ಫಾಲೋ
💕ನಮ್ಮ ಜಿಲ್ಲೆ ವಿಜಯಪುರ💕💕
@chandann143
50
ಪೋಸ್ಟ್ಸ್
138
ಫಾಲೋವರ್ಸ್
💕ನಮ್ಮ ಜಿಲ್ಲೆ ವಿಜಯಪುರ💕💕
732 ವೀಕ್ಷಿಸಿದ್ದಾರೆ
ಮಕ್ಕಳಿಗೆ ಅಪ್ಪ ಅರ್ಥವಾಗಿಬಿಟ್ಟರೆ ಅಪ್ಪನ ಜನ್ಮ ಸಾರ್ಥಕ..! ಅಪ್ಪ ಅಷ್ಟು ಸುಲಭವಾಗಿ ಮಕ್ಕಳಿಗಾಗಲಿ, ಮಡದಿಗಾಗಲಿ, ಅರ್ಥವಾಗುವುದೇ ಇಲ್ಲ. ಅಪ್ಪನ ಅಂತರಾಳ ಅರ್ಧಾಂಗಿ ಎನಿಸಿಕೊಂಡು ಸದಾ ಅಪ್ಪನ ಮಗ್ಗುಲಲ್ಲೇ ಇರುವ ಅಮ್ಮನಿಗೂ ಸಹ ಅರ್ಥವಾಗುವುದಿಲ್ಲ. ಮೇಲಾಗಿ ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಅಮ್ಮ ಬಿಡುವುದೇ ಇಲ್ಲ. ನಿಮ್ಮಪ್ಪ ಯಾವಾಗಲೂ ಹೀಗೆ,, ಅನ್ನುತ್ತಲೇ ಇರುತ್ತಾಳೆ.. ನಿಜ ಹೇಳಬೇಕೆಂದರೆ ಸಾಲಗಾರರಿಗೆ ಅಪ್ಪ ಚೂರುಪಾರು ಅರ್ಥವಾಗಿರುತ್ತಾನೆ.. ತನ್ನ ಗೆಳೆಯರಲ್ಲಿ ಒಬ್ಬಿಬ್ಬರಿಗೆ ಅಪ್ಪ ಕಾಲು ಭಾಗ ಮಾತ್ರ ಅರ್ಥ ಆಗಿರುತ್ತಾನೆ.‌ ಅಪ್ಪನ ಸವೆದು ಹೋಗಿರುವ ಚಪ್ಪಲಿಗಳಿಗೆ, ಅಪ್ಪ ವರ್ಷಗಟ್ಟಲೆ ಹಾಕಿದ ಹಳೆಯ ಬಟ್ಟೆಗಳಿಗೆ ಮಕ್ಕಳು ಮತ್ತು ಮಡದಿಗಿಂತಲೂ ಅಪ್ಪ ಚೆನ್ನಾಗಿ ಅರ್ಥ ಆಗಿರುತ್ತಾನೆ.. ಅವುಗಳು ಹಳೆಯದಾದರೂ ಅಪ್ಪ ಅವುಗಳನ್ನೇ ಪ್ರೀತಿಯಿಂದ ಬಳಸುತ್ತಾನೆ..ಅಪ್ಪ ಅವುಗಳನ್ನು ಬದಲಿಸುವುದಿಲ್ಲ..ಆ ಹಳೆಯ ವಸ್ತುಗಳಲ್ಲಿಯೇ ಅಪ್ಪ ಹೊಸದನ್ನು ಕಂಡುಕೊಂಡಿದ್ದಾನೆ.. ಅಪ್ಪ ಹಳೆಯ ಕಾಲದವ..ಆತನಿಗೆ ಹೊಳೆಯುವುದೆಲ್ಲಾ ಬರೀ ಹಳೆಯ ಯೋಚನೆಗಳು, ಅಪ್ಪ ಈಗಿನ ಕಾಲಕ್ಕೆ ತಕ್ಕಂತೆ ಆಗಿಲ್ಲ ಅನ್ನುವ ಮಡದಿ ಮಕ್ಕಳು .ಅಪ್ಪ ಆದರೂ ಅಪ್ಪನ ಬೆಲೆ ಮೂರು ಕಾಸು.. ಅಪ್ಪನ ಆಸೆ ಆಕಾಂಕ್ಷೆಗಳಿಗೆ ಮಕ್ಕಳ ದೃಷ್ಟಿಯಲ್ಲಿ ಅರ್ಥವೇ ಇಲ್ಲ.. ಆಪ್ಪನ ಪರಿಶ್ರಮ ತ್ಯಾಗಕ್ಕೆ ಬೆಲೆಯೂ ಇಲ್ಲ. ಎಲ್ಲರೂ ಮಲಗಿರುವಾಗಲೂ, ಎಚ್ಚರವಾಗಿರುವ ಅಪ್ಪ ಮಲಗಿದ ತನ್ನ ಹೆಂಡತಿ ಮತ್ತು ಮಕ್ಕಳ ಮುಖದಲ್ಲಿ ತನ್ನನ್ನ ಕಷ್ಟವನ್ನು ಮರೆಯುತ್ತಾನೆ. #😍 ನನ್ನ ಸ್ಟೇಟಸ್ #🔱 ಭಕ್ತಿ ಲೋಕ #💓ಮನದಾಳದ ಮಾತು #😞 ಮೂಡ್ ಆಫ್ ಸ್ಟೇಟಸ್ #☺ಜೀವನದ ಸತ್ಯ
See other profiles for amazing content