kgf comming soon - ವಿಜಯವಾಣಿ ಈ ಲಹರಿ ತೆಕ್ಕೆಗೆ ಕೆಜಿಎಫ್ ಆಡಿಯೋ | ವೇಲು . ಸೇಲಾಯ್ತು 0 ವಿಜಯವಾಣಿ ಸುದ್ದಿಜಾಲ ಬೆಂಗಳೂರು ' ರಾಕಿಂಗ್ ಸ್ಟಾರ್ ' ಯಶ್ ಅಭಿನಯದ ' ಕೆಜಿಎಫ್ ' ಚಿತ್ರ ಕೆಲವೇ ದಿನಗಳ ಹಿಂದೆ ಹಿಂದಿ ವಿತರಣೆ ಹಕ್ಕುಗಳ ಕುರಿತಂತೆ ಸಖತ್ ಸದ್ದು ಮಾಡಿತ್ತು . ಬಾಲಿವುಡ್‌ನ ಫರ್ಹಾನ್ ಆಖರ್ , ಅನಿಲ್ ತದಾನಿ ಮತ್ತು ರಿತೇಶ್ ಸಿದ್ದಾನಿ ಭಾರಿ ಮೊತ್ತಕ್ಕೆ ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಖರೀದಿಸಿದ್ದು , ದೊಡ್ಡ ಮಟ್ಟದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಬೇಕು ಎಂದು ಯೋಜನೆ ರೂಪಿಸಿದ್ದಾರೆ . ಸದ್ಯ ಕೇಳಿಬರುತ್ತಿರುವ ಮತ್ತೊಂದು ನ್ಯೂಸ್ ಏನೆಂದರೆ , ' ಕೆಜಿಎಫ್ ' ನ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆಯಂತೆ . ಭರ್ಜರಿ ಮೂಲಗಳ ಪ್ರಕಾರ , ಕನ್ನಡ ಚಿತ್ರರಂಗದಲ್ಲಿ ಮೊತ್ತಕ್ಕೆ ಇದುವರೆಗೂ ಯಾವ ಸಿನಿಮಾಗಳಿಗೂ ಸಿಗದಷ್ಟು ದೊಡ್ಡ ಮೊತ್ತಕ್ಕೆ ' ಕೆಜಿಎಫ್ ' ಆಡಿಯೋ ಹಕ್ಕುಗಳು ಲಹರಿ ಸಂಸ್ಥೆಗೆ ಮಾರಾಟವಾಗಿವೆಯಂತೆ . ಕನ್ನಡ ಯಶ್ ಮಾತ್ರವಲ್ಲದೆ , ತೆಲುಗು , ತಮಿಳು ಭಾಷೆಗಳಲ್ಲಿಯೂ ಸಿನಿಮಾದ ಲಹರಿ ಸಂಸ್ಥೆ ತನ್ನ ಹಿಡಿತ ಹೊಂದಿರುವುದರಿಂದ ' ಕೆಜಿಎಫ್ ' ನ ತಮಿಳು - ತೆಲುಗು ವರ್ಷನ್‌ನ ಹಾಡು ಹಾಡುಗಳು ಕೂಡ ಲಹರಿ ಸಂಸ್ಥೆಯಿಂದಲೇ ಹೊರಬರಲಿವೆ . ಚಿತ್ರದ ಆಡಿಯೋ ಬಿಡುಗಡೆ ಯಾವಾಗ ಎಂಬ ಮಾಹಿತಿಯೂ ಶೀಘ್ರದಲ್ಲೇ ಹೊರಬೀಳಲಿದೆ . ' ಕೆಜಿಎಫ್ ' ಹಾಡುಗಳಿಗೆ ರವಿ ಬಸೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ . - ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಡಿ . 21ಕ್ಕೆ ವಿಶ್ವಾದ್ಯಂತ ಬಹುಭಾಷೆಗಳಲ್ಲಿ ತೆರೆಕಾಣಲಿದೆ . ಭಾರಿ ಬಜೆಟ್‌ನಲ್ಲಿ ಸಿದ್ದಗೊಂಡಿರುವ ಈ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದರೆ , ವಿಶೇಷ ಹಾಡೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ . ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ' ಕೆಜಿಎಫ್ ' ಮೂಡಿಬಂದಿದೆ . Namaste Bengaluru Edition 28 Oct , 2018 Page No . 2 Powered by : ReleGo . com - ShareChat
1.7k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post