ಫಾಲೋ
shrishail
@30753517
209
ಪೋಸ್ಟ್ಸ್
216
ಫಾಲೋವರ್ಸ್
shrishail
686 ವೀಕ್ಷಿಸಿದ್ದಾರೆ
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಹೆಣ್ಣು ಮಕ್ಕಳ ಆರೋಗ್ಯ, ಪೋಷಣೆ, ಶಿಕ್ಷಣ ಹಾಗೂ ಸುರಕ್ಷತೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ. #👧ರಾಷ್ಟ್ರೀಯ ಹೆಣ್ಣುಮಕ್ಕಳ ದಿನ 😍 #ರಾಷ್ಟ್ರೀಯ ಹೆಣ್ಣುಮಕ್ಕಳ ದಿನ #🤵‍♀️ರಾಷ್ಟ್ರೀಯ ಹೆಣ್ಣುಮಕ್ಕಳ ದಿನ #👩ಅಂತರ್ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ದಿನ
shrishail
1.4K ವೀಕ್ಷಿಸಿದ್ದಾರೆ
ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಶುಭಾಶಯಗಳು ಕಾಯಕಯೋಗಿ ಬಸವಣ್ಣನವರ ಅನುಯಾಯಿ, ನಾಡಿನ ಶ್ರೇಷ್ಠ ತತ್ವಜ್ಞಾನಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಮಾಜ ಸುಧಾರಕ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ವಾಸ್ತವ ಪರವಾದ ಚಿಂತನೆ, ಆಧ್ಯಾತ್ಮಿಕ, ವಿಡಂಬನೆ, ಸೃಷ್ಟಿಯ ಕ್ರಮ ಈ ಎಲ್ಲ ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದು. #jai ambigara chidaya #jai ambigara chidaya #ambigara
shrishail
509 ವೀಕ್ಷಿಸಿದ್ದಾರೆ
ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸಬೆಳಕನ್ನು ತರಲಿ,ಎಲ್ಲೆಡೆ ಸುಖ,ಸಂತೋಷ,ನೆಮ್ಮದಿ ಹಾಗೂ ಸುಭಿಕ್ಷತೆ ನೆಲೆಸಲಿ ಎಂದು ಹಾರೈಸುತ್ತೇವೆ. #ಹೊಸ ವರ್ಷದ ಶುಭಾಶಯಗಳು #ಹೊಸ
shrishail
863 ವೀಕ್ಷಿಸಿದ್ದಾರೆ
ಮಹಿಳಾ ಶಿಕ್ಷಣ, ರೈತ ಕಲ್ಯಾಣ ಮತ್ತು ಅಸ್ಪೃಶ್ಯತೆಯ ವಿರುದ್ಧ ದಣಿವರಿಯದೆ ದುಡಿದ ಧೀಮಂತ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ನಮ್ಮ ಅಗಣಿತ ನಮನಗಳು. #ಜ್ಯೋತಿಭಾ ಫುಲೆ ಅವರ ಪುಣ್ಯಸ್ಮರಣೆ
shrishail
758 ವೀಕ್ಷಿಸಿದ್ದಾರೆ
ದೃಢ ಸಂಕಲ್ಪ, ಅಚಲ ಧೈರ್ಯ ಮತ್ತು ನಿರ್ಣಾಯಕ ನಾಯಕತ್ವದ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವದ ನಮನಗಳು. ದಿಟ್ಟ ಹಾಗೂ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ದೇಶದ ಭದ್ರತೆ ಮತ್ತು ಪ್ರಗತಿಗೆ ದೃಢ ಬುನಾದಿ ಹಾಕುವುದರ ಜೊತೆಗೆ, ರೈತರು–ಶೋಷಿತರು–ಬಡಜನರ ಬಗ್ಗೆ ತೋರಿದ ಕಾಳಜಿ, ಅವರ ಬದುಕಿನ ಸುಧಾರಣೆಗೆ ಕೈಗೊಂಡ ಧೈರ್ಯಶಾಲಿ ಕ್ರಮಗಳು ದೇಶಕ್ಕೆ ನೂತನ ದಿಕ್ಕನ್ನು ನೀಡಿದವು. ಪೋಕ್ರಾನ್ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಭಾರತವನ್ನು ಅಣ್ವಸ್ತ್ರ ಸಾಮರ್ಥ್ಯವುಳ್ಳ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ ಅವರ ಕೊಡುಗೆ ಅಪ್ರತಿಮ. ದೇಶದ ಸಮಗ್ರ ಅಭಿವೃದ್ಧಿಗೆ ಇಂದಿರಾ ಗಾಂಧಿಜಿಯವರ ಸೇವೆ ಎಂದಿಗೂ ಸ್ಮರಣೀಯ. #ಇಂದಿರಾ ಗಾಂಧಿ ಜನ್ಮದಿನ
See other profiles for amazing content