ಫಾಲೋ
ಅನಿಲ್ ಮಲ್ನಾಡ್
@64197565
3,514
ಪೋಸ್ಟ್ಸ್
3,802
ಫಾಲೋವರ್ಸ್
ಅನಿಲ್ ಮಲ್ನಾಡ್
1.1K ವೀಕ್ಷಿಸಿದ್ದಾರೆ
17 ಗಂಟೆಗಳ ಹಿಂದೆ
#🤗ರಾಷ್ಟ್ರೀಯ ಅಪ್ಪುಗೆಯ ದಿನ🫂 ರಾಷ್ಟ್ರೀಯ ಅಪ್ಪುಗೆಯ ದಿನವು ಅಪ್ಪುಗೆಗೆ ಮೀಸಲಾದವಾರ್ಷಿಕಕಾರ್ಯಕ್ರಮವಾಗಿದೆ ಇದನ್ನು ಕೆವಿನ್ ಝಬೋರ್ನಿ ರಚಿಸಿದ್ದಾರೆ ಮತ್ತು ವಾರ್ಷಿಕವಾಗಿ ಜನವರಿ 21 ರಂದು ಸಂಭವಿಸಿದೆ. ಈ ದಿನವನ್ನು ಜನವರಿ 21, 1986 ರಂದು ಅಮೇರಿಕಾ ಮಿಚಿಗನ್ ಕ್ಲಿಯೊದಲ್ಲಿ ಆಚರಿಸಲಾಯಿತು. ರಜಾದಿನವನ್ನು ಅನೇಕ ಇತರ ದೇಶಗಳಲ್ಲಿ ಸಹ ಆಚರಿಸುವುದಿಲ್ಲ.ರಾಷ್ಟ್ರೀಯ ಅಪ್ಪುಗೆಯ ದಿನದ ಕಲ್ಪನೆಯು ಪ್ರತಿಯೊಬ್ಬರ ಕುಟುಂಬ ಮತ್ತು ಸ್ನೇಹಿತರನ್ನು ಹೆಚ್ಚಾಗಿ ತಬ್ಬಿಕೊಳ್ಳುವಂತೆ ಪ್ರೋತ್ಸಾಹಿಸುವುದು.ಇತರರ ವೈಯಕ್ತಿಕ ಜಾಗವನ್ನು ಗೌರವಿಸುವುದು ಯಾವಾಗಲೂ ಮುಖ್ಯ ಮತ್ತು ಕೆಲವು ಜನರು ಅಪ್ಪುಗೆಯವರಲ್ಲದ ಕಾರಣ ಪ್ರತಿಕ್ರಿಯೆಯ ಬಗ್ಗೆ ಖಚಿತವಾಗಿಲ್ಲದಿದ್ದರೆ ಮೊದಲು ಕೇಳಲು ಝಬೋರ್ನಿ ಎಚ್ಚರಿಕೆ ನೀಡಿದ್ದಾರೆ.1986 ರಲ್ಲಿ ರಾಷ್ಟ್ರೀಯ ಅಪ್ಪುಗೆಯ ದಿನದ ಕಲ್ಪನೆಗೆ ಬಂದ ಕೀರ್ತಿ ಕೆವಿನ್ ಝಬೋರ್ನಿ ಅವರಿಗೆ ಸಲ್ಲುತ್ತದೆ. ಇದನ್ನುಚೇಸ್‌ನ ಕ್ಯಾಲೆಂಡರ್ ಆಫ್ ಈವೆಂಟ್ಸ್‌ನಲ್ಲಿಸೇರಿಸಲಾಗಿದೆ ಆ ಸಮಯದಲ್ಲಿ ಜಾಬೋರ್ನಿಯ ಸ್ನೇಹಿತ ಪ್ರಕಾಶನದ ಮೊಮ್ಮಗಳು. ಕ್ರಿಸ್ಮಾಸ್, ಹೊಸ ವರ್ಷದ ರಜಾದಿನಗಳು, ಪ್ರೇಮಿಗಳ ದಿನ ಮತ್ತು ಜನ್ಮದಿನಗಳ ನಡುವೆ ಜನರು ಸಾಮಾನ್ಯವಾಗಿ ಕಡಿಮೆ ಉತ್ಸಾಹದಲ್ಲಿದ್ದಾರೆ ಎಂದು ಅವರು ಕಂಡುಕೊಂಡಾಗ ಅವರು ಜನವರಿ 21 ರಂದು ಆಯ್ಕೆ ಮಾಡಿದರು ಅಮೆರಿಕನ್ ಸಮಾಜವು ಸಾರ್ವಜನಿಕವಾಗಿ ಭಾವನೆಗಳನ್ನು ತೋರಿಸಲು ಮುಜುಗರಕ್ಕೊಳಗಾಗುತ್ತದೆ" ಎಂದು ಜಬೋರ್ನಿ ಪರಿಗಣಿಸಿದರು ಮತ್ತು ರಾಷ್ಟ್ರೀಯ ಅಪ್ಪುಗೆಯ ದಿನವು ಅದನ್ನು ಬದಲಾಯಿಸುತ್ತದೆ ಎಂದು ಆಶಿಸಿದರು ಅವರು ತಮ್ಮ ಕಲ್ಪನೆಯು ವಿಫಲವಾಗಿದೆ ಎಂದು ಅವರು ಭಾವಿಸಿದ್ದರು. ಸಾಮಾನ್ಯವಾಗಿ ತಂದೆ ತಾಯಿ ಸ್ನೇಹಿತರು ಬಹಳ ದಿನಗಳ ನಂತರ ಭೇಟಿಯಾದಾಗ ಈ ಅಪ್ಪುಗೆಯಿಂದ ಮನಸ್ಸಿಗೆ ಸಂತೋಷ ಕೊಡುವ ಒಂದು ಕ್ಷಣ ಎಂದು ಈಗಿನ ಸಂಸ್ಕೃತಿ ಹೇಳುತ್ತದೆ ಆದರೆ ಎಲ್ಲರೂ ಇದನ್ನು ಒಪ್ಪುವುದಿಲ್ಲ ಕೆಲವರು ಮಾತ್ರ ಇದನ್ನು ಒಪ್ಪುತ್ತಾರೆ ಎನ್ನುವ ಒಂದು ಭಾವನೆ ನನ್ನದು ಆದರೂ ಇಂದು ಅಪ್ಪುಗೆಯ ದಿನ ಎಂದು ರಾಷ್ಟ್ರೀಯ ಕರಣದಲ್ಲಿ ಸೇರಿಸಿದೆ ಆಚರಿಸಲೇಬೇಕೆಂದಿಲ್ಲ ಬಹಳಷ್ಟು ರಾಷ್ಟ್ರಗಳು ಆಚರಿಸುವುದಿಲ್ಲ ಇಂಥ ಇಂತಹ ಒಂದು ದಿನವೂ ಇದೆ ಎಂದು ನಿಮಗೊಂದು ಮಾಹಿತಿ ತಿಳಿಸುತ್ತಾ ರಾಷ್ಟ್ರೀಯ ಅಪ್ಪುಗೆಯ ದಿನದಂದು ನನ್ನ ಪ್ರೀತಿಯ ಸ್ನೇಹಿತರೆ ಎಲ್ಲರಿಗೂ ಈ ವಿಷಯವನ್ನು ತಿಳಿಸುತ್ತಾ ರಾಷ್ಟ್ರೀಯ ಅಪ್ಪುಗೆಯ ದಿನದ ಶುಭಾಶಯಗಳು ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
825 ವೀಕ್ಷಿಸಿದ್ದಾರೆ
17 ಗಂಟೆಗಳ ಹಿಂದೆ
#💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 ನುಡಿದಂತೆ ನಡೆದು ನಡೆದಂತೆ ನುಡಿದ ಧೀರ ಶರಣರು, ವಚನಕಾರರಲ್ಲಿ ಒಬ್ಬರಾದ ಮಹಾನ್ ಕ್ರಾಂತಿಕಾರೀ, ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯ, ಸವೋದಯದ ತುಡಿತ ಹಾಗು ಶೋಷಣಾಮುಕ್ತ ಸಮಸಮಾಜ ಕಟ್ಟುವ ಮೂಲಕ ವಚನಗಳನ್ನು ನೀಡಿರುವ ಇವರು ಅವಿಸ್ಮರಣೀಯ. ಈ ದಿನ ನಾವೆಲ್ಲರೂ ಶ್ರೀ ಅಂಬಿಗ ಚೌಡಯ್ಯರನ್ನು ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
6.2K ವೀಕ್ಷಿಸಿದ್ದಾರೆ
17 ಗಂಟೆಗಳ ಹಿಂದೆ
#💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 ಅನ್ನದಾಸೋಹಿ, ಶಿಕ್ಷಣ ಸಂತ, ಸಮಾಜ ಸುಧಾರಕರು, ಕಾಯಕ ಯೋಗಿ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ ಒದಗಿಸಿ ತ್ರಿವಿಧ ದಾಸೋಹದ ಮೂಲಕ ಜನಮಾನಸದಲ್ಲಿ ಪೂಜನೀಯ ಸ್ಥಾನಪಡೆದಿರುವ ಅವರ ಆದರ್ಶ ವ್ಯಕ್ತಿತ್ವ ಅಸಂಖ್ಯಾತ ಭಕ್ತರಿಗೆ ದಾರಿ ದೀಪವಾಗಿದೆ.ಇವರ ಸೇವೆಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
534 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#💐 ಸೋಮವಾರದ ಶುಭಾಶಯಗಳು ವಿಪತ್ತಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವೀರರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು " ವಿಪತ್ತು ನಿರ್ವಹಣಾ ಕಾಯ್ದೆ 2005" ರ ಕಾನೂನಿನಡಿಯಲ್ಲಿ ರೂಪುಗೊಂಡಿದ್ದು, ತುರ್ತು ಅಥವಾ ವಿಪತ್ತಿನ ಸಮಯದಲ್ಲಿ ಪರಿಣತಿ ಮತ್ತು ಬದ್ಧತೆಯೊಂದಿಗೆ ಪೀಡಿತ ಮತ್ತು ಸಾವುನೋವುಗಳ ಯೋಗಕ್ಷೇಮಕ್ಕಾಗಿ ಕೆಲಸ ಮಾಡುತ್ತದೆ ಸೆಕ್ಷನ್ 44-45 ಭಾರತದಲ್ಲಿ ವಿಪತ್ತು ನಿರ್ವಹಣೆಯ ಉನ್ನತ ಸಂಸ್ಥೆ ಎನ್‌ಡಿಎಂಎ ಅಂದರೆ ಪ್ರಧಾನಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ.ಭಾರತದ ಸಂಯುಕ್ತ ರಚನೆಯಲ್ಲಿ ವಿಪತ್ತು ನಿರ್ವಹಣೆ ರಾಜ್ಯ ಸರ್ಕಾರಗಳ ಹೆಗಲ ಮೇಲಿದೆ. ಕೇಂದ್ರದಲ್ಲಿ, ಗೃಹ ಸಚಿವಾಲಯ, ಭಾರತ ಸರ್ಕಾರವು ಎಲ್ಲಾ ರಾಜ್ಯ ಘಟಕಗಳೊಂದಿಗೆ ಸಮನ್ವಯಗೊಳಿಸುತ್ತದೆ. ಅತ್ಯಂತ ಗಂಭೀರ ವಿಪತ್ತುಗಳಲ್ಲಿ, ಮಿಲಿಟರಿ ಪಡೆ, ಎನ್‌ಡಿಆರ್‌ಎಫ್, ವೈಜ್ಞಾನಿಕ ಉಪಕರಣಗಳು, ಆರ್ಥಿಕ ಸಹಾಯ, ಕೇಂದ್ರ ಅರೆಸೈನಿಕ ಪಡೆ ಮತ್ತು ಇತರ ಎಲ್ಲ ಪ್ರಕಾರಗಳು ಸೇರಿದಂತೆ ಪೀಡಿತ ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯಕ್ಕೆ ಅಪಾರ ಪ್ರಮಾಣದ ಸಹಾಯವನ್ನು ಕಳುಹಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಮಹಾರಾಷ್ಟ್ರದ ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರದ (ಎನ್‌ಇಒಸಿ) ಕಾರ್ಯವು ಗಡಿಯಾರದ ಸುತ್ತ ಕೆಲಸ ಮಾಡುವಾಗ ವಿಪತ್ತಿನಂತಹ ಸಂದರ್ಭಗಳನ್ನು ಗ್ರಹಿಸುವುದು. ಕೇಂದ್ರ ಪರಿಸರ ಸಂಸ್ಥೆಗಳಾದ ಹವಾಮಾನ ಇಲಾಖೆ ಕೇಂದ್ರ ಜಲ ಆಯೋಗ ಪರ್ವತಗಳು ಮತ್ತು ಅವಲಾಂಚೆ ಸಂಶೋಧನಾ ಸಂಸ್ಥೆ ಮತ್ತು ಇತರ ಹಲವು ಹವಾಮಾನ ವೈಜ್ಞಾನಿಕ ಮಾಹಿತಿ ಮತ್ತು ದತ್ತಾಂಶಗಳನ್ನು ಸಂಗ್ರಹಿಸುವುದು ಮತ್ತು ಅವುಗಳ ಬಗ್ಗೆ ಸಂಶೋಧನೆ ನಡೆಸಿ ಕಾರ್ಯಸಾಧ್ಯವಾದ ಮಾಹಿತಿಯನ್ನು ನೀಡುವುದು ಇದರ ಕೆಲಸ. ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಆಯಾ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಲಾಗುತ್ತದೆ. ಮಳೆಗಾಲದ ತಿಂಗಳುಗಳಲ್ಲಿ, ಇಂತಹ ಮಾಹಿತಿಯನ್ನು ಪ್ರತಿದಿನ ರಾಜ್ಯಗಳು ಮತ್ತು ಕೇಂದ್ರ ಘಟಕಗಳಿಗೆ ನೀಡಬೇಕಾಗುತ್ತದೆ. ಅವರು ಸಂಗ್ರಹಿಸಿದ ಮಾಹಿತಿಯನ್ನು ಎನ್‌ಇಒಸಿ ತನ್ನ ವೆಬ್‌ಸೈಟ್‌ನಲ್ಲಿ ಸಾಮಾನ್ಯ ಜನರಿಗೆ ಒದಗಿಸುತ್ತದೆ.ಎನ್‌ಡಿಆರ್‌ಎಫ್ ಪಡೆಯು ಎನ್‌ಡಿಎಂಎ ಅಥವಾ ರಾಷ್ಟ್ರೀಯ ವಿಪತ್ತು ನಿರ್ವಹಣಾಪ್ರಾಧಿಕಾರದ.ಅಡಿಯಲ್ಲಿಕಾರ್ಯನಿರ್ವಹಿಸುತ್ತದೆಎನ್‌ಡಿಆರ್‌ಎಫ್‌ನ ಉನ್ನತ ಅಧಿಕಾರಿಯನ್ನು ಡೈರೆಕ್ಟರ್ ಜನರಲ್ ಎಂದು ಕರೆಯಲಾಗುತ್ತದೆ. ಎನ್‌ಡಿಆರ್‌ಎಫ್ ಮಹಾನಿರ್ದೇಶಕರು ಭಾರತೀಯ ಪೊಲೀಸ್ ಪಡೆಗಳಿಂದ ಆಯ್ಕೆಯಾದ ಐಪಿಎಸ್ ಅಧಿಕಾರಿಗಳು. ಡೈರೆಕ್ಟರ್ ಜನರಲ್ ಸೈನ್ಯದ ತ್ರೀ-ಸ್ಟಾರ್ ಜನರಲ್ನಂತೆ ಉಡುಪುಗಳು ಮತ್ತು ಉಡುಪುಗಳು.ಎನ್ಡಿಆರ್ಎಫ್ ಹಲವಾರು ಇನ್ಸ್ಪೆಕ್ಟರ್ ಜನರಲ್ಗಳು ಮತ್ತು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ಗಳನ್ನು ಒಳಗೊಂಡಿರುವ ಡಿಜಿಮತ್ತುಮಿಲಿಟರಿಅಧಿಕಾರಿಗಳಂತೆಯೇ ವೇಷಭೂಷಣಗಳನ್ನು ಮತ್ತು ಶೀರ್ಷಿಕೆಗಳನ್ನು ಧರಿಸುವ ಡಿಜಿಗಳನ್ನು ಒಳಗೊಂಡಿದೆ.ಎನ್‌ಡಿಆರ್‌ಎಫ್ ಬೆಟಾಲಿಯನ್‌ಗಳನ್ನು ದೇಶಾದ್ಯಂತ 4 ವಿವಿಧ ಸ್ಥಳಗಳಲ್ಲಿ ಇರಿಸಲಾಗಿದೆ. ವಿಪತ್ತು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ಹತ್ತಿರ ಇಡಲಾಗುತ್ತದೆ ಇದರಿಂದ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡಬಹುದು. ಈ ಪಡೆಗಳನ್ನು ಪೀಡಿತ ಪ್ರದೇಶಗಳಿಗೆ ರಾಜ್ಯ ಅಧಿಕಾರಿಗಳ ಅನುಮೋದನೆಯೊಂದಿಗೆ ಕಳುಹಿಸಲಾಗುವುದು. ಎನ್‌ಡಿಆರ್‌ಎಫ್ ದೇಶಕ್ಕೆ ಸೇವೆ ವ್ಯಾಪಾರ ಇಂತಹ ಒಂದು ಸೇವೆ ಸಲ್ಲಿಸುವ ಎನ್ ಡಿ ಆರ್ ಎಫ್ ಎಲ್ಲಾ ಸಿಬ್ಬಂದಿಗಳಿಗೂ ನಾವು ಕೃತಜ್ಞತೆ ಸಲ್ಲಿಸಲೇಬೇಕು ನಮಗೆ ಸಂಕಷ್ಟ ಬಂದಾಗ ತಕ್ಷಣ ಸ್ಪಂದಿಸುವ ಎನ್ ಡಿ ಆರ್ ಎಫ್ ಸಂಸ್ಥೆಯನ್ನು ನೆನೆಸಿಕೊಳ್ಳಲೇಬೇಕು ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿ ವರ್ಗಕ್ಕೂ ನನ್ನ ಸಾಷ್ಟಾಂಗ ನಮಸ್ಕಾರಗಳು ತಿಳಿಸುತ್ತಾ ವಿಪತ್ತಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವೀರರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. ತಿಳಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
1.7K ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#🌸🙏ಕೆಎಸ್ ಅಶ್ವಥ್ ಅವರ ಪುಣ್ಯತಿಥಿ🙏🌸 ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ ಅವರು ಮೈಸೂರಿನಲ್ಲಿ ಜನಿಸಿದರು.. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ ಪೋಷಕ ನಟನಾಗಿ. ನೂರಾರು ಚಿತ್ರಗಳಲ್ಲಿ ಅಧ್ಭುತವಾಗಿ ನಟಿಸಿರುವ ಈ ಹಿರಿಯ ನಟರ ಸಾಧನೆಯನ್ನು ಅವರ ಪುಣ್ಯಸ್ಮರಣೆಯ ಅಂಗವಾಗಿ ಸ್ಮರಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
725 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#👑ಶ್ರೀ ಕೃಷ್ಣದೇವರಾಯರ ಜಯಂತಿ🔥 ವಿಶ್ವ ಧರ್ಮ ದಿನ ಎಲ್ಲಾ ಧರ್ಮದ ಪುಸ್ತಕ ಹೇಳುವುದೊಂದೇ ಮಾನವನಾಗು ಮೊದಲು ಮಾನವನಾಗು ಮಾನವನಾಗಿ ವಿಶ್ವ ಮಾನವನಾಗು ಧರ್ಮ ಶಬ್ದವನ್ನು ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಲಾಗುತ್ತದೆ. ಧರ್ಮದ ಕಲ್ಪನೆಯು ಲೋಕದ ಕಲ್ಯಾಣಕ್ಕಾಗಿ, ಸರ್ವಜನರ ಹಿತಕ್ಕಾಗಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ವಿವಿಧ ಮತ ಪ್ರಚಾರಕರು ಬೇರೆ ಬೇರೆ ರೀತಿಗಳಲ್ಲಿ ಹೇಳಿದ್ದಾರೆ. ಅವರು ಸೂಚಿಸಿರುವ ವಿಧಾನಗಳು ಭಿನ್ನ ಭಿನ್ನ ವಾಗಿ ಕಂಡು ಬಂದರೂ ಅವರೆಲ್ಲರ ಗುರಿ ಒಂದೇ ಧಾರ್ಮಿಕ ಜೀವನದ ಅವಶ್ಯಕತೆ ಏನೆಂದು ಸಾರುವುದು.ಪ್ರಪಂಚದಲ್ಲಿರುವ ನೂರಾರು ರಾಷ್ಟ್ರಗಳಲ್ಲಿ ಸಾವಿರಾರು ಸಂಸ್ಕೃತಿಗಳಿವೆ ಮತ್ತು ಲೆಕ್ಕವಿಲ್ಲದಷ್ಟು ಧರ್ಮಗಳೂ ಇವೆ. ಅವುಗಳಲ್ಲಿ ಹಿಂದೂ, ಕ್ರಿಶ್ಚಿಯನ್‌, ಮುಸ್ಲಿಂ, ಬೌದ್ಧ, ಯಹೂದಿ, ಜೈನ್‌, ಶಿಂಟೊ ಪ್ರಮುಖ ಧರ್ಮಗಳಾಗಿವೆ. ವಿಶ್ವದಲ್ಲಿಯ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದು ಎಲ್ಲ ಧರ್ಮಗಳ ಹೆಗ್ಗುರಿಯಾಗಿದೆ. ನಮ್ಮ ಜಗತ್ತಿನಲ್ಲಿರುವ ಸಾವಿರಾರು ಧರ್ಮದ ಕುರಿತು ಮಾಹಿತಿ ನೀಡುವುದು ಮತ್ತು ಅದು ಸಾರುವ ಸಂದೇಶಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಪ್ರಮುಖ ಉದ್ದೇಶಕ್ಕಾಗಿ ಪ್ರತಿ ವರ್ಷ ಜನವರಿ 17ರಂದು ವಿಶ್ವದಾದ್ಯಂತ ವಿಶ್ವ ಧರ್ಮ ದಿನವನ್ನು ಆಚರಿಸಲಾಗುತ್ತದೆ.ವಿಶ್ವ ಧರ್ಮ ದಿನವನ್ನು ಮೊದಲಿಗೆ ಪೋರ್ಟ್‌ಲ್ಯಾಂಡ್‌ನಲ್ಲಿ ವರ್ಲ್ಡ್‌ ಪೀಸ್‌ ಥ್ರೂ ವರ್ಲ್ಡ್‌ ರಿಲೀಜನ್‌ ಎಂಬ ಶೀರ್ಷಿಕೆಯಲ್ಲಿ ಆಚರಿಸಲಾಯಿತು. 1947ರ ಜನವರಿ 17ರಂದು ಫಿರೂಜ್‌ ಕಜೆಮ್ಜದೆ ಎಂಬವರು ವಿಶ್ವಧರ್ಮದ ಕುರಿತು ಉಪನ್ಯಾಸವೊಂದನ್ನು ನೀಡಿದರು. ಹಾಗಾಗಿ ಪ್ರತಿವರ್ಷ ಜನವರಿ 17ರಂದು ವಿಶ್ವ ಧರ್ಮ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ ವಿವಿಧೆಡೆ ಖ್ಯಾತ ಲೇಖಕರು, ಶೈಕ್ಷ ಣಿಕ ತಜ್ಞರು, ತತ್ವಜ್ಞಾನಿಗಳು ವಿಶ್ವಧರ್ಮದ ಮಹತ್ವದ ಕುರಿತು ಭಾಷಣ ಮಾಡುತ್ತಾರೆ. ಸ್ನೇಹಿತರೆ ಮೊದಲು ಮಾನವರಾಗೋಣ ಮಾನವಕುಲಕ್ಕೆ ಒಳಿತಾಗುವಂತೆ ಜೀವನ ಸಾಧಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
581 ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
#🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ ಜನವರಿ 15ರಂದು ಭಾರತದಲ್ಲಿ ಸೇನಾದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 15, 1949 ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪನವರು, ಭಾರತಿಯ ಸೈನ್ಯದ ಪ್ರಥಮ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಅದರ ಅಂಗವಾಗಿ ಪ್ರತಿವರ್ಷ ಭಾರತೀಯ ಸೇನೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ದೆಹಲಿಯಲ್ಲಿ ಸೇನಾ ಪರೇಡ್ ಮತ್ತು ಶೋ ಅನ್ನು ಪ್ರದರ್ಶಿಸಲಾಗುತ್ತದೆ. ನಾವೆಲ್ಲರೂ ನಮ್ಮ ದೇಶದ ಹಿತರಕ್ಷಕರಾದ ಸೈನಿಕರಿಗೆ ಭಾರತೀಯ ಸೇನಾ ದಿನದ ಅಂಗವಾಗಿ ಶುಭಾಶಯವನ್ನು ಕೋರೋಣ. ಜೈ ಜವಾನ್ ಜೈ ಕಿಸಾನ್ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
611 ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
#🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ ನಾಡಿನ ಸಮಸ್ತ ಜನತೆಗೆ ಮತ್ತು ನನ್ನೆಲ್ಲ ಪ್ರೀತಿಯ ಸ್ನೇಹಿತರಿಗೆ ಈ ಸಂಕ್ರಾಂತಿ ಹಬ್ಬವು ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ ಶಾಂತಿಯನ್ನು ಕರುಣಿಸಲಿ. ಈ ಸಂಕ್ರಾಂತಿ ನಿಮ್ಮ ಜೀವನದಲ್ಲಿ ಹೊಸ ಬೆಳಕನ್ನು ತುಂಬಲಿ ಹಾಗು ನಿಮ್ಮ ಬಾಳು ಸಮೃದ್ಧಿಸಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ತಿಳಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
See other profiles for amazing content