#🏏ರಾಹುಲ್ ದ್ರಾವಿಡ್ ಅವರ ಜನ್ಮದಿನ🤩 ಕನ್ನಡಿಗರ ಹೆಮ್ಮೆ ಕರ್ನಾಟಕದ ಗೋಡೆ ಅಂತೆಲ್ಲಾ ಕರೆಯುತ್ತಾರೆ ರಾಹುಲ್ ದ್ರಾವಿಡ್ ಅವರನ್ನು ಕ್ರಿಕೆಟ್ ನ ಜೆಂಟಲ್ ಮ್ಯಾನ್ ಹಾಗೂ ಭಾರತ ಕ್ರಿಕೆಟ್ ತಂಡದ ಗೋಡೆ ಎಂತಲೂ ಕರೆಯುತ್ತಾರೆ. ಕ್ರಿಕೆಟ್ ಗೆ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ಬಳಿಕ ಭಾರತದ ಪರ ಅತ್ಯಂತ ಹೆಚ್ಚು ಟೆಸ್ಟ್ ರನ್ ಮತ್ತು ಮೂರನೇ ಕ್ರಮಾಂಕದಲ್ಲಿ ಬಂದು ಒಟ್ಟು ಹತ್ತು ಸಾವಿರ ರನ್ ಹೊಡೆದ ವಿಶ್ವದ ಏಕೈಕ ಕ್ರಿಕೆಟಿಗ. ಹಾಗು ಟೆಸ್ಟ್ ನಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ಮತ್ತು ಅತಿಹೆಚ್ಚು ಬಾಲ್ ಆಡಿರುವ ಆಟಗಾರ ಮತ್ತು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ರನ್ ಸಿಡಿಸಿರುವ ಒಬ್ಬ ಶ್ರೇಷ್ಠ ಆಟಗಾರ. ಹೇಳುತ್ತಾ ಹೋದರೆ ಇವರ ಸಾಧನೆ ಅಪಾರ ಇಷ್ಟೆಲ್ಲಾ ಸಾಧನೆ ಮಾಡಿರುವ ಅವರಿಗೆ ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್

