ಫಾಲೋ
Rekha
@rk203
463
ಪೋಸ್ಟ್ಸ್
4,932
ಫಾಲೋವರ್ಸ್
Rekha
15.1K ವೀಕ್ಷಿಸಿದ್ದಾರೆ
ಮಾಗಡಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಮನೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಯೂಟ್ಯೂಬ್‌ ನ್ಯೂಸ್‌ ಚಾನೆಲ್‌ ನಡೆಸುತ್ತಿದ್ದ ರವಿ ಜಮುನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಇಬ್ಬರು ಸ್ನೇಹಿತರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಲಕಿಯ ಸಹಾಯದಿಂದ ಆರೋಪಿಯನ್ನು ಹಿಡಿದು, ಆತನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. #😡17 ವರ್ಷದ ಬಾಲಕಿಯ ಕಿಡ್ನಾಪ್,ಅಸಭ್ಯ ವರ್ತನೆ ; ಖ್ಯಾತ ಯುಟ್ಯುಬರ್ ಅರೆಸ್ಟ್😱
Rekha
60.3K ವೀಕ್ಷಿಸಿದ್ದಾರೆ
ಕೆಜಿಎಫ್​ ಚಾಪ್ಟರ್​ 2 (KGF Chapter 2 Co-Director) ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ (Kirtan Nadagouda) ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಕೀರ್ತನ್ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ಕಣ್ಣೀರಿಟ್ಟಿದ್ದಾರೆ. #💔ಲಿಫ್ಟ್‌ನಲ್ಲಿ ಸಿಲುಕಿ KGF ನಿರ್ದೇಶಕನ ಪುತ್ರ ದುರ್ಮರಣ😭
Rekha
48.4K ವೀಕ್ಷಿಸಿದ್ದಾರೆ
ರಾಜ್ಯ ಪ್ರಶಸ್ತಿ ವಿಜೇತನ ಯುವ ನಟ ಅಖಿಲ್ ವಿಶ್ವನಾಥ್ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಪಡೆಯುವ ಮೂಲಕ ಸಿನಿ ಪ್ರಿಯರಲ್ಲಿ ಭಾರಿ ಭರವಸೆ ಮೂಡಿಸಿದ್ದ ಯುವ ನಟ ತನ್ನ ಮನೆಯಲ್ಲೇ ಬದುಕು ಅಂತ್ಯಗೊಳಿಸಿದ್ದಾನೆ. ಘಟನೆಯಿಂದ ಮಲೆಯಾಳಂ ಸಿನಿಮಾ ಇಂಡಸ್ಟ್ರಿ ಆಘಾತಕ್ಕೊಳಗಾಗಿದೆ. ಕಠಿಣ ಪ್ರಯತ್ನದ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಅಖಿಲ್ ವಿಶ್ವನಾಥ್ ನಿಧನಕ್ಕೆ ಕೇರಳ ಜನ ಕಂಬನಿ ಮಿಡಿದಿದ್ದಾರೆ. ಇತ್ತ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ. #💔ಖ್ಯಾತ ಯುವ ನಟ ನಿಧನ 😭💔
Rekha
30.8K ವೀಕ್ಷಿಸಿದ್ದಾರೆ
ಸಂಗೀತ್ ಸಾಗರ್ ಶಿವಮೊಗ್ಗದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ. ಸಾವು ಯಾವ ಕ್ಷಣದಲ್ಲಿ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ನಟಿಸುವಾಗಲೇ ನಿಧನ ಹೊಂದಿದ ಅನೇಕ ಕಲಾವಿದರು ಇದ್ದಾರೆ. ಈಗ ಕನ್ನಡದ ನಿರ್ದೇಶಕನೋರ್ವ ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ‘ಪಾತ್ರಧಾರಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದ ಸಂಗೀತ್ ಸಾಗರ್ ಮೃತ ದುರ್ಧೈವಿ. ಅವರ ಸಾವಿನಿಂದ ಇಡೀ ಕುಟುಂಬಕ್ಕೆ ಶಾಕ್ ಉಂಟಾಗಿದೆ. ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. #😭ಕನ್ನಡದ ಖ್ಯಾತ ನಿರ್ದೇಶಕ ನಿಧನ 💔😟
Rekha
35.3K ವೀಕ್ಷಿಸಿದ್ದಾರೆ
ನಟಿ ಸಮಂತಾ ರುತ್ ಪ್ರಭು ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಸೋಮವಾರ ಬೆಳಿಗ್ಗೆ ಸದ್ಗುರುಗಳ ಇಶಾ ಯೋಗ ಕೇಂದ್ರದಲ್ಲಿ ವಿವಾಹವಾದರು. ವಾರಾಂತ್ಯದಿಂದ ಅವರ ವಿವಾಹದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು, ಆದರೆ ಮೂಲವೊಂದು ಸ್ಕ್ರೀನ್‌ಗೆ ದೃಢಪಡಿಸಿದ್ದು, ಸೋಮವಾರ ಬೆಳಿಗ್ಗೆ ಇಶಾ ಯೋಗ ಕೇಂದ್ರದೊಳಗಿನ ಲಿಂಗ ಭೈರವಿ ದೇವಸ್ಥಾನದಲ್ಲಿ ವಿವಾಹ ನಡೆದಿದೆ. "ಈಶ ಯೋಗ ಕೇಂದ್ರದ ಒಳಗಿನ ಲಿಂಗ ಭೈರವಿ ದೇವಸ್ಥಾನದಲ್ಲಿ ಬೆಳಗಿನ ಜಾವ ವಿವಾಹ ನಡೆಯಿತು" ಎಂದು ಮೂಲಗಳು HT ಗೆ ತಿಳಿಸಿವೆ. ಸಮಾರಂಭವು ಕೇವಲ 30 ಅತಿಥಿಗಳು ಮಾತ್ರ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ದೇವಾಲಯದ ಪ್ರಶಾಂತ ಮತ್ತು ಆಧ್ಯಾತ್ಮಿಕ ವಾತಾವರಣಕ್ಕೆ ಬದ್ಧವಾಗಿ ಸಮಂತಾ ಈ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೆಂಪು ಸೀರೆಯನ್ನು ಧರಿಸಿದ್ದರು ಎಂದು ಹೇಳಲಾಗುತ್ತದೆ.ಬೆಳೆಯುತ್ತಿರುವ ವದಂತಿಗಳ ಹೊರತಾಗಿಯೂ, ಸಮಂತಾ ಅಥವಾ ರಾಜ್ ತಮ್ಮ ವಿವಾಹದ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಹಲವಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಾಧ್ಯಮಗಳು ಇಬ್ಬರೂ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ಸೂಚಿಸಿದ ನಂತರ ವದಂತಿಗಳು ವೇಗ ಪಡೆದುಕೊಂಡವು. #😮ಗುಟ್ಟಾಗಿ ಎರಡನೇ ಮದುವೆಯಾದ ಖ್ಯಾತ ನಟಿ 😱
Rekha
27.4K ವೀಕ್ಷಿಸಿದ್ದಾರೆ
ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ಸಂಬಂಧಿ ಯುವತಿ ಡ್ರಗ್‌ ಅಡಿಕ್ಟ್‌ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ.  – ಎಂಜಿನಿಯರಿಂಗ್‌ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದ ಅಚಲ ಹಾಸನ/ಬೆಂಗಳೂರು: ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ಸಂಬಂಧಿ ಯುವತಿ ಡ್ರಗ್‌ ಅಡಿಕ್ಟ್‌ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ. ಹಾಸನ (Hassan) ಮೂಲದ ಯುವತಿ ಅಚಲ (22) ನವೆಂಬರ್‌ 22ರಂದು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ (Puttanahalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದ್ರೆ 10 ದಿನ ಕಳೆದರೂ, ಸಾಕ್ಷ್ಯಗಳಿದ್ದರೂ ಆರೋಪಿ ಬಂಧನ ಆಗದೇ ಇರುವುದು ಅಚಲ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. #💔ಕನ್ನಡದ ಖ್ಯಾತ ನಟಿ ಮನೆಯಲ್ಲಿ ತೀವ್ರ ಶೋಕ 😟
Rekha
11K ವೀಕ್ಷಿಸಿದ್ದಾರೆ
ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಪಡೆದವರಿಗೆ ಶಾಕ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, Central Board of Direct Taxation ಮಾಹಿತಿ ಆಧಾರದ ಮೇಲೆ ರಾಜಧಾನಿ ಬೆಂಗಳೂರೊಂದರಲ್ಲೇ ಲಕ್ಷಾಂತರ ಕಾರ್ಡ್​ಗಳು ರದ್ದಾಗುವ ಸಾಧ್ಯತೆ ಇದೆ. ಆಹಾರ ಇಲಾಖೆಗೆ ಕಳೆದ ತಿಂಗಳು ದೊರೆತಿರುವ ಟ್ಯಾಕ್ಸ್​​ ರಿಪೋರ್ಟ್​​ ಆಧಾರದಲ್ಲಿ, ತೆರಿಗೆ ಕಟ್ಟುತ್ತಿದ್ದರೂ ಪಡೆದಿರುವ ಬಿಪಿಎಲ್​ ಕಾರ್ಡ್​ಗಳು ಎಪಿಎಲ್​ ಕಾರ್ಡ್​​ಗಳಾಗಿ ಪರಿವರ್ತನೆಯಾಗಲಿವೆ. ಆಹಾರ ಇಲಾಖೆಯ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ 13,329 ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದು, ಅವನ್ನು ಎಪಿಎಲ್​​ ಆಗಿ ಪರಿವರ್ತಿಸಲಾಗಿದೆ. ಈ ಹಿನ್ನಲೆ ರಾಜಾಜಿನಗರದ ಆಹಾರ ಇಲಾಖೆ ಮುಂದೆ ಜನರು ಜಮಾಯಿಸಿದ್ದಾರೆ. ಕಳೆದ ತಿಂಗಳು ರೇಷನ್​​ ಸಿಕ್ಕಿತ್ತು, ಆದ್ರೆ ಈ ತಿಂಗಳು ನಮಗೆ ರೇಷನ್​​ ನೀಡಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಮಹಿಳೆಯೋರ್ವರು, ನಾವು ಟ್ಯಾಕ್ಸ್ ಕಟ್ಟುತ್ತಿಲ್ಲ, ಮಗಳು ಕೆಲಸ ಮಾಡುತ್ತಿದ್ದಳು. ಆದರೆ ಈಗ ಅವಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಹೀಗಿದ್ದರೂ ನಮಗೆ ರೇಷನ್​​ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. #🔴'BPL ಕಾರ್ಡ್ ರದ್ದು' ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ❌
Rekha
20.2K ವೀಕ್ಷಿಸಿದ್ದಾರೆ
ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ನಟಿ ನಯನಾ ವಿರುದ್ಧ ಕಲಬುರ್ಗಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್​​ಐಆರ್ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿನ ನಟಿ, ಹಾಸ್ಯ ಕಲಾವಿದೆ ನಯನ ವಿರುದ್ಧ ದೂರು ದಾಖಲಾಗಿದೆ. ನಟಿ ನಯನಾ ಅವರು ದಲಿತ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಯೊಂದು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಯನಾ ಅವರು ಕಳೆದ ತಿಂಗಳು ಚಿಟ್ ಫಂಡ್ ಮೋಸದ ಕುರಿತಾಗಿ ಮಾತನಾಡುತ್ತಾ ಬಳಸಿದ್ದ ಪದಗಳು ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕ ಪದಗಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಬುರ್ಗಿಯಲ್ಲಿ ದಲಿತ ಸೇನೆಯ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. #😮ಜಾತಿ ನಿಂದನೆ ಆರೋಪ: ಖ್ಯಾತ ನಟಿ ವಿರುದ್ಧ ದೂರು ದಾಖಲು😱
See other profiles for amazing content