ಫಾಲೋ
manmohan
@150269374
455
ಪೋಸ್ಟ್ಸ್
238
ಫಾಲೋವರ್ಸ್
manmohan
1.8K ವೀಕ್ಷಿಸಿದ್ದಾರೆ
ಚಿನ್ನ, ಬೆಳ್ಳಿ ಖರೀದಿಸಿದಾಗ ಅದಕ್ಕೆ ಗುಲಾಬಿ ಕಾಗದವನ್ನೇ ಏಕೆ ಬಳಸುತ್ತಾರೆ? ಆಸಕ್ತಿದಾಯಕ ಸಂಗತಿ ಇಲ್ಲಿದೆ! ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಕೇವಲ ಹಣಕಾಸಿನ ಹೂಡಿಕೆ ಮಾತ್ರವಲ್ಲ; ಅದು ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ. ಹಬ್ಬ, ಮದುವೆ ಮತ್ತು ಶುಭ ಸಂದರ್ಭಗಳಲ್ಲಿ ಚಿನ್ನ-ಬೆಳ್ಳಿ ಆಭರಣಗಳನ್ನು ಖರೀದಿಸುವುದನ್ನು ಸಮೃದ್ಧಿ, ಭದ್ರತೆ ಮತ್ತು ಶುಭದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ನೀವು ಗಮನಿಸಿದ್ದೀರಾ? ಆಭರಣ ಅಂಗಡಿಯಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ನೀಡುವಾಗ, ಬಹುತೇಕ ಎಲ್ಲ ಅಕ್ಕಸಾಲಿಗರೂ ಅದನ್ನು ವಿಶೇಷ ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಕೊಡುತ್ತಾರೆ. ಇದು ಕೇವಲ ರೂಢಿಯೇ, ಅಥವಾ ಇದರ ಹಿಂದೆ ಇನ್ನೊಂದು ಕಾರಣವಿದೆಯೇ? ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯ: ಭಾರತದ ಅಕ್ಕಸಾಲಿಗರು ತಲೆಮಾರುಗಳಿಂದಲೇ ಚಿನ್ನ ಮತ್ತು ಬೆಳ್ಳಿಯನ್ನು ಗುಲಾಬಿ ಕಾಗದದಲ್ಲಿ ಸುತ್ತುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸಣ್ಣ ಹಳ್ಳಿಯ ಅಂಗಡಿಗಳಿಂದ ಹಿಡಿದು ದೊಡ್ಡ, ಪ್ರತಿಷ್ಠಿತ ಆಭರಣ ಮಳಿಗೆಗಳವರೆಗೆ ಈ ಪದ್ಧತಿ ಸಾಮಾನ್ಯವಾಗಿದೆ. ಗ್ರಾಹಕರಿಗೂ ಇದು ಸಹಜವೆನಿಸುತ್ತದೆ. ಆದರೆ ಈ ಸಂಪ್ರದಾಯ ಕೇವಲ ಆಚರಣೆಯಲ್ಲ, ಅದಕ್ಕೆ ವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ಕಾರಣಗಳೂ ಇವೆ. ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಸಂತೋಷ: ಗುಲಾಬಿ ಬಣ್ಣವು ಮೃದುವಾಗಿದ್ದು, ಕಣ್ಣಿಗೆ ಹಿತಕರವಾಗಿದೆ. ಈ ಬಣ್ಣದ ಹಿನ್ನೆಲೆಯ ಮೇಲೆ ಚಿನ್ನದ ನೈಸರ್ಗಿಕ ಹಳದಿ ಹೊಳಪು ಇನ್ನಷ್ಟು ಪ್ರಕಾಶಮಾನವಾಗಿ ಕಾಣುತ್ತದೆ. ಇದರಿಂದ ಆಭರಣಗಳು ಹೆಚ್ಚು ಅಮೂಲ್ಯ ಮತ್ತು ಆಕರ್ಷಕವಾಗಿ ಕಾಣುತ್ತವೆ. ತಜ್ಞರ ಪ್ರಕಾರ, ಗುಲಾಬಿ ಬಣ್ಣವು ಗ್ರಾಹಕರ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಶಾಪಿಂಗ್ ಅನುಭವವನ್ನು ವಿಶೇಷವಾಗಿಸುತ್ತದೆ. ರಕ್ಷಣೆಗೂ ಸಹಾಯಕ: ಗುಲಾಬಿ ಕಾಗದವು ಸಾಮಾನ್ಯವಾಗಿ ಮೃದುವಾಗಿದ್ದು, ಚಿನ್ನ ಮತ್ತು ಬೆಳ್ಳಿ ಆಭರಣಗಳಿಗೆ ಯಾವುದೇ ಸ್ಕ್ರಾಚ್ ಅಥವಾ ಹಾನಿಯಾಗದಂತೆ ರಕ್ಷಿಸುತ್ತದೆ. ಇದಲ್ಲದೆ, ಈ ಕಾಗದದಲ್ಲಿ ಹಗುರವಾದ ಕಳಂಕ ನಿರೋಧಕ ಲೇಪನ ಇರುತ್ತದೆ. ಇದು ತೇವಾಂಶ, ಬೆವರು ಮತ್ತು ಗಾಳಿಯಲ್ಲಿರುವ ಅಂಶಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ, ಆಭರಣಗಳು ಹೆಚ್ಚು ದಿನಗಳವರೆಗೆ ತಮ್ಮ ಹೊಸ ಹೊಳಪನ್ನು ಕಾಪಾಡಿಕೊಳ್ಳುತ್ತವೆ. ನಂಬಿಕೆ ಮತ್ತು ಶುಭದ ಸಂಕೇತ: ಪ್ರಾಚೀನ ನಂಬಿಕೆಗಳ ಪ್ರಕಾರ, ಚಿನ್ನವು ಲಕ್ಷ್ಮಿದೇವಿಗೆ ಸಂಬಂಧಿಸಿದ ಲೋಹ. ಗುಲಾಬಿ ಮತ್ತು ಕೆಂಪು ಬಣ್ಣಗಳನ್ನು ಶುಭ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಗುಲಾಬಿ ಕಾಗದವನ್ನು ದುಷ್ಟ ದೃಷ್ಟಿಯಿಂದ ರಕ್ಷಣೆಯ ಸಂಕೇತವಾಗಿಯೂ ನೋಡಲಾಗುತ್ತದೆ. ಅಂತಹ ಕಾಗದದಲ್ಲಿ ಸುತ್ತಿದ ಚಿನ್ನವನ್ನು ಶುಭ ಮತ್ತು ಸುರಕ್ಷಿತವೆಂದು ನಂಬಲಾಗುತ್ತದೆ. #LATEST #INDIA #LIFESTYLE #GOLD #SILVER #ATTRACTIONHAPPINESS
manmohan
531 ವೀಕ್ಷಿಸಿದ್ದಾರೆ
ಮೊಟೊರೊಲಾ ಸಿಗ್ನೇಚರ್ ಲಾಂಚ್: ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್‌ಗೆ ಸೆಡ್ಡು ಹೊಡೆಯಲು ಬಂದಿದೆ ಹೊಸ ಫ್ಲ್ಯಾಗ್‌ಶಿಪ್ ಫೋನ್! ಮೊಟೊರೊಲಾ (Motorola) ಕಂಪನಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು 'ಮೊಟೊರೊಲಾ ಸಿಗ್ನೇಚರ್' (Motorola Signature) ಎಂಬ ಅತ್ಯಾಧುನಿಕ ಫೋನ್ ಅನ್ನು ಭಾರತದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ (Samsung) ಮತ್ತು ಒನ್‌ಪ್ಲಸ್‌ನಂತಹ (Oneplus) ದೈತ್ಯ ಕಂಪನಿಗಳಿಗೆ ನೇರ ಪೈಪೋಟಿ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಈ ಫೋನ್, ಶಕ್ತಿಶಾಲಿ ಹಾರ್ಡ್‌ವೇರ್ ಮತ್ತು ಲಕ್ಸುರಿ ವಿನ್ಯಾಸದ ಅದ್ಭುತ ಸಂಗಮವಾಗಿದೆ. ಪ್ರೊಸೆಸರ್ ಸಾಮರ್ಥ್ಯ: ಈ ಫೋನ್ ವಿಶ್ವದ ಅತ್ಯಂತ ಸುಧಾರಿತ Qualcomm 3nm Snapdragon 8 Gen 5 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಅತಿ ವೇಗದ ಪ್ರೊಸೆಸಿಂಗ್ ಮತ್ತು ಡೌನ್‌ಲೋಡ್ ಸಾಮರ್ಥ್ಯವನ್ನು ನೀಡುತ್ತದೆ. ವಿಶೇಷವೆಂದರೆ, ಇದರ AnTuTu ಸ್ಕೋರ್ 3 ಮಿಲಿಯನ್ ಗಡಿ ದಾಟಿದ್ದು, ಫೋನ್ ಕಾಯದಂತೆ ತಡೆಯಲು ಜಗತ್ತಿನ ಮೊದಲ 'ಆರ್ಕ್ಟಿಕ್ ಮೆಶ್ ಕೂಲಿಂಗ್ ಸಿಸ್ಟಮ್' ಅಳವಡಿಸಲಾಗಿದೆ. ಇದು ಅತಿ ಹೆಚ್ಚು ಕೆಲಸದ ಒತ್ತಡದಲ್ಲೂ ಫೋನ್ ಸುಗಮವಾಗಿ ಕೆಲಸ ಮಾಡಲು ನೆರವಾಗುತ್ತದೆ. 16GB RAM ಮತ್ತು 1TB ವರೆಗಿನ ಬೃಹತ್ ಸ್ಟೋರೇಜ್ ಆಯ್ಕೆಗಳು ಇದರಲ್ಲಿವೆ. ಡಿಸ್‌ಪ್ಲೇ ಮತ್ತು ಡಿಸೈನ್: ಮೊಟೊರೊಲಾ ಸಿಗ್ನೇಚರ್ 6.8 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 165Hz ನಷ್ಟು ವೇಗದ ರಿಫ್ರೆಶ್ ರೇಟ್ ಹೊಂದಿದೆ. ಸೂರ್ಯನ ಪ್ರಖರ ಬಿಸಿಲಿನಲ್ಲಿಯೂ ಪರದೆ ಸ್ಪಷ್ಟವಾಗಿ ಕಾಣಲು 6,200 ನಿಟ್ಸ್ ಪೀಕ್ ಬ್ರೈಟ್ನೆಸ್ ನೀಡಲಾಗಿದೆ. ಏರ್‌ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂನಿಂದ ತಯಾರಾದ ಈ ಫೋನ್ ಕೇವಲ 6.99 mm ದಪ್ಪವಿದ್ದು, ಕೈಯಲ್ಲಿ ಹಿಡಿಯಲು ತುಂಬಾ ಸ್ಲೀಕ್ ಮತ್ತು ಹಗುರವಾಗಿದೆ. ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಮತ್ತು IP69 ರೇಟಿಂಗ್ ನೀಡಲಾಗಿದೆ. ಕ್ಯಾಮೆರಾ ಮತ್ತು ಬ್ಯಾಟರಿ: ಫೋಟೋಗ್ರಫಿ ಪ್ರಿಯರಿಗಾಗಿ ಇದರಲ್ಲಿ 50 ಮೆಗಾಪಿಕ್ಸೆಲ್‌ನ ಸೋನಿ ಲೈಟಿಯಾ 828 ಸೆನ್ಸಾರ್ ಇರುವ ಕ್ವಾಡ್ ಕ್ಯಾಮೆರಾ ಸೆಟಪ್ ಇದೆ. 8K ವೀಡಿಯೋ ರೆಕಾರ್ಡಿಂಗ್ ಹಾಗೂ AI ಆಧರಿತ ಫೋಟೋ ಫೀಚರ್ಸ್‌ಗಳು ವೃತ್ತಿಪರ ಗುಣಮಟ್ಟದ ಚಿತ್ರಗಳನ್ನು ನೀಡುತ್ತವೆ. 5,200mAh ಸಾಮರ್ಥ್ಯದ ಸಿಲಿಕಾನ್-ಕಾರ್ಬನ್ ಬ್ಯಾಟರಿಯು ದೀರ್ಘಕಾಲದ ಬಾಳಿಕೆ ನೀಡಲಿದ್ದು, 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಇಲ್ಲಿದೆ. ಬೆಲೆ ಮತ್ತು ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 16 ಆಧಾರಿತ Motorola Hello UI ನೊಂದಿಗೆ ಬರಲಿದ್ದು, ಕಂಪನಿಯು 7 ವರ್ಷಗಳ ಓಎಸ್ ಅಪ್‌ಡೇಟ್ ಗ್ಯಾರಂಟಿ ನೀಡಿದೆ. ಇದರ ಆರಂಭಿಕ ಬೆಲೆ 12GB+256GB ವೇರಿಯಂಟ್‌ಗೆ ರೂ. 59,999 ಆಗಿದ್ದು, ಬ್ಯಾಂಕ್ ಆಫರ್‌ಗಳ ಅಡಿಯಲ್ಲಿ ರೂ. 54,999ಕ್ಕೆ ಖರೀದಿಸಬಹುದು. ಒಟ್ಟಾರೆಯಾಗಿ, ಮೊಟೊರೊಲಾ ಸಿಗ್ನೇಚರ್ ತನ್ನ ಬೆಲೆಗೆ ತಕ್ಕಂತೆ ಅತ್ಯುತ್ತಮ ತಂತ್ರಜ್ಞಾನ ಮತ್ತು ರಾಜವೈಭೋಗದ ಅನುಭವವನ್ನು ನೀಡುತ್ತದೆ. Moto AI ಫೀಚರ್ಸ್: ಮೊಟೊರೊಲಾ ಸಿಗ್ನೇಚರ್ ಫೋನ್ ಬಳಕೆದಾರರಿಗೆ ವೈಯಕ್ತಿಕ ಸಹಾಯಕನಂತೆ ಕೆಲಸ ಮಾಡುವ ಸುಧಾರಿತ 'Moto AI' ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ, ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಈ ಡಿವೈಸ್ ಖರೀದಿಸುವವರಿಗೆ ಭಾರತದಾದ್ಯಂತ ವಿಐಪಿ ಟ್ರಾವೆಲ್ ಮತ್ತು ಡೈನಿಂಗ್ ಆಕ್ಸೆಸ್ ನೀಡುವ ಎಕ್ಸ್‌ಕ್ಲೂಸಿವ್ ಸಿಗ್ನೇಚರ್ ಕ್ಲಬ್ ಸದಸ್ಯತ್ವ ದೊರೆಯಲಿದ್ದು, ಇದು ಪ್ರೀಮಿಯಂ ಗ್ರಾಹಕರಿಗೆ ಒಂದು ವಿಶೇಷ ಗೌರವವಾಗಿದೆ. #TECHNOLOGY #BENGALURU #MOTOROLASIGNATURE #HIGHSTORAGE #LIFESTYLEBRAND
manmohan
361 ವೀಕ್ಷಿಸಿದ್ದಾರೆ
ರಾಜ್ಯದ ಜನರಿಗೆ KMF ಗುಡ್‌ನ್ಯೂಸ್: ಇನ್ಮುಂದೆ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು, ಮೊಸರು! ಬೆಂಗಳೂರು: ಹಾಲು ಸೇರಿದಂತೆ ಇತರ ಹಾಲಿನ ಇತರ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಕೆಎಂಎಫ್ ಗುಡ್‌ನ್ಯೂಸ್ ನೀಡಿದೆ.ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (KMF) ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಬೆಲೆ ಏರಿಕೆಯ ನಡುವೆ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಂಕೇತಿಕವಾಗಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಈ ನೂತನ ಯೋಜನೆಯ ಮೂಲಕ ಕೆಎಂಎಫ್ ಗ್ರಾಹಕಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಕೆಎಂಎಫ್‌ನ ಈ ಯೋಜನೆಯಿಂದ ಬ್ಯಾಚುಲರ್‌ಗಳಿಗೆ, ಮನೆಯಲ್ಲಿ ಒಬ್ಬರೇ ಇರುವವರಿಗೆ ಹೆಚ್ಚು ಅನುಕೂಲ ಆಗಲಿದೆ. 10 ರೂಪಾಯಿಗೆ ಹಾಲು ಮಾತ್ರವಲ್ಲ! ವಿಶೇಷ ಸಂಗತಿ ಏನೆಂದರೆ, ಕೆಎಂಎಫ್ ಹತ್ತು ರೂಪಾಯಿ ಬೆಲೆಗೆ ಕೇವಲ ಹಾಲು ಮಾರಾಟ ಮಾಡೋಕೆ ಮಾತ್ರ ಮುಂದಾಗಿದ್ದಲ್ಲ. ಇದರ ಜೊತೆಗೆ 10 ರೂಪಾಯಿಗೆ ಮೊಸರು ಕೂಡ ಗ್ರಾಹಕರಿಗೆ ಸಿಗಲಿದೆ. 160 ml ಪಾಕೆಟ್ ಹಾಲು 10 ರೂಪಾಯಿಗೆ ಲಭ್ಯವಾಗಲಿದ್ದು, ಜೊತೆಗೆ 140 ml ಪಾಕೆಟ್ ಮೊಸರು 10 ರೂಪಾಯಿಗೆ ಸಿಗಲಿದೆ. ಈ ಮೊದಲು 200 ml ಹಾಲಿನ ಪಾಕೆಟ್, ಮೊಸರು ಸಿಗ್ತಾ ಇತ್ತು, ಈಗ 160 ml, 140 ml ಪಾಕೆಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು, ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಮಾವಿನ ಲಸ್ಸಿ, ಸ್ಟ್ರಾಬೆರಿ ಲಸ್ಸಿ ಕೂಡ ಗ್ರಾಹಕರಿಗೆ ಸಿಲಿದೆ. 15 ರೂಪಾಯಿಗೆ ಮಾವಿನ ಲಸ್ಸಿ, ಸ್ಟ್ರಾಬೆರಿ ಲಸ್ಸಿ ಲಭ್ಯವಾಗಲಿದ್ದು, ಶೀಘ್ರದಲ್ಲೇ ಎಲ್ಲಾ ನಂದಿನಿ ಮಳಿಗೆಗಳಿಗೆ ಹತ್ತು ರೂಪಾಯಿ ಹಾಲು, ಮೊಸರು ಸರಬರಾಜು ಆಗಲಿದೆ. ಆ ಮೂಲಕ ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಈ ಹೊಸ ಯೋಜನೆ ರೂಪಿಸಿದೆ. #NEWUPDATE #BENGALURU #KMF #NANDINIPRODUCTS #CUSTOMERFRIENDLY
manmohan
358 ವೀಕ್ಷಿಸಿದ್ದಾರೆ
Airtel ಬೊಂಬಾಟ್‌ ಪ್ಲಾನ್‌: ಒಂದೇ ರೀಚಾರ್ಜ್‌ನಲ್ಲಿ ಎರಡು ಲಾಭ ಪಡೆಯಲು ಈ ಯೋಜನೆ ಅತ್ಯುತ್ತಮ! ಭಾರ್ತಿ Airtel ಟೆಲಿಕಾಂ ತನ್ನ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡಿರುವ ಜೊತೆಗೆ ಕೆಲವು ಬೊಂಬಾಟ್‌ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಸಹ ಲಭ್ಯ ಮಾಡಿದೆ. ಆ ಪೈಕಿ ಏರ್‌ಟೆಲ್‌ ಕಂಪನಿಯ 699 ರೂ.ಗಳ Postpaid ರೀಚಾರ್ಜ್‌ ಪ್ಲಾನ್‌ ಬಳಕೆದಾರರ ಗಮನ ಸೆಳೆದಿವೆ. ಈ ಪೋಸ್ಟ್‌ಪೇಯ್ಡ್‌ ಪ್ಲಾನ್‌ನಲ್ಲಿ ಡೇಟಾ ಪ್ರಯೋಜನಗಳ ಜೊತೆಗೆ ಆಯ್ದ OTT ಚಂದಾದಾರಿಕೆಯ ಸೌಲಭ್ಯಗಳು ಸಹ ಸಿಗುತ್ತವೆ. ಹೀಗಾಗಿ ಈ ಪ್ಲಾನ್‌ ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಾದರೇ Airtel ಕಂಪನಿಯ 699 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ. Airtel 699 ರೂ.ಗಳ Postpaid ಪ್ಲಾನ್ ಪ್ರಯೋಜನಗಳ ಮಾಹಿತಿ: Airtel ಟೆಲಿಕಾಂನ ಈ 699 ರೂ.ಗಳ ಯೋಜನೆಯು ಇನ್ಫಿನಿಟಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಆಗಿದೆ. ಈ ಯೋಜನೆಯ ಶುಲ್ಕ 699 ರೂ.ಗಳು ಆಗಿದ್ದು ಇದರಲ್ಲಿ ಕುಟುಂಬದ ಇಬ್ಬರು ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಅಂದರೆ ಪ್ರತಿ ಸದಸ್ಯರಿಗೆ 350 ರೂ.ಗಳು ವೆಚ್ಚವಾಗುತ್ತದೆ. ಇನ್ನು ಈ ಏರ್‌ಟೆಲ್‌ ಸಂಸ್ಥೆಯ Postpaid ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ ಸಿಗಲಿದೆ ಜೊತೆಗೆ ಪ್ರತಿದಿನ 100 SMS ಪ್ರಯೋಜನ ಕೂಡಾ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯ ಪ್ರಾಥಮಿಕ ಬಳಕೆದಾರರು 75GB ಡೇಟಾ ಸೌಲಭ್ಯ ಪಡೆಯುತ್ತಾರೆ ಹಾಗೂ ದ್ವಿತೀಯ ಬಳಕೆದಾರರಿಗೆ 30GB ಡೇಟಾ ಸೌಲಭ್ಯ ಸಿಗುತ್ತದೆ. Airtel 699 ರೂ.ಗಳ Postpaid ಪ್ಲಾನಿನ ಹೆಚ್ಚುವರಿ ಸೌಲಭ್ಯಗಳು: Airtel ಟೆಲಿಕಾಂನ ಈ 699 ರೂ.ಗಳ Postpaid ಯೋಜನೆಯು ಕೆಲವು ಆಡ್ ಆನ್ ಪ್ರಯೋಜನಗಳನ್ನು ಕೂಡ ಪಡೆದಿದೆ. ಈ ಪ್ಲಾನಿನಲ್ಲಿ ಆರು ತಿಂಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವ ದೊರೆಯುತ್ತದೆ ಹಾಗೂ ಒಂದು ವರ್ಷದ ಕಾಲ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸಿಗಲಿದೆ. ಹಾಗೆಯೇ ಆರು ತಿಂಗಳ ಕಾಲ 100GB ಕ್ಲೌಡ್ ಸ್ಟೋರೇಜ್ ಹೊಂದಿರುವ ಗೂಗಲ್ ಒನ್ ಪ್ರಯೋಜನ ದೊರೆಯುತ್ತದೆ. ಇದಲ್ಲದೇ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಆಕ್ಸಸ್ ನೀಡುವ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಸೌಲಭ್ಯ, ಬ್ಲೂ ರಿಬ್ಬನ್ ಬ್ಯಾಗ್ ಪ್ರಯೋಜನ ಹಾಗೂ ಉಚಿತ ಹಲೋ ಟ್ಯೂನ್ಸ್ ಆಕ್ಸಸ್ ನಂತಹ ಪ್ರಯೋಜನಗಳು ಲಭ್ಯವಾಗಲಿವೆ. ಇದಲ್ಲದೇ ಏರ್‌ಟೆಲ್‌ ಟೆಲಿಕಾಂ 999 ರೂ.ಗಳ ಬೆಲೆಯಲ್ಲಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯ ಆಯ್ಕೆ ಸಹ ನೀಡಿದೆ. ಈ ಯೋಜನೆಯಲ್ಲಿ ಸಹ ಇಬ್ಬರು ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ದಿನನಿತ್ಯ 100 SMS ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯೋಜನೆಯ ಪ್ರಾಥಮಿಕ ಸದ್ಯಸರಿಗೆ 90GB ಡೇಟಾ ಸೌಲಭ್ಯ ಪಡೆಯುತ್ತಾರೆ ಹಾಗೂ ದ್ವಿತೀಯ ಸದ್ಯಸರಿಗೆ 30GB ಡೇಟಾ ಸೌಲಭ್ಯ ಸಿಗುತ್ತದೆ. ಉಳಿದಂತೆ ಈ ಪ್ಲಾನಿನಲ್ಲಿ ಆರು ತಿಂಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವ ದೊರೆಯುತ್ತದೆ ಹಾಗೂ ಒಂದು ವರ್ಷದ ಕಾಲ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸಿಗಲಿದೆ. ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯ 1199 ರೂ.ಗಳ ಹಾಗೂ 1399 ರೂ.ಗಳ Postpaid ಯೋಜನೆಗಳು ಮೂರು ಸದಸ್ಯರಿಗೆ ಆಡ್‌ ಆನ್ ಸಿಮ್ ಸೌಲಭ್ಯ ಒಳಗೊಂಡಿವೆ. ಇನ್ನು ಈ ಎರಡು ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸಹ ಡೇಟಾ ಸೌಲಭ್ಯ, ಅನಿಯಮಿತ ವಾಯ್ಸ್‌ ಕರೆ ಸೌಲಭ್ಯ, SMS ಪ್ರಯೋಜನ ಹಾಗೂ OTT ಚಂದಾದಾರಿಕೆ ಪ್ರಯೋಜನಗಳನ್ನು ಹೊಂದಿವೆ. #TECHNOLOGY #BHARTIAIRTEL #POSTPAIDRECHARGEPLAN #UNLIMITEDBENEFITS
manmohan
517 ವೀಕ್ಷಿಸಿದ್ದಾರೆ
ವಾಟ್ಸಾಪ್ ವೆಬ್‌ನಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆ ಸಾಧ್ಯತೆ! ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ವೆಬ್ ಬಳಕೆದಾರರಿಗೆ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ, ವಾಟ್ಸಾಪ್ ತನ್ನ ವೆಬ್ ಪ್ಲಾಟ್‌ಫಾರ್ಮ್‌ನಲ್ಲಿ ಬಹುನಿರೀಕ್ಷಿತ ಗ್ರೂಪ್ ವಾಯ್ಸ್ ಮತ್ತು ವೀಡಿಯೊ ಕಾಲ್ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದ್ದು,ಈ ಹೊಸ ಅಪ್‌ಡೇಟ್ ಜಾರಿಗೆ ಬಂದರೆ, ವಾಟ್ಸಾಪ್ ವೆಬ್ ಅನುಭವವು ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್‌ಗಳಿಗೆ ಇನ್ನಷ್ಟು ಸಮಾನವಾಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ. ವಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ಕಾಲ್‌ಗಳಿಗೆ ಬೆಂಬಲ: ಈ ಹೊಸ ವೈಶಿಷ್ಟ್ಯದ ಮೂಲಕ ಬಳಕೆದಾರರು ಬ್ರೌಸರ್‌ನಲ್ಲೇ ನೇರವಾಗಿ ಗ್ರೂಪ್ ವಾಯ್ಸ್ ಹಾಗೂ ವೀಡಿಯೊ ಕಾಲ್‌ಗಳನ್ನು ಮಾಡಬಹುದಾಗಿದೆ. ಇದುವರೆಗೆ ವಾಟ್ಸಾಪ್ ವೆಬ್‌ನಲ್ಲಿ ವೈಯಕ್ತಿಕ ಚಾಟ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಅನುಭವ ಇದೀಗ ಗ್ರೂಪ್ ಸಂವಹನಕ್ಕೂ ವಿಸ್ತರಿಸಲಿದೆ. ಕಚೇರಿ ಕೆಲಸ, ಆನ್‌ಲೈನ್ ಚರ್ಚೆಗಳು ಮತ್ತು ದಿನನಿತ್ಯದ ಸಂವಹನಕ್ಕೆ ಇದು ಬಹಳ ಅನುಕೂಲಕರವಾಗಲಿದೆ. ಎಲ್ಲ ವೇದಿಕೆಗಳಲ್ಲೂ ಒಂದೇ ರೀತಿಯ ಅನುಭವಕ್ಕೆ ಒತ್ತು: ವಾಟ್ಸಾಪ್‌ನ ಈ ಹೆಜ್ಜೆ, ಬಳಕೆದಾರರು ಯಾವ ಸಾಧನ ಬಳಸಿದರೂ ಸಂಪರ್ಕದಿಂದ ದೂರವಾಗಬಾರದು ಎಂಬ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಮೂಲಕವೇ ಹೆಚ್ಚಿನ ಸಮಯ ಕೆಲಸ ಮಾಡುವವರಿಗೆ, ಪ್ರತ್ಯೇಕ ಅಪ್ ಇನ್‌ಸ್ಟಾಲ್ ಮಾಡದೇ ಕಾಲ್ ಮಾಡುವ ಅವಕಾಶ ಸಿಗುವುದು ದೊಡ್ಡ ಲಾಭವಾಗಿದೆ. ಇದರಿಂದ ವಾಟ್ಸಾಪ್ ವೆಬ್‌ನ ಬಳಕೆ ವ್ಯಾಪಕವಾಗಲಿದೆ. ಗ್ರೂಪ್ ಕಾಲ್‌ನಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿ ಸಾಧ್ಯತೆ: WABetainfo ವರದಿ ಪ್ರಕಾರ, ಪ್ರಾರಂಭಿಕ ಹಂತದಲ್ಲಿ ವಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ಕಾಲ್‌ಗಳಿಗೆ ಭಾಗವಹಿಸುವವರ ಸಂಖ್ಯೆಗೆ ಮಿತಿ ವಿಧಿಸಬಹುದು. ತಾಂತ್ರಿಕ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಮೊದಲು 8 ಅಥವಾ 16 ಜನರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ. ಮೊಬೈಲ್ ಅಪ್‌ನಲ್ಲಿ ಇರುವ 32 ಸದಸ್ಯರ ಮಿತಿಗೆ ಹೋಲಿಸಿದರೆ ಇದು ಕಡಿಮೆಯಾದರೂ, ಮುಂದಿನ ಅಪ್‌ಡೇಟ್‌ಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಕಾಲ್ ಲಿಂಕ್‌ಗಳಿಂದ ಸೇರಲು ಇನ್ನಷ್ಟು ಸುಲಭ: ವಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ಕಾಲ್‌ಗಳಿಗೆ 'ಕಾಲ್ ಲಿಂಕ್' ವೈಶಿಷ್ಟ್ಯವೂ ಲಭ್ಯವಾಗಬಹುದು. ಈ ಮೂಲಕ ಬಳಕೆದಾರರು ಒಂದು ಹಂಚಿಕೊಳ್ಳಬಹುದಾದ ಲಿಂಕ್ ರಚಿಸಿ, ಅದನ್ನು ಇತರರಿಗೆ ಕಳುಹಿಸಬಹುದು. ಚಾಟ್‌ನಲ್ಲಿ ಸಕ್ರಿಯವಾಗಿರದವರೂ ಕೂಡ ಆ ಲಿಂಕ್ ಮೂಲಕ ಕಾಲ್‌ಗೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಇದು ದೊಡ್ಡ ಸಭೆಗಳು ಮತ್ತು ತಂಡದ ಚರ್ಚೆಗಳನ್ನು ಸುಲಭವಾಗಿ ಆಯೋಜಿಸಲು ಸಹಾಯ ಮಾಡಲಿದೆ. ಕಾಲ್ ಶೆಡ್ಯೂಲಿಂಗ್ ಫೀಚರ್ ಕೂಡ ಅಭಿವೃದ್ಧಿಯಲ್ಲಿದೆ: ಗ್ರೂಪ್ ಕಾಲ್‌ಗಳ ಜೊತೆಗೆ, ವಾಟ್ಸಾಪ್ ವೆಬ್‌ನಲ್ಲಿ ಕಾಲ್ ಶೆಡ್ಯೂಲ್ ಮಾಡುವ ಹೊಸ ಆಯ್ಕೆಯೂ ಬರಬಹುದು ಎನ್ನಲಾಗಿದೆ. ಬಳಕೆದಾರರು ಕಾಲ್‌ಗೆ ಹೆಸರು, ವಿವರ, ಪ್ರಾರಂಭ ಮತ್ತು ಅಂತ್ಯದ ಅಂದಾಜು ಸಮಯವನ್ನು ನಿಗದಿಪಡಿಸಬಹುದಾಗಿದೆ. ಈ ಕಾಲ್‌ಗಳು ಸ್ವಯಂಚಾಲಿತವಾಗಿ ಆರಂಭವಾಗುವುದಿಲ್ಲ. ಬದಲಾಗಿ, ಮುಂಚಿತ ಮಾಹಿತಿ ನೀಡುವ ಈವೆಂಟ್ ರೂಪದಲ್ಲಿ ಎಲ್ಲರಿಗೂ ಗೋಚರವಾಗುತ್ತದೆ. ವಾಯ್ಸ್ ಅಥವಾ ವೀಡಿಯೊ ಕಾಲ್ ಆಯ್ಕೆ ಮಾಡುವ ಸೌಲಭ್ಯವೂ ಇರಬಹುದು. ಭಾರತೀಯ ಬಳಕೆದಾರರಿಗೆ ವಿಶೇಷ ಪ್ರಯೋಜನ: ಭಾರತದಲ್ಲಿ ವಾಟ್ಸಾಪ್ ದಿನನಿತ್ಯದ ಸಂವಹನಕ್ಕೆ ಪ್ರಮುಖ ಸಾಧನವಾಗಿರುವುದರಿಂದ, ಈ ಹೊಸ ವೈಶಿಷ್ಟ್ಯಗಳು ಹೆಚ್ಚು ಪ್ರಾಯೋಗಿಕವಾಗಿವೆ. ಆನ್‌ಲೈನ್ ಕೆಲಸ, ಶಿಕ್ಷಣ, ಕುಟುಂಬ ಮತ್ತು ವ್ಯವಹಾರ ಸಂಬಂಧಿತ ಸಂವಹನಗಳಿಗೆ ವಾಟ್ಸಾಪ್ ವೆಬ್ ಇನ್ನಷ್ಟು ಶಕ್ತಿಶಾಲಿಯಾಗುವ ನಿರೀಕ್ಷೆಯಿದೆ. ಅಧಿಕೃತ ಘೋಷಣೆ ಇನ್ನೂ ಬಾಕಿಯಿದ್ದರೂ, ಈ ಅಪ್‌ಡೇಟ್ ವಾಟ್ಸಾಪ್ ಬಳಕೆದಾರರ ಅನುಭವವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. #LATEST #TECHNOLOGY #WHATSAPPWEB #NEWUPDATE #GROUPVOICE #VIDEOCALL
manmohan
525 ವೀಕ್ಷಿಸಿದ್ದಾರೆ
ಇನ್ನು ಕೇವಲ 79 ರೂ.ಗೆ JioHotstar ಚಂದಾದಾರಿಕೆ: ಇಲ್ಲಿದೆ ಪೂರ್ತಿ ಮಾಹಿತಿ! ಭಾರತದ ಪ್ರಮುಖ ಆನ್‌ಲೈನ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಒಂದಾದ ಜಿಯೋಹಾಟ್‌ಸ್ಟಾರ್ (JioHotstar) ತನ್ನ ಚಂದಾದಾರಿಕೆ ಮಾದರಿಯನ್ನು ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಿದೆ. ಜನವರಿ 28ರಿಂದ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯಲ್ಲಿ ಬದಲಾವಣೆಯಾಗಲಿದ್ದು, ಎಲ್ಲಾ ಪ್ಲ್ಯಾನ್‌ಗಳಿಗೂ ಮಾಸಿಕ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ. ಇಲ್ಲಿ ಸಿಹಿಸುದ್ದಿ ಏನೆಂದರೆ, ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯ ಆರಂಭಿಕ ದರ ಕೇವಲ 79 ರೂ.ಗಳು.! ಹಾಗಾದರೆ, ಹೊಸದಾಗಿ ಬರುತ್ತಿರುವ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ. ಜಿಯೋಹಾಟ್‌ಸ್ಟಾರ್ ಪರಿಚಯಿಸುತ್ತಿರುವ ಹೊಸ ಚಂದಾದಾರಿಕೆ ವ್ಯವಸ್ಥೆಯಲ್ಲಿಯೂ ಮೊಬೈಲ್, ಸೂಪರ್ ಮತ್ತು ಪ್ರೀಮಿಯಂ ಎಂಬ ಮೂರು ಹಂತದ ಚಂದಾದಾರಿಕೆಗಳನ್ನು ಮುಂದುವರಿಸಲಾಗದೆ. ಮೊಬೈಲ್ ಮತ್ತು ಸೂಪರ್ ಪ್ಲ್ಯಾನ್‌ಗಳು ಜಾಹೀರಾತು ಆಧಾರಿತವಾಗಿದ್ದು, ದಿನನಿತ್ಯದ ಮನರಂಜನೆಗಾಗಿ ಕಡಿಮೆ ದರದ ಆಯ್ಕೆಗಳನ್ನು ಹುಡುಕುವ ಬಳಕೆದಾರರಿಗೆ ಉದ್ದೇಶಿಸಲಾಗಿದೆ. ಪ್ರೀಮಿಯಂ ಪ್ಲ್ಯಾನ್ ಮಾತ್ರ ಹೆಚ್ಚು ಗುಣಮಟ್ಟದ ವೀಕ್ಷಣಾ ಅನುಭವವನ್ನು ಬಯಸುವ ಕುಟುಂಬಗಳು ಮತ್ತು ದೊಡ್ಡ ಪರದೆ ಬಳಕೆದಾರರತ್ತ ಗಮನಹರಿಸಿದೆ. ಈ ಪ್ಲ್ಯಾನ್‌ಗಳ ಲಾಭಗಳು ಈ ಕೆಳಕಡಂತಿವೆ. 79 ರೂ.ಗೆ ಮೊಬೈಲ್ ಪ್ಲ್ಯಾನ್: ಜಿಯೋಹಾಟ್‌ಸ್ಟಾರ್ ಮೊಬೈಲ್ ಪ್ಲ್ಯಾನ್‌ನಲ್ಲಿ ಒಬ್ಬ ಬಳಕೆದಾರರು ಒಂದೇ ಸಮಯದಲ್ಲಿ ಒಂದೇ ಮೊಬೈಲ್ ಸಾಧನದಲ್ಲಿ ಕಂಟೆಂಟ್ ವೀಕ್ಷಿಸಲು ಅವಕಾಶವಿರುಂತೆ ರೂಪಿಸಲಾಗಿದೆ. ಇದರ ಮಾಸಿಕ ಶುಲ್ಕ ರೂ.79 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.149 ಮತ್ತು ವಾರ್ಷಿಕ ಪ್ಲ್ಯಾನ್ ರೂ.499 ದರದಲ್ಲಿ ಲಭ್ಯವಿದೆ. ಈ ಪ್ಲ್ಯಾನ್‌ನಲ್ಲಿ 720p ಎಚ್‌ಡಿ ಸ್ಟ್ರೀಮಿಂಗ್ ಸಿಗುತ್ತದೆ. ಆದರೆ ಹಾಲಿವುಡ್ ಸಿನಿಮಾಗಳು ಮತ್ತು ಸೀರಿಸ್‌ಗಳು ಈ ಪ್ಯಾಕ್‌ನಲ್ಲಿ ಸೇರಿಲ್ಲ. ಅವುಗಳನ್ನು ಪ್ರತ್ಯೇಕ ಆಡ್‌ಓನ್ ರೂಪದಲ್ಲಿ ಪಡೆಯಬೇಕಿದ್ದು, ಇದಕ್ಕೆ ಮಾಸಿಕ ರೂ.49 ವೆಚ್ಚವಾಗುತ್ತದೆ. ತ್ರೈಮಾಸಿಕ ಮತ್ತು ವಾರ್ಷಿಕ ಅಡ್‌ಓನ್‌ಗಳ ದರಗಳು ಕ್ರಮವಾಗಿ ರೂ.129 ಮತ್ತು ರೂ.399 ಆಗಿವೆ. ಎರಡು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ: ಜಿಯೋಹಾಟ್‌ಸ್ಟಾರ್ ಸೂಪರ್ ಪ್ಲ್ಯಾನ್ ಕುಟುಂಬದ ಚಿಕ್ಕ ಬಳಕೆಗೆ ಸೂಕ್ತವಾಗಿದ್ದು, ಒಂದೇ ಸಮಯದಲ್ಲಿ ಎರಡು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ ನೀಡುತ್ತದೆ. 1080p ಫುಲ್ ಎಚ್‌ಡಿ ಗುಣಮಟ್ಟದ ಸ್ಟ್ರೀಮಿಂಗ್‌ ಜೊತೆಗೆ ಮೊಬೈಲ್, ವೆಬ್ ಮತ್ತು ಬೆಂಬಲಿತ ಸ್ಮಾರ್ಟ್ ಟಿವಿಗಳಲ್ಲಿ ಕಂಟೆಂಟ್ ನೋಡಬಹುದು. ಇದರ ಮಾಸಿಕ ದರ ರೂ.149 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.349 ಮತ್ತು ವಾರ್ಷಿಕ ಪ್ಲ್ಯಾನ್ ರೂ.1,099 ದರದಲ್ಲಿ ಲಭ್ಯವಿದೆ. ಈ ಪ್ಲ್ಯಾನ್‌ನಲ್ಲಿ ಹಾಲಿವುಡ್ ಕಂಟೆಂಟ್ ಕೂಡ ಬೇಸ್ ಪ್ಯಾಕ್‌ನಲ್ಲೇ ಸೇರಿದೆ. ದೊಡ್ಡ ಪರದೆಗಳಲ್ಲಿ ಮನರಂಜನೆ: ಹೊಸದಾಗಿ ಪರಿಚಯವಾಗುತ್ತಿರುವ ಪ್ರೀಮಿಯಂ ಪ್ಲ್ಯಾನ್ ಜಿಯೋಹಾಟ್‌ಸ್ಟಾರ್‌ನ ಅತ್ಯುತ್ತಮ ಆಯ್ಕೆಯಾಗಿದ್ದು, ದೊಡ್ಡ ಪರದೆಗಳಲ್ಲಿ ಮನರಂಜನೆ ಆನಂದಿಸುವವರಿಗೆ ವಿನ್ಯಾಸಗೊಳಿಸಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಸಾಧನಗಳಲ್ಲಿ ವೀಕ್ಷಿಸುವ ಅವಕಾಶ, 4K ರೆಸಲ್ಯೂಶನ್ ಮತ್ತು ಡಾಲ್ಬಿ ವಿಷನ್ ಬೆಂಬಲ ಇದರ ಪ್ರಮುಖ ಆಕರ್ಷಣೆ. ಇದರ ಮಾಸಿಕ ದರ ರೂ.299 ಆಗಿದ್ದು, ತ್ರೈಮಾಸಿಕ ಪ್ಲ್ಯಾನ್ ರೂ.699 ಮತ್ತು ವಾರ್ಷಿಕ ಪ್ಲ್ಯಾನ್ ರೂ.2,199. ಲೈವ್ ಕ್ರೀಡೆಗಳು ಮತ್ತು ನೇರ ಪ್ರಸಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಕಂಟೆಂಟ್ ಜಾಹೀರಾತು ರಹಿತವಾಗಿ ಲಭ್ಯವಿರುತ್ತದೆ. #LATEST #TECHNOLOGY #JIOHOTSTAR #SUPER #PREMIUM #PLANS #FULLHD
manmohan
544 ವೀಕ್ಷಿಸಿದ್ದಾರೆ
ನಿಮ್ಮ ಇನ್ವರ್ಟರ್ ಬ್ಯಾಟರಿ ಗೆ ನೀರು ಯಾವಾಗ ಸೇರಿಸಬೇಕು.? 90% ಜನರಿಗೆ ಸರಿಯಾದ ಸಮಯ ತಿಳಿದಿಲ್ಲ.! ಇಂದಿನ ಕಾಲದಲ್ಲಿ, ಪ್ರತಿ ಮನೆ ಮತ್ತು ಕಚೇರಿಗೆ, ವಿಶೇಷವಾಗಿ ವಿದ್ಯುತ್ ನಿರಂತರವಾಗಿ ಅಪಾಯದಲ್ಲಿರುವ ಪ್ರದೇಶಗಳಲ್ಲಿ ಇನ್ವರ್ಟರ್‌ಗಳು ಅತ್ಯಗತ್ಯ ಅವಶ್ಯಕತೆಯಾಗಿವೆ. ವಿದ್ಯುತ್ ಕಡಿತಗೊಂಡಾಗ ಇನ್ವರ್ಟರ್ ಮನೆಯನ್ನು ಬೆಳಗಿಸುತ್ತದೆ, ಆದರೆ ಕಾಲಾನಂತರದಲ್ಲಿ ಅದರ ಬ್ಯಾಕಪ್ ಏಕೆ ಕಡಿಮೆಯಾಗುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ.? ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ.! ಇನ್ವರ್ಟರ್ ಬ್ಯಾಟರಿಯಲ್ಲಿರುವ ನೀರನ್ನು ಬದಲಾಯಿಸುವ ಅಗತ್ಯವಿಲ್ಲ, ಬದಲಿಗೆ ಅದನ್ನು ಮರುಪೂರಣ ಮಾಡಬೇಕಾಗುತ್ತದೆ. ಬ್ಯಾಟರಿಯು ಎಲೆಕ್ಟ್ರೋಲೈಟ್‌ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಈ ನೀರು ಒಣಗಿದಾಗ ಅಥವಾ ಅದರ ಮಟ್ಟ ಕಡಿಮೆಯಾದಾಗ, ಬ್ಯಾಟರಿ ಪ್ಲೇಟ್‌ಗಳು ಒಣಗುತ್ತವೆ. ಇದು ಇನ್ವರ್ಟರ್‌ನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬ್ಯಾಟರಿ ಒಣಗಿದಂತೆ, ಅದರ ಚಾರ್ಜಿಂಗ್ ಸಾಮರ್ಥ್ಯ ನಿಧಾನವಾಗುತ್ತದೆ ಮತ್ತು ಡಿಸ್ಚಾರ್ಜ್ ವೇಗ ಹೆಚ್ಚಾಗುತ್ತದೆ. ಇದರರ್ಥ ಹಿಂದೆ 4 ಗಂಟೆಗಳ ಬ್ಯಾಕಪ್ ಒದಗಿಸಿದ ಬ್ಯಾಟರಿಯು ನೀರಿನ ಕೊರತೆಯಿಂದಾಗಿ 2 ಗಂಟೆಗಳ ಕಾಲ ಸಹ ಉಳಿಯಲು ಸಾಧ್ಯವಿಲ್ಲ. ನೀರಿನ ಮಟ್ಟವನ್ನು ಯಾವಾಗ ಪರಿಶೀಲಿಸಬೇಕು? ನಿಮ್ಮ ಬ್ಯಾಟರಿಗೆ ನೀರನ್ನು ಯಾವಾಗ ಸೇರಿಸಬೇಕೆಂದು ಯಾವುದೇ ನಿಯಮವಿಲ್ಲ. ಅದು ನಿಮ್ಮ ಬಳಕೆಯನ್ನು ಅವಲಂಬಿಸಿರುತ್ತದೆ. ನಿಮ್ಮ ಪ್ರದೇಶದಲ್ಲಿ ಅಪರೂಪಕ್ಕೆ ವಿದ್ಯುತ್ ಕಡಿತವಾಗಿದ್ದರೆ ಮತ್ತು ನಿಮ್ಮ ಇನ್ವರ್ಟರ್ ಬಳಕೆ ಕಡಿಮೆಯಿದ್ದರೆ, ನೀವು ಹೆಚ್ಚಾಗಿ ಚಿಂತಿಸಬೇಕಾಗಿಲ್ಲ. ಅಂತಹ ಸಂದರ್ಭಗಳಲ್ಲಿ, ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನೀರಿನ ಮಟ್ಟವನ್ನು ಪರಿಶೀಲಿಸುವುದು ಸಾಕು. ನೀವು ಬೇಸಿಗೆಯಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಅಥವಾ ಭಾರೀ ಇನ್ವರ್ಟರ್ ಬಳಕೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಅಜಾಗರೂಕರಾಗಿರಬೇಡಿ. ಭಾರೀ ಬಳಕೆಯ ಸಮಯದಲ್ಲಿ, ಪ್ರತಿ ಒಂದರಿಂದ ಒಂದೂವರೆ ತಿಂಗಳಿಗೊಮ್ಮೆ ಬ್ಯಾಟರಿ ನೀರಿನ ಮಟ್ಟವನ್ನು ಪರಿಶೀಲಿಸಿ. ಈ ಸರಳ ಅಭ್ಯಾಸವು ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ವರ್ಷಗಳವರೆಗೆ ವಿಸ್ತರಿಸಬಹುದು. ಸೂಚಕವು ಸಂಕೇತವನ್ನು ನೀಡುತ್ತದೆ.! ನೀರನ್ನು ಸೇರಿಸುವ ಸಮಯ ಬಂದಾಗ ನಿಮಗೆ ಹೇಗೆ ಗೊತ್ತು? ಇದಕ್ಕಾಗಿ ನೀವು ಮೆಕ್ಯಾನಿಕ್ ಅನ್ನು ಕರೆಯುವ ಅಗತ್ಯವಿಲ್ಲ. ಹೆಚ್ಚಿನ ಇನ್ವರ್ಟರ್ ಬ್ಯಾಟರಿಗಳು 'ಕನಿಷ್ಠ' ಮತ್ತು 'ಗರಿಷ್ಠ' ಮಟ್ಟಗಳೊಂದಿಗೆ ಗುರುತಿಸಲಾದ ನೀರಿನ ಮಟ್ಟದ ಸೂಚಕಗಳನ್ನು ಹೊಂದಿರುತ್ತವೆ. ನೀರಿನ ಮಟ್ಟ ಅಥವಾ ಸೂಚಕ ಫ್ಲೋಟ್ 'ಕನಿಷ್ಠ' ಗುರುತುಗಿಂತ ಕೆಳಗೆ ಇಳಿಯಲು ಪ್ರಾರಂಭಿಸಿದಾಗ, ಬ್ಯಾಟರಿಗೆ ಬಾಯಾರಿಕೆಯಾಗುತ್ತದೆ. ಮರುಪೂರಣ ಮಾಡುವಾಗ, ಮಟ್ಟವು 'ಗರಿಷ್ಠ' ಗುರುತು ಮೀರದಂತೆ ಎಚ್ಚರವಹಿಸಿ. ಈ ಎರಡು ಗುರುತುಗಳ ನಡುವೆ ನೀರಿನ ಮಟ್ಟವನ್ನು ಇಡುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅತಿಯಾಗಿ ತುಂಬುವುದರಿಂದ ಚಾರ್ಜಿಂಗ್ ಸಮಯದಲ್ಲಿ ಆಮ್ಲ ಕುದಿಯಲು ಕಾರಣವಾಗಬಹುದು, ನೆಲಕ್ಕೆ ಹಾನಿಯಾಗುವ ಮತ್ತು ಬ್ಯಾಟರಿ ಟರ್ಮಿನಲ್‌ಗಳಲ್ಲಿ ಇಂಗಾಲದ ಸಂಗ್ರಹವಾಗುವ ಅಪಾಯವಿದೆ. ಡಿಸ್ಟಿಲ್ಡ್ ವಾಟರ್ ಅನ್ನು ಬಳಸಲು ಮರೆಯಬೇಡಿ.! ಅನೇಕ ಜನರು ತಮ್ಮ ಬ್ಯಾಟರಿಗಳಿಗೆ ಸಾಮಾನ್ಯ ಟ್ಯಾಪ್ ನೀರನ್ನು ಸುರಿಯುತ್ತಾರೆ. ಇದು ಬ್ಯಾಟರಿಯ ಆರೋಗ್ಯಕ್ಕೆ ವಿಷಕಾರಿಯಾಗಿದೆ. ಸಾಮಾನ್ಯ ನೀರಿನಲ್ಲಿ ಬ್ಯಾಟರಿಯ ಪ್ಲೇಟ್‌ಗಳಿಗೆ ಹಾನಿ ಮಾಡುವ ವಿವಿಧ ಖನಿಜಗಳು ಮತ್ತು ಕಲ್ಮಶಗಳಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಸ್ಟಿಲ್ಡ್ ವಾಟರ್ ಅನ್ನು ಯಾವಾಗಲೂ ಬಳಸಿ. ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ. ಬ್ಯಾಟರಿಗಳು ಆಮ್ಲವನ್ನು ಹೊಂದಿರುತ್ತವೆ, ಆದ್ದರಿಂದ ನೀರನ್ನು ಸೇರಿಸುವಾಗ ಕೈಗವಸುಗಳು ಮತ್ತು ಕನ್ನಡಕಗಳನ್ನು ಧರಿಸಲು ಮರೆಯದಿರಿ. ಬ್ಯಾಟರಿ ಕ್ಯಾಪ್ ಅಥವಾ ವೆಂಟ್ ಪ್ಲಗ್ ಅನ್ನು ಅನಗತ್ಯವಾಗಿ ತೆರೆದಿಡಬೇಡಿ.ಚಾರ್ಜ್ ಮಾಡುವಾಗ ಬ್ಯಾಟರಿ ಹೆಚ್ಚು ಬಿಸಿಯಾಗುವುದು ಅಥವಾ ವಿಚಿತ್ರವಾದ ವಾಸನೆಯನ್ನು ಹೊರಸೂಸುವುದನ್ನು ನೀವು ಗಮನಿಸಿದರೆ, ಅದನ್ನು ನೀವೇ ಹಾಳು ಮಾಡುವ ಬದಲು ತಕ್ಷಣ ತಜ್ಞರನ್ನು ಸಂಪರ್ಕಿಸಿ. #LATEST #INVERTERBATTERY #MAINTENANCE #FILLINGDISTILLEDWATER #BACKUPOFPOWER
manmohan
589 ವೀಕ್ಷಿಸಿದ್ದಾರೆ
BSNL Superstar: ಪ್ರತಿ ತಿಂಗಳು 5000GB ಡೇಟಾದ ಭರ್ಜರಿ ರಿಚಾರ್ಜ್ ಪ್ಲಾನ್ ಕೇವಲ 799 ರೂ.ಗಳಿಗೆ ಲಭ್ಯ! ಬಿಎಸ್‌ಎನ್‌ಎಲ್ ತನ್ನ ಹೈ-ಸ್ಪೀಡ್ ಫೈಬರ್ ಇಂಟರ್ನೆಟ್ ಬಳಕೆದಾರರಿಗಾಗಿ ಆಟವನ್ನೇ ಬದಲಾಯಿಸುವ ಸಂಕ್ರಾಂತಿ ಸ್ಪೆಷಲ್ ಕೊಡುಗೆಯನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್ ಸೂಪರ್‌ಸ್ಟಾರ್ ಪ್ರೀಮಿಯಂ ವೈಫೈ ಯೋಜನೆಯಡಿಯಲ್ಲಿ ಗ್ರಾಹಕರು ಈಗ ತಿಂಗಳಿಗೆ 5000GB ಡೇಟಾವನ್ನು ಪಡೆಯಬಹುದು. ಈ ಬೃಹತ್ ಬಿಎಸ್‌ಎನ್‌ಎಲ್ ಸೂಪರ್ ಸ್ಟಾರ್ ಪ್ಲಾನ್ ಡೇಟಾ ಕ್ಯಾಪ್ ಅನ್ನು ಭಾರೀ ಬಳಕೆದಾರರು ಮಲ್ಟಿ ಡಿವೈಸ್ ಮನೆಗಳು ಮತ್ತು ಡೇಟಾ ಖಾಲಿಯಾಗುವ ಭಯವಿಲ್ಲದೆ ಸ್ಥಿರವಾದ ಹೆಚ್ಚಿನ-ಗಾತ್ರದ ಬ್ಯಾಂಡ್‌ವಿಡ್ತ್ ಅಗತ್ಯವಿರುವ ಹೈ-ಡೆಫಿನಿಷನ್ ಸ್ಟ್ರೀಮಿಂಗ್ ಉತ್ಸಾಹಿಗಳಿಗೆ ಪೂರೈಸಲು ವಿನ್ಯಾಸಗೊಳಿಸಲಾಗಿದೆ. BSNL Superstar: ಹೈ-ಸ್ಪೀಡ್ ಕನೆಕ್ಟಿವಿಟಿ ಮತ್ತು ಒಟಿಟಿ ಪ್ರಯೋಜನಗಳು: ಈ ಯೋಜನೆಯು ಕೇವಲ ಪ್ರಮಾಣವನ್ನು ನೀಡುವುದಿಲ್ಲ ಇದು 200Mbps ವರೆಗಿನ ವೇಗದೊಂದಿಗೆ ಗುಣಮಟ್ಟವನ್ನು ಖಚಿತಪಡಿಸುತ್ತದೆ . ಈ ಹೈ-ಸ್ಪೀಡ್ ಸಂಪರ್ಕವು ತಡೆರಹಿತ ವೀಡಿಯೊ ಕಾನ್ಫರೆನ್ಸಿಂಗ್, ಆನ್‌ಲೈನ್ ಗೇಮಿಂಗ್ ಮತ್ತು 4K ವೀಡಿಯೊ ಸ್ಟ್ರೀಮಿಂಗ್‌ಗೆ ಸೂಕ್ತವಾಗಿದೆ. ಮೌಲ್ಯ ಪ್ರತಿಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಸೂಪರ್‌ಸ್ಟಾರ್ ಪ್ರೀಮಿಯಂ ಯೋಜನೆಯು ಸೋನಿ LIVE, ಲಯನ್ಸ್‌ಗೇಟ್ ಪ್ಲೇ, EPICON, ಜಿಯೋಸ್ಟಾರ್, ಹಂಗಾಮಾ ಮತ್ತು ಶೆಮರೂಮೀ ನಂತಹ ಹಲವಾರು ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ. ಈ ಯೋಜನೆಯೊಂದಿಗೆ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಸ್ಥಳೀಯ ಮತ್ತು STD ಕರೆಗಳ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಇದು ಇದನ್ನು ಸಮಗ್ರ ಮನರಂಜನಾ ಪ್ಯಾಕೇಜ್ ಆಗಿ ಮಾಡುತ್ತದೆ. ಬಿಎಸ್‌ಎನ್‌ಎಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು ಗ್ರಾಹಕರು ಸೂಪರ್‌ಸ್ಟಾರ್ ಪ್ರೀಮಿಯಂ ವೈ-ಫೈ ಯೋಜನೆಗೆ ಅಪ್‌ಗ್ರೇಡ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ವಿಶೇಷ ರಿಯಾಯಿತಿ ಮತ್ತು ಕೊಡುಗೆಯ ಮಾನ್ಯತೆ: ಈ ಯೋಜನೆಯ ಮೂಲ ಬೆಲೆ ₹999 ಆಗಿದ್ದರೂ BSNL ಪ್ರಸ್ತುತ 20% ರಿಯಾಯಿತಿಯನ್ನು ನೀಡುತ್ತಿದೆ ಇದರಿಂದಾಗಿ ಮಾಸಿಕ ವೆಚ್ಚವು ₹799 ಕ್ಕೆ ಇಳಿಯುತ್ತದೆ. ಈ ರಿಯಾಯಿತಿ ದರವು 12 ತಿಂಗಳ ಮುಂಗಡ ಪಾವತಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆಫರ್ ಅವಧಿಯು 14ನೇ ಜನವರಿ ರಿಂದ 31ನೇ ಮಾರ್ಚ್ 2026 ರವರೆಗೆ ಸೀಮಿತವಾಗಿದೆ. ಆಸಕ್ತ ಗ್ರಾಹಕರು WhatsApp ನಲ್ಲಿ 1800 4444 ಗೆ "HI" ಎಂದು ಕಳುಹಿಸುವ ಮೂಲಕ ಅಥವಾ BSNL ಸೆಲ್ಫ್‌ಕೇರ್ ಅಪ್ಲಿಕೇಶನ್ ಬಳಸುವ ಮೂಲಕ ತಮ್ಮ ಅಸ್ತಿತ್ವದಲ್ಲಿರುವ ಯೋಜನೆಯನ್ನು ಅಪ್‌ಗ್ರೇಡ್ ಮಾಡಬಹುದು. #BREAKING #TECHNOLOGY #DOT #BSNLSUPERSTAR #PREMIUMWIFIPLAN #MOBILEGADGETS
See other profiles for amazing content