ಪ್ರತೀನಿತ್ಯ ಪುಟ್ಟ ಚಾಕಲೇಟ್ ದಾಸೋಹ ನಮ್ಮ ಅಂಗಡಿಯಲ್ಲಿ. ಪುಟಾಣಿ ಕಂದಮ್ಮಗಳು ಯಾರೇ ಇರಲಿ,ಬಡವ,ಬಲ್ಲಿದ,ಶ್ರೀಮಂತರು,ಧರ್ಮ ಎನ್ನದೇ ಯಾವ ಪುಟಾಣಿ ಪಾಪು ಬಂದರೂ ನಮ್ಮ ಸ್ವದೇಶಿ ಕ್ಯಾಂಪ್ಕೋ ದವರ ಐದು ರೂಪಾಯಿಯ ಚಾಕೋಲೇಟ್ ಕಂದಮ್ಮಗಳ ಕೈಯಲ್ಲಿ ರಾರಾಜಿಸಿ ಅವರ ಮುದ್ದು ಮುದ್ದು ನಗುವಿಗೆ ಕಾರಣವಾಗುತ್ತಿದೆ.ಇದು ನನ್ನ ಪತಿದೇವರು ನಡೆಸಿಕೊಂಡು ಬಂದ ಮಕ್ಕಳಿಗಾಗಿ ನಗುವಿನ ಸಂಕಲ್ಪ ಸೇವೆ.
ನಾವು ಬದುಕು ಕಟ್ಟಿ ಕೊಳ್ಳಲು ಬಂದ ಹೊಸತು. ನಮ್ಮ ಕಂದಮ್ಮನಿಗೆ ಒಂದು ರೂಪಾಯಿ ಚಾಕಲೇಟ್ ತಿನ್ನಿಸುವ ಅದೃಷ್ಟ ಇಲ್ಲದ ದುಸ್ಥರ ಪರಿಸ್ಥಿತಿಯ ಸಮಯ. ಹಳ್ಳಿಯಲ್ಲಿ ಇದ್ದಾಗ ಏನೇನು ಬೇಕೋ ಅದನ್ನೆಲ್ಲ ಕೊಡಿಸುವ ತಾಕತ್ತು ಇತ್ತು. ಆದರೆ ಸಿಟಿಗೆ ಬಂದು ಶೂನ್ಯದಿಂದ ಬದುಕು ಕಟ್ಟಿ ಕೊಳ್ಳುವಾಗಿನ ಕಷ್ಟ ಕೋಟಲೆಗಳಲ್ಲಿ ನನ್ನ ಕಂದಮ್ಮನಿಗೆ ನೆರವಾದದ್ಧು
ಪಕ್ಕದಲ್ಲಿ ಇರುವ ತಾತ ಅವರು.
ನಂತರ ಭಗವಂತನ ಅನುಗ್ರಹದಿಂದ ಅಂಗಡಿ ತೆರೆದಾಗ ಈ ನಗುವಿನ ಸಂಕಲ್ಪ ಸೇವೆಗೆ ಚಾಲನೆ ದೊರೆಯಿತು. ಅದೆಷ್ಟೋ ಮಕ್ಕಳ ಮುದ್ದು ನಗುವಿನ ಹೊನಲ ಬೆಳಕಿನಲ್ಲಿ ನಮ್ಮ ಕಷ್ಟ ಮರೆತಿದಿದ್ದೇವೆ.ಬಹುಶಃ ಆ ಮಕ್ಕಳೆಲ್ಲರ ನಿಶ್ಕಲ್ಮಶ ಹಾರೈಕೆಯೇ ಇರಬೇಕು. ತುಸು ನೆಮ್ಮದಿಯ ಬದುಕು ದೊರಕಿದ್ದು.
ಬೆಳಗಿನಿಂದ ಸಂಜೆವರೆಗೂ ಬರುವ ಗ್ರಾಹಕರ ಪುಟಾಣಿ ಮಕ್ಕಳು ನಮ್ಮ ಮುದ್ದು ನಗುವಿನ ದೇವರುಗಳು. ಚಾಕಲೇಟ್ ತೆಗೆದುಕೊಂಡು ರೂಢಿ ಆದ ಮಕ್ಕಳು ಬಂದ ಕೂಡಲೇ ನನ್ನ ಯಜಮಾನರನ್ನು ಅದೆಷ್ಟು ಚಂದವಾಗಿ ಹುಡುಕುತ್ತವೆ😀ಅವರದೇ ತೊದಲು ನುಡಿಗಳಲ್ಲಿ ನಮ್ಮವರನ್ನು ಮಾತನಾಡಿಸುತ್ತವೆ😀.ಕಣ್ಣು, ಕೈ,ಕಾಲೆಲ್ಲ ಮಾತನಾಡುತ್ತವೆ
😀.ಇವರೇನಾದರೂ ಕೆಲಸದ ಒತ್ತಡದಲ್ಲಿ ಗಮನಿಸದೆ ಹೋದರೂ ಕೂಡ ಅವರನ್ನು ತಮ್ಮ ನಗುವಿನ ಮೂಲಕ ,ತಮ್ಮ ಕಡೆಗೆ ಸೆಳೆದು ಚಾಕಲೇಟ್ ಇಸಿದುಕೊಂಡು ನಗುತ್ತವೆ😀.
ಹೋಗುವಾಗ ಬಾಯ್ ಮಾಡುವುದು, ಪ್ಲೇನ್ ಕಿಸ್ ರವಾನಿಸುವುದು ಆಹಾ😀ಆ ಹಿತಕರವಾದ ಅನುಭವ ವರ್ಣನೆ ಮಾಡಲು ಅಸಾಧ್ಯ. ನೋಡಿಯೇ ಕಣ್ತುಂಬಿಕೊಳ್ಳಬೇಕು😀.
ಇಷ್ಟೇ ಅಲ್ಲ. ಮೊದಲು ಪುಟಾಣಿ ಇದ್ದವರು ಈಗ ಕಾಲೇಜು ಓದುವ ಹಂತಕ್ಕೆ ಬಂದ ಮಕ್ಕಳು ಇದ್ದಾರಲ್ಲ,ಅವರೂ ಕೂಡ ಅಂದಿನ ತಮ್ಮ ಬಾಲ್ಯದಲ್ಲಿ ಚಾಕಲೇಟ್ ಇಸಿದುಕೊಂಡು ತಿಂದ ಖುಷಿ ಸಂಭ್ರಮವನ್ನು ಖುಷಿಯಿಂದ ನೆನಪಿಸುತ್ತಾರೆ..ಅವರಿಗೆ ಈಗಲೂ ನಮ್ಮವರು ಚಾಕಲೇಟ್ ಕೊಡಲೇಬೇಕು😀.ಅಂಕಲ್ ಚಾಕಲೇಟ್ ಕೊಟ್ಟರೆ ಅದೇನೋ ಖುಷಿ ಎನ್ನುವ ಮುದ್ದು ಮಕ್ಕಳಿಗೆ ಇಲ್ಲಿ ಯಾವುದೋ ಬ್ರಾಂಡ್ ನದೇ ಚಾಕಲೇಟ್ ನ ಹಂಗಿಲ್ಲ.ಚಾಕಲೇಟ್ ನೀಡುವ ನಮ್ಮವರ ಮುದ್ದು ಮನದ ಪ್ರೀತಿಯೇ ಮುಖ್ಯ.❤️😀.
ಇವೆಲ್ಲವೂ ಮತ್ತೆ ಹೃದಯ ತಂಪಾಗಿಸಿದ್ದು ಕಾಲೇಜು ಓದುವ ಮಗು ತಾನು ಚಿಕ್ಕಂದಿನಲ್ಲಿ ಪ್ರತೀ ದಿನ ಚಾಕಲೇಟ್ ತಿಂದು ಹೋಗುವ ಬಗ್ಗೆ, ಈಗಲೂ ಬಂದಾಗ ತನಗೆ ಚಾಕಲೇಟ್ ಸಿಗುತ್ತದೆ ಎಂದು ಖುಷಿಯಿಂದ ತನ್ನ ಸ್ನೇಹಿತರಲ್ಲಿ ಹೇಳಿಕೊಂಡಾಗ ಮಕ್ಕಳ ಮುದ್ದು ಮನದ ಖುಷಿ ನನಗೆ ಸಾರ್ಥೈಕ್ಯ ಭಾವ ನೀಡಿತ್ತು. ನಾವು ಏನು ಕೊಡ್ತೀವಿ,ಎಷ್ಟು ಕೊಡ್ತೀವಿ ಎನ್ನುವುದು ಮುಖ್ಯ ಅಲ್ಲ. ಬದಲಿಗೆ ಅದೆಷ್ಟು ಸಂಪೂರ್ಣ ಪ್ರೀತಿಯಿಂದ ನಿಶ್ಕಲ್ಮಶ ಮನಸಿಂದ ಕೊಡ್ತೀವಿ ಎನ್ನುವುದೊಂದೇ ಮುಖ್ಯ. ಮಕ್ಕಳ ನಗುವಿನ ಮಂದಹಾಸದ ಪ್ರಪಂಚ ತೀರಾ ಪರಿಶುದ್ಧ. ಆ ಪರಿಶುದ್ಧವಾದ ನಗುವಿನ ಪ್ರಪಂಚದಲ್ಲಿ ನಮ್ಮ ನೆನಪಿರುತ್ತದೆ ಎನ್ನುವುದೇ ಅತ್ಯಮೂಲ್ಯ .
✍️ಶೋಭಾ ನಾರಾಯಣ ಹೆಗಡೆ.
#kannada #kannadamotivation #kannadamotivationalwords #childhood
#📚ನೀತಿ ಕಥೆಗಳು #🖊ಬದುಕಿನ ಕೋಟ್ಸ್📜 #📝ನನ್ನ ಕವಿತೆಗಳು #💓ಮನದಾಳದ ಮಾತು #🖋️ ನನ್ನ ಬರಹ