ಫಾಲೋ
Radha S H
@rc2009
11,675
ಪೋಸ್ಟ್ಸ್
49,499
ಫಾಲೋವರ್ಸ್
Radha S H
1.8K ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಅಷ್ಟಾವಕ್ರ:- 'ಅಷ್ಟಾವಕ್ರ' ಅಂದರೆ ದೇಹದ ಎಂಟು ಭಾಗ ಬಗ್ಗಿರುವುದು ಎಂದು ಲೋಮಶ ಮಹರ್ಷಿಗಳು ಯುಧಿಷ್ಠಿರನಿಗೆ ಈ ಕತೆ ಹೇಳಲು ಆರಂಭಿಸಿದರು. ಉದ್ಧಾಲಕ ಮಹರ್ಷಿಗಳಿಗೆ ಸಾಕಷ್ಟು ಜನ ಶಿಷ್ಯರಿದ್ದರು. ಅವರಲ್ಲಿ 'ಕಹೋಡ' ಎಂಬ ಶಿಷ್ಯನಿದ್ದು , ಅವನು ತುಂಬಾ ಪ್ರಾಮಾಣಿಕನಾಗಿದ್ದನು. ಇವನ ಪ್ರಾಮಾಣಿಕತನಕ್ಕೆ ಮೆಚ್ಚಿ , ಮಗಳು ಸುಜಾತಾಳನ್ನು, ಕಹೋಡನಿಗೆ ಕೊಟ್ಟು ವಿವಾಹ ಮಾಡಿದರು. ಮಗಳು, ಅಳಿಯ, ಮಗ ಎಲ್ಲರೂ ಒಂದಾಗಿ ಆಶ್ರಮದಲ್ಲೇ ಇರುತ್ತಾರೆ. ಕೆಲವು ತಿಂಗಳು ಕಳೆದಾಗ ಸುಜಾತ ಗರ್ಭಿಣಿ ಆದಳು. ಆಶ್ರಮದಲ್ಲಿ ಉದ್ಧಾಲಕರ ಜೊತೆಗೆ ಕಹೋಡನು ಶಿಷ್ಯರಿಗೆ ಪಾಠ ಮಾಡುತ್ತಿದ್ದನು. ಆತನ ಪತ್ನಿ ತನ್ನ ಹೊಟ್ಟೆಯಲ್ಲಿರುವ ಮಗುವಿಗೂ ಒಳ್ಳೆಯ ಬೋಧನೆ ಸಿಗಲೆಂದು ಪಾಠಮಾಡುವಲ್ಲಿ ಕುಳಿತಿರುತ್ತಿದ್ದಳು. ಹೊಟ್ಟೆಯಲ್ಲಿರುವ ಮಗು ಎಲ್ಲಾ ಪಾಠಗಳನ್ನು ಕೇಳಿಸಿಕೊಳ್ಳುತ್ತಿತ್ತು ಮತ್ತು ಎಲ್ಲಾ ಶಾಸ್ತ್ರಗಳನ್ನು ಮನನ ಮಾಡಿಕೊಂಡಿತ್ತು. ಹೀಗಿರುವಾಗ ಒಂದು ದಿನ 'ಕಹೋಡ'ನ ಮನಸ್ಥಿತಿ ವ್ಯಸ್ತಗೊಂಡಿತ್ತೋ ಏನೋ? ಅದೇ ಸಮಯಕ್ಕೆ, ಹೊಟ್ಟೆಯಲ್ಲಿನ ಮಗು ಮಾತಾಡಕ್ಕೆ ಶುರುಮಾಡಿತು. "ಅಪ್ಪ ನಿಮ್ಮ ಕೃಪೆಯಿಂದ, ನೀವು ಹೇಳುತ್ತಿದ್ದ ಬೋಧನೆಯಿಂದಾಗಿ, ನನಗೆ ಸಾಕಷ್ಟು ಜ್ಞಾನವು ಸಿಕ್ಕಿದೆ. ಆದರೆ ಇವತ್ತು ನೀವು ಬೋಧನೆಯನ್ನು ತಪ್ಪು ತಪ್ಪಾಗಿ ಹೇಳಿ ಕೊಡ್ತಾ ಇದ್ದೀರಿ, ದಯವಿಟ್ಟು ತಪ್ಪಾಗಿ ಹೇಳಿ ಕೊಡಬೇಡಿ" ಎಂದು ಮಗು ಅಂದಿದ್ದು, ಕಹೋಡನೀಗೆ ಕೇಳಿಸಿತು. ಮಗುವು ಕಾಣಿಸದೆ ಇದ್ದರೂ ,ಶಿಷ್ಯರೆದುರಿಗೆ ತನಗೆ ಬುದ್ಧಿ ಹೇಳಿದ ಮಗುವಿನ ಮೇಲೆ ತಡೆಯಲಾರದಷ್ಟು ಸಿಟ್ಟು ಬಂದಿತು. ನಾನು ನಿನಗೆ ತಂದೆ, ಮೇಲಾಗಿ ಗುರು, ನನಗೇ ತಪ್ಪು ಎಂದು ಹೇಳುತ್ತೀಯಾ? ಹುಟ್ಟುವುದಕ್ಕಿಂತ ಮುಂಚೆನೇ ಗುರು ಪರೀಕ್ಷೆ ಮಾಡುವ ನೀನು 'ಅಷ್ಟವಕ್ರ' ನಾಗಿ ಹುಟ್ಟು ಎಂದು ಮಗನಿಗೆ ಶಾಪ ಕೊಟ್ಟನು. ಆಗಲೇ ಒಂಬತ್ತು ತಿಂಗಳು ತುಂಬುತ್ತಿದ್ದು, ಸುಜಾತಳು, ಗಂಡ ಕಹೋಡನಿಗೆ,"ನನಗೆ ಇನ್ನು ಕೆಲವೇ ದಿನಗಳಲ್ಲಿ 10 ತಿಂಗಳು ಬೀಳುತ್ತದೆ ಮಗುವಿನ ಆರೈಕೆ, ಅನುಪಾನದ ಖರ್ಚಿಗೆ ಹಣ ಬೇಕಾಗುತ್ತದೆ. ವಿದೇಹದ ಜನಕನು ಪಂಡಿತರೆಲ್ಲರಿಗೂ ಬೇಕಾದಷ್ಟು ಸಹಾಯ ಮಾಡುತ್ತಾರೆ, ಅಂತ ಜನರು ಹೇಳ್ತಾ ಇದ್ದಾರೆ. ನೀವು ಜನಕನ ಹತ್ತಿರ ಹೋಗಿ ಹಣ ಸಂಪಾದನೆ ಮಾಡಿಕೊಂಡು ಬನ್ನಿ" ಎಂದು ಗಂಡನಿಗೆ ಹೇಳಿ, ಇದರಿಂದ ಮಗುವಿನ ಪೋಷಣೆ ಮಾಡಲು ಸುಲಭವಾಗುತ್ತದೆ ಎಂದಳು. ಪತ್ನಿಯ ಮಾತಿನಂತೆ ಜನಕನ ಆಸ್ಥಾನಕ್ಕೆ ಕಹೋದನು ಬಂದನು. ಜನಕನ ಆಸ್ಥಾನದಲ್ಲಿ 'ಬಂದಿ' ಎಂಬ ದೊಡ್ಡ ಪಂಡಿತನಿದ್ದನು. ಪಾಂಡಿತ್ಯದಲ್ಲಿ ಅವನನ್ನು ಗೆಲ್ಲುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಹಾಗೆ ಬಂದವರು ಗೆದ್ದರೆ, ಬಯಸಿದ್ದನ್ನೆಲ್ಲ ಮಹಾರಾಜ ಕೊಡುತ್ತಿದ್ದನು. ಸೋತರೆ ಶಿಕ್ಷೆಯೆಂದು, ಅವರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಿ ಬಿಡುತ್ತಿದ್ದರು. ಕಹೋಡನು ವಾದದಲ್ಲಿ 'ವಂದಿ' ಪಂಡಿತನ ಕೈಯಲ್ಲಿ ಸೋತನು. ಹೀಗಾಗಿ ಅವನನ್ನ ಸಮುದ್ರದಲ್ಲಿ ಮುಳುಗಿಸಿದರು. ಅಳಿಯನನ್ನು ಸಮುದ್ರದಲ್ಲಿ ಮುಳುಗಿಸಿದ ವಿಚಾರ ಉದ್ದಾಲಕನಿಗೆ ಗೊತ್ತಾಯಿತು. ಹತ್ತನೇ ತಿಂಗಳಲ್ಲಿ ಸುಜಾತಳಿಗೆ ಮಗು ಹುಟ್ಟಿತು. ಮಗುವಿನ ದೇಹದ ಎಂಟು ಭಾಗ ಸೊಟ್ಟಗಿದ್ದು ಅಷ್ಟವಕ್ರನಂತೆ ಹುಟ್ಟಿದನು. ಅದಾಗಲೇ ಮಗುವಿನ ತಂದೆ ಕಹೋಡನನ್ನು ಸಮುದ್ರದಲ್ಲಿ ಮುಳುಗಿಸಿದ್ದರಿಂದ ಮಗು ತಂದೆಯ ಮುಖವನ್ನು ನೋಡಿರಲಿಲ್ಲ. ಉದ್ಧಾಲಕನು ಮಗುವಿಗೆ ಬೇಜಾರು ಆಗಬಾರದೆಂದು ತಾನೇ ಅದರ ತಂದೆ ಎಂದು ಹೇಳಿದನು. ಶ್ವೇತಕೇತು ಅಣ್ಣನೆಂದುಕೊಂಡೇ ಬೆಳೆಯಿತು. ಹೀಗೆ ಬೆಳೆಯುತ್ತಾ 12 ವರ್ಷ ತುಂಬಿದೆ. ಅಷ್ಟವಕ್ರನನ್ನು ಪಾಂಡಿತ್ಯದಲ್ಲಿ ಯಾರೂ ಮೀರಿಸಲಾಗಲಿಲ್ಲ. ಶ್ವೇತಕೇತು ಸಾಮಾನ್ಯ ಬುದ್ಧಿವಂತನಾಗಿದ್ದ. ಒಂದು ದಿನ ಅಕಸ್ಮಾತಾಗಿ ಇಬ್ಬರೂ ಜೊತೆ ಜೊತೆಯಲ್ಲಿ ಆಟ ಆಡುತ್ತಾ ಬಂದರು. ಶ್ವೇತಕೇತುವು ಬಂದವನೇ ತನ್ನ ತಂದೆ ಉದ್ಧಾಲಕನ ತೊಡೆಯ ಮೇಲೆ ಕುಳಿತನು. ಅಷ್ಟಾವಕ್ರನು ಓಡಿಬಂದು ಇನ್ನೊಂದು ತೊಡೆಯ ಮೇಲೆ ಕೂರಲು ಹೋದಾಗ, ಶ್ವೇತಕೇತು ನೀನು ನನ್ನ ತಂದೆಯ ತೊಡೆಯ ಮೇಲೆ ಕೂರಬೇಡ, ನೀನು ನಿನ್ನ ತಂದೆಯ ತೊಡೆಯಮೇಲೆ ಕೂರು ಎಂದಾಗ, ಅಷ್ಟವಕ್ರನು ನನ್ನ ತಂದೆ ಯಾರು ಎಂದು ಉದ್ಧಾಲಕನನ್ನು ಕೇಳಿದನು. ಆಗ ಉದ್ದಾಲಕನು, ಕಹೋಡನ ಎಲ್ಲಾ ಕಥೆಯನ್ನು ಹೇಳಿದಾಗ, ಅಷ್ಟವಕ್ರನಿಗೆ ತುಂಬಾ ಕೋಪ ಬಂದಿತು. 'ವಂದಿ' ಮಹಾ ಪಂಡಿತರು ತನ್ನ ತಂದೆಯನ್ನು ಸೋಲಿಸಿ ಸಮುದ್ರದಲ್ಲಿ ಮುಳುಗಿಸಿದರು, ಎಂಬ ವಿಚಾರ ತಿಳಿದು, ತಾನು 'ವಂದಿ' ಪಂಡಿತರನ್ನು ಸೋಲಿಸಿ ತಂದೆಯನ್ನು ಸಮುದ್ರದಲ್ಲಿ ಮುಳುಗಿಸಿದಂತೆ,'ವಂದಿ' ಪಂಡಿತನನ್ನು ಸೋಲಿಸಿ ಸಮುದ್ರದಲ್ಲಿ ಮುಳುಗಿಸಬೇಕು, ಎಂದುಕೊಂಡು,(ಸೋದರ ಮಾವ) ಶ್ವೇತಕೇತುವಿನ ಜೊತೆ ಜನಕನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದಾಗ ದ್ವಾರಪಾಲಕರು, ಇವರನ್ನು ತಡೆದು ಒಳಗೆ ಬಿಡಲಿಲ್ಲ. ನೀನು ಯಾಕೆ ಬಂದೆ ಎಂದು ಕೇಳಿದಾಗ ನಾನು 'ವಂದಿ' ಪಂಡಿತರ ಜೊತೆ ವಾದ ಮಾಡಿ ಸೋಲಿಸಲು ಬಂದಿದ್ದೇನೆ ಎಂದಾಗ, ನೀನು ಇನ್ನೂ ಚಿಕ್ಕ ಹುಡುಗ ಅವರನ್ನು ಸೋಲಿಸಲು ನಿನಗೆ ಸಾಧ್ಯವಿಲ್ಲ ಎಂದರು. ಆಗ ಅಷ್ಟವಕ್ರನು "ಅಯ್ಯಾ ಮೂರ್ಖ ನೀನು ಬುದ್ಧಿವಂತಿಕೆಯನ್ನು ವಯಸ್ಸಿನಿಂದ ಅಳೆಯುತ್ತಿದ್ದೀಯಾ ವಯಸ್ಸಿಗೂ ಬುದ್ಧಿವಂತಿಕೆಗೂ ಸಂಬಂಧವಿಲ್ಲ" ಎಂದು ಒಳಗೆ ಹೋಗಿ ವಂದಿ ಪಂಡಿತರ ಜೊತೆ ವಾದ ಮಾಡಿ ಅವರನ್ನು ಸೋಲಿಸಿದನು. ನಂತರ ಅವರಿಗೆ ಶಿಕ್ಷೆ ಕೊಡುವ ಪ್ರಕಾರ,ನೀವು ಸಮುದ್ರದಲ್ಲಿ ಮುಳುಗಿ ಸಾಯಬೇಕು ಅಂದನು. ಆಗ ಪಂಡಿತರು ನೋಡು, ಇದುವರೆಗೂ ಒಂದು ವಿಷಯವನ್ನು ಯಾರಿಗೂ ನಾನು ಹೇಳೇ ಇಲ್ಲ. ಯಾಕೆಂದರೆ ಇದುವರೆಗೂ ನಾನು ಸೋತಿಲ್ಲ. ನಾನು ಸಮುದ್ರದಲ್ಲಿ ಮುಳುಗಿದರೆ ಸಾಯುವುದಿಲ್ಲ. ಏಕೆಂದರೆ ನಾನು ವರುಣನ ಮಗ ನೀರಿನ ಜೊತೆಯಲ್ಲಿ ಇರುವವನು. ಹಾಗೆಯೇ ಇನ್ನೊಂದು ವಿಚಾರವಿದೆ. ಅದು ನನ್ನಿಂದ ಸೋತಂಥಹ ಪಂಡಿತರು ಯಾರೂ ಸತ್ತಿಲ್ಲ. ನಮ್ಮ ತಂದೆ ಅಂದರೆ 'ವರುಣದೇವ' ದೊಡ್ಡ ಯಾಗ ಮಾಡುತ್ತಿದ್ದಾರೆ. ಅದನ್ನು ನಡೆಸಲು ಒಳ್ಳೆ ಪಂಡಿತರುಗಳು ಸಿಗಲಿಲ್ಲ. ಅದಕ್ಕಾಗಿ ನಾನು ಬಂದಿರುವುದು. ನನ್ನ ಜೊತೆ ಪಾಂಡಿತ್ಯದಲ್ಲಿ ಸೋತವರನ್ನೆಲ್ಲ ಸಮುದ್ರದಲ್ಲಿ ಮುಳುಗಿಸಿ ಯಾಗಕ್ಕೆ ಕಳಿಸಿಕೊಡುತ್ತೇನೆ. ನಿಮ್ಮ ತಂದೆ ಕಹೋಡನು ಕೂಡ ಸತ್ತಿಲ್ಲ. ಯಾಗವನ್ನು ಮಾಡ್ತಾ ಇದ್ದಾನೆ. ಅವನನ್ನು ಕರೆದುಕೊಂಡು ಬರುತ್ತೇನೆ ಅಂತ ಹೇಳಿ, ಕಹೋಡನನ್ನು ಕರೆದು ತಂದು ಒಪ್ಪಿಸಿದನು. ಶ್ವೇತಕೇತು ಜೊತೆ ಅಷ್ಟವಕ್ರನು ತನ್ನ ತಂದೆ ಕಹೋಡನನ್ನು ಕರೆದುಕೊಂಡು ಆಶ್ರಮಕ್ಕೆ ಬರುತ್ತಾನೆ. ಕಹೋಡನಿಗೆ ಮಗನ ಕುರಿತು ತುಂಬಾ ಹೆಮ್ಮೆ ಅನಿಸಿತು. ಅವನು " ನೋಡು ಮಗು ಎಲ್ಲ ಮಕ್ಕಳು ತಂದೆಯಿಂದ ಉದ್ಧಾರ ಆಗುತ್ತಾರೆ. ಆದರೆ ಒಂದು ರೀತಿ ಸತ್ತುಹೋದ ನನ್ನನ್ನು ನೀನು ವಾಪಸ್ಸು ಕರೆತಂದೆ, ಹೀಗಾಗಿ ನಿನ್ನಿಂದ ನಾನು ಉದ್ದಾರವಾಗಿದ್ದೇನೆ. ಈಗ ನಾನು ನಿನಗೆ ಒಂದು ವರವನ್ನು ಕೊಡಬೇಕೆಂದು ಮಾಡಿದ್ದೇನೆ. ನೀನು ಈ ಕೂಡಲೇ ಹೋಗಿ 'ಮಧುವೀಲ' ನದಿಯಲ್ಲಿ, ಮುಳುಗಿ ಸ್ನಾನ ಮಾಡು" ಎಂದನು. ಅಷ್ಟವಕ್ರನು ಯಾಕೆ? ಎಂದು ಕೇಳಿದಾಗ, ಮೊದಲು ನದಿಯಲ್ಲಿ ಮುಳುಗಿ ಸ್ನಾನ ಮಾಡು ಗೊತ್ತಾಗುತ್ತದೆ. ಆ ಪ್ರಕಾರ ಅಷ್ಟವಕ್ರನು 'ಮಧುವೀಲ' ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಮೇಲೆ ಬಂದಾಗ ದೇಹದ 'ಅಷ್ಟವಕ್ರ' ವೆಲ್ಲ ಹೋಗಿ, ಸುಂದರವಾದ ಶರೀರ ಬಂದಿತ್ತು. ಆನಂತರ ಆ ನದಿ ಹೆಸರು 'ಮಧುವೀಲ' ಹೋಗಿ 'ಸಮಂಗ' ಅಂತ ಆಗುತ್ತದೆ. ಅವನ ಅಂಗಗಳೆಲ್ಲಾ ಸರಿ ಹೋಗಿದ್ದರಿಂದ 'ಸಮಂಗ' ಅನ್ನುವ ಹೆಸರಾಯಿತು. ಈ ಕತೆಯನ್ನು 'ಲೋಮೇಶ 'ಮಹರ್ಷಿಗಳು ತೀರ್ಥ ಯಾತ್ರೆಯ ಸಮಯದಲ್ಲಿ ಯುಧಿಷ್ಠಿರ ಮತ್ತು ಅವನ ಸಹೋದರರಿಗೆ ಹೇಳುತ್ತಾರೆ. ಇದು ಮಹಾ ಮೇಧಾವಿ 'ಅಷ್ಟಾವಕ್ರ ಮಹರ್ಷಿ' ಕಥೆ. ಗಮನಿಸಿ: ಪ್ರಸಂಗಗಳು ರಾಮಾಯಣದ ಕಾಲದ್ದು. ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಲೋಮಶ ಮಹರ್ಷಿಗಳು ಕಥೆ ಹೇಳುವುದು. "ಕಶ್ಯಫೋತ್ರಿರ್ಭರದ್ವಾಜ ವಿಶ್ವಾಮಿತ್ರೋಥ ಗೌತಮ! ಜಮದಗ್ನಿವಸಿಷ್ಠಶ್ಚ ಸಪ್ತೈತೇ ಋಷಯ ಸ್ಮತಾ" ! ವಂದನೆಗಳೊಂದಿಗೆ, #📚ನೀತಿ ಕಥೆಗಳು
See other profiles for amazing content