರು ಪೂರ್ಣಿಮಾ 👨🏫 #🙏ಗುರು ಪೂರ್ಣಿಮಾ ಶುಭಾಶಯಗಳು🙏 #ಗುರು ಪೂರ್ಣಿಮಾ ಶುಭಾಶಯಗಳು