ಫಾಲೋ
mainu 8217892978
@mainukkk
272
ಪೋಸ್ಟ್ಸ್
1,896
ಫಾಲೋವರ್ಸ್
mainu 8217892978
870 ವೀಕ್ಷಿಸಿದ್ದಾರೆ
ಒಡಹುಟ್ಟಿದವರು ತಮ್ಮ ತಂದೆ ತಾಯಿ ಕೂಡಿಟ್ಟ ಪಿತ್ರಾರ್ಜಿತ ಆಸ್ತಿಗಾಗಿ ಹೊಡೆದಾಡಿ ನ್ಯಾಯಾಲಯದ ಕಟಕಟೆ ಏರುವುದನ್ನು ನೋಡಿದ್ದೇವೆ. ಆದರೆ ಸೌದಿ ಅರೇಬಿಯಾದಲ್ಲಿ ಸಹೋದರರಿಬ್ಬರು ನ್ಯಾಯಾಲಯದ ಕಟಕಟೆಯೇರಿದ ಈ ಒಂದು ಸತ್ಯ ಕಥೆ ಸಂಪೂರ್ಣವಾಗಿ ಭಿನ್ನವಾಗಿದೆ. ಹಿಜಾಮ್ ಅಲ್-ಘಮ್ಡಿ ಎಂಬ ವ್ಯಕ್ತಿ ತನ್ನ ಕಿರಿಯ ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ ಇತರ ಸಹೋದರರಂತೆ ಜಗಳವಾಡಲು ಅಲ್ಲ. ಇಬ್ಬರೂ ತಮ್ಮ ವೃದ್ದೆ ತಾಯಿಯನ್ನು ನೋಡಿಕೊಳ್ಳುವ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಾರೆ. ಹಿಜಾಮ್ ಅಲ್ ಘಾಮ್ದಿ ತಾನೇ ಕೊನೆಯ ತನಕ ತಾಯಿಯ ಆರೈಕೆಯನ್ನು ಮುಂದುವರಿಸಲು ಅನುಮತಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡರೆ, ಹಿಜಾಮ್ ಅಲ್ ಘಾಮ್ದಿಗೆ ತುಂಬಾ ವಯಸ್ಸಾಗಿದ್ದು, ಈ ಪ್ರಾಯದಲ್ಲಿ ಆತನಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ತನ್ನ ತಾಯಿಯನ್ನು ನೋಡಿಕೊಳ್ಳಲು ತನಗೆ ಅವಕಾಶ ನೀಡುವಂತೆ ಕಿರಿಯ ಸಹೋದರ ನ್ಯಾಯಾಲಯದ ಮೊರೆ ಹೋಗಿದ್ದ. ಇಬ್ಬರೂ ತಮ್ಮ ತಾಯಿಯ ಸೇವೆ ಮಾಡಲು ಅವಕಾಶಕ್ಕಾಗಿ ಮನವಿ ಮಾಡಿದಾಗ ನ್ಯಾಯ ನೀಡಬೇಕಾದ ನ್ಯಾಯಾಧೀಶರೇ ಒಂದು ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ನ್ಯಾಯಾಧೀಶರು ಈರ್ವರು ಮಕ್ಕಳ ಸಮಕ್ಷಮ ತಾಯಿಯ ಆಯ್ಕೆಯನ್ನು ಕೇಳಿದರು. ಆಗ ಮಕ್ಕಳ ಪ್ರೀತಿ ನೋಡಿ ತಾಯಿಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಸ್ವಲ್ಪ ತಡವರಿಸಿದ ತಾಯಿ ಕಣ್ಣೀರಿಡುತ್ತಾ ನ್ಯಾಯಾಧೀಶರಲ್ಲಿ ಹೇಳಿದರು ‘ ನನ್ನ ಎರಡೂ ಮಕ್ಕಳು ನನ್ನ ಎಡ ಹಾಗೂ ಬಲ ಕಣ್ಣಿದ್ದಂತೆ’. ಇದನ್ನು ಕೇಳಿ ವಿಚಲಿತರಾದ ನ್ಯಾಯಾಧೀಶರು ಏನು ನಿರ್ಧಾರ ನೀಡಬೇಕೆಂದು ತೋಚದೆ ಪೇಚಿನಲ್ಲಿ ಸಿಲುಕಿದರು. ಆದರೂ ಕೂಡ ಶರೀಯಾ ಕಾನೂನಿನ ನ್ಯಾಯ ನೀಡಲೇ ಬೇಕಾದ ನ್ಯಾಯಾಧೀಶರು ನೀಡಿದ ಆದೇಶ ನೋಡಿ….” ಹಿಜಾಮ್ ಅಲ್ ಘಾಮ್ದಿ ತನ್ನ ಈ ವೃದ್ಯಾಪದ ತನಕ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಂಡನು. ಈಗ ಕಿರಿಯ ಮಗನ ಸಲಹೆಯಂತೆ ಹಿಜಾಮ್ ಗೆ ವಿಶ್ರಾಂತಿಯ ಅಗತ್ಯತೆಯಿದೆ. ಕಿರಿಯ ಮಗ ಇನ್ನೂ ಕೂಡ ತಾಯಿಯನ್ನು ಸಾಕಲು ಶಕ್ತಿ ಮತ್ತು ಸಾಮರ್ಧ್ಯವನ್ನು ಹೊಂದಿರುವ ಕಾರಣ , ಕಿರಿಯ ಸಹೋದರಿನಿಗೆ ಮುಂದಕ್ಕೆ ತಾಯಿಯನ್ನು ನೋಡಿಕೊಳ್ಳುವಂತೆ ಸಲಹೆಯನ್ನು ನೀಡುತ್ತಿದ್ದೇನೆ. ತನ್ನ ವಯಸ್ಸಿನ ಕಾರಣದಿಂದಾಗಿ ಕಿರಿಯ ಸಹೋದರನ ಪರವಾಗಿ ತೀರ್ಪು ಪ್ರಕಟವಾದಾಗ, ಹಿಜಾಮ್ ಕಣ್ಣೀರು ಹಾಕಿದರು - ಕೋಪದಿಂದಲ್ಲ, ಆದರೆ ತನ್ನ ಕೊನೆಯ ವರ್ಷಗಳಲ್ಲಿ ತನ್ನ ತಾಯಿಯ ಸೇವೆಯನ್ನು ಮುಂದುವರಿಸುವ ಅವಕಾಶವನ್ನು ಕಳೆದುಕೊಂಡಿದ್ದೇನಲ್ಲಾ ಎಂದು ಹಿದಾಮ್ ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟರು. ಆದರೆ ಒಂದಂತೂ ಸತ್ಯ ಈ ಲೋಕದಲ್ಲಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡವರು ಯಾರೂ ಸೋತು ಹೋಗಿಲ್ಲ. ಹಿಜಾಮ್ ಕೂಡ ಹಾಗೆಯೇ , ನ್ಯಾಯಾಲಯದಲ್ಲಿ ಕ್ಷಣಿಕ ಸೋಲನ್ನು ಕಂಡಿರಬಹುದು ಆದರೆ ಸರ್ವಶಕ್ತನ ನ್ಯಾಯಾಲಯದಲ್ಲಿ ನಾಳೆ ಹಿಜಾಮ್ ನಂತಹವರಿಗೆ ಅತ್ಯುನ್ನತ ಸ್ಥಾನ ಲಭಿಸುವುದಂತೂ ಸತ್ಯ. #ತಂದೆ #ತಂದೆ ತಾಯಿ #ತಂದೆ ತಾಯಿ #❤️ ಅಮ್ಮನ ಪ್ರೀತಿ #💕ಎರಡು ಹೃದಯಗಳು
See other profiles for amazing content