ಛಾನಲ್ಗಳ TRP ಗಾಗಿ *BIG BOSS* ಎಂಬ ಬೇಜವಾಬ್ದಾರಿ ಕಾರ್ಯಕ್ರಮ...ಬೇಕಾ? 18 ಜನ ಒಂದು ಮನೆಯಲ್ಲಿ 100 ದಿನಗಳ ಸೋಮಾರಿತನ, ಜಗಳ, ಕದನಗಳ, ಹೈಲುತನಗಳನ್ನೇ ಆದರ್ಶವೆಂದು ಮತ್ತು ಯುವಕರ ದಾರಿ ತಪ್ಪಿಸುವ ಕೃತಕ ಪ್ರೇಮದಾಟ ಹೀಗೆ ಇವುಗಳನ್ನು ಸಾಹಸವೆಂಬಂತೆ ಬಿಂಬಿಸುವ,.. 70-80 ಕ್ಯಾಮರಾಗಳ ವ್ಯರ್ಥ ಚಿತ್ರೀಕರಣ, ಪ್ರತಿದಿನ ಒಂದೂವರೆ ತಾಸು ಪ್ರಸಾರ. ಇದರಲ್ಲಿ ವಿಜ್ಞಾನವೂ ಇಲ್ಲ! ವಿನೋದವೂ ಇಲ್ಲ! ವೀಕ್ಷಕರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ.... ಇಂತಹ ಆಟದ ಬದಲಿಗೆ! ದೇಶವ್ಯಾಪ್ತಿ 100 ಮಂದಿ ಯುವ ನಿರೊದ್ಯೋಗಿಗಳು ಉದಾ: ಇಂಜನಿಯರುಗಳು, ಉನ್ನತ ಪದವೀದರರು ಮತ್ತು ವಿಜ್ಞಾನಿಗಳು ಹೀಗೆ ಹಲವಾರು ಕ್ಷೇತ್ರಗಳಿಂದ ಆಯ್ಕೆ ಮಾಡಿ ಒಂದು ಸ್ಥಳದಲ್ಲಿ 30 ದಿನದ ಸಮಯದಲ್ಲಿ ಇಲ್ಲಿಯವರೆಗೂ ಯಾರೂ ಕಂಡುಹಿಡಿಯದ ಹೊಸ ವಸ್ತು ಉತ್ಪನ್ನಗಳನ್ನು ಆವಿಷ್ಕರಸಿ ಎಂದು ಸ್ಪರ್ಧೆ ಏರ್ಪಡಿಸುವುದು. ಹಾಗೆಯೇ 20 ಮಂದಿ ರೈತರನ್ನು ಆಯ್ಕೆ ಮಾಡಿ ಪ್ರತಿಯಬ್ಬರಿಗೂ 1 ಎಕರೆ ಭೂಮಿ ಕೊಟ್ಟು ಬೆಳೆ ಬೆಳೆಯುವದಕ್ಕೆ ಎಲ್ಲಾ ಸಹಕಾರ ನೀಡುವುದು. ಹೊಸ ಬೆಳೆ ಹೊಸ ಪದ್ದತಿ ಹೊಸ ಉತ್ಪನ್ನಗಳ ಸ್ಪರ್ಧೆ ಏರ್ಪಡಿಸಿ. ಆಗ ನೋಡಿ... ಪ್ರಪಂಚ ಗೌರವ ಪಡುವ. ಇಂಜಿನಿಯರುಗಳು,ಪದವೀದರರು,ವಿಜ್ಞಾನಿಗಳು,ರೈತರು. ಬೆಳಕಿಗೆ ಬರುತ್ತಾರೆ. ದೇಶದ ಚರಿತ್ರೆ ಇತಿಹಾಸ ಬದಲಾಯಿಸುತ್ತಾರೆ... ಛಾನಲ್ಲುಗಳಿಗೆ ಸಾಮಾಜಿಕ ಬದ್ಧತೆ ಇರಬೇಕು (ಹಿಂದೆ ಇದ್ದಂತೆ). *ಇಂತಹ ದರಿದ್ರ ಕಾರ್ಯಕ್ರಮಗಳು ಬೇಕಾ?* ಈ ಅಭಿಪ್ರಾಯ ಸರಿ ಇದ್ದರೆ ಎಲ್ಲರಿಗೂ ಶೇರ್ ಮಾಡಿ..,
110 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post