ShareChat
click to see wallet page
#🫂ಕಿಂಗ್ ಕೊಹ್ಲಿ❤️️🫂 ಪ್ರಿಯ ವಿರಾಟ್, ‘’ನೀನು ಯಾರದ್ದೋ ಕೃಪೆಯಿಂದ ಆಡಿದವನೂ ಅಲ್ಲ, ಯಾವುದೋ ಲಾಬಿಯಿಂದ ಇಲ್ಲಿಯವರೆಗೆ ಬಂದವನೂ ಅಲ್ಲ. ನಿನ್ನದು ‘ಶುದ್ಧ’ ಮೆರಿಟ್. ನಿನ್ನದು ಇಡೀ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ ಅಸೀಮ ಶಕ್ತಿ. ನೀನು ಯಾರೋ ಚಿಲ್ಚು-ಪಿಲ್ಟುಗಳನ್ನು ಹೊಡೆದು ಸ್ಟಾರ್ ಆದವನಲ್ಲ. ನಿನ್ನದು ಮದ್ದಾನೆಗಳ ಮದವನ್ನು ಕರಗಿಸಿದ ಭುಜಬಲ. ಅತೀ ಕಡಿಮೆ ಪಂದ್ಯಗಳಲ್ಲಿ 83 ಅಂತರಾಷ್ಟ್ರೀಯ ಶತಕಗಳನ್ನು ಚಚ್ಚಿ ಬಿಸಾಕಿದವನು ನೀನು.. ಆಧುನಿಕ ಕ್ರಿಕೆಟ್’ನ ದಿಗ್ಗಜ ನೀನು. ನೀನು ಕ್ರಿಕೆಟ್ ಆಡಿದ ರೀತಿ, ಮಾಡಿದ ಸಾಧನೆ, ನಿನ್ನ ಆ ಕೆಚ್ಚು, ಕಿಚ್ಚು.. ವೈಯಕ್ತಿಕ ಮೈಲುಗಲ್ಲುಗಳನ್ನು ಎಡಗಾಲಲ್ಲಿ ಒದ್ದು, ತಂಡದ ಗೆಲುವಿನಲ್ಲೇ ನಿನ್ನ ಗೆಲುವನ್ನು ಕಾಣುವ ನಿನ್ನ ನಿಸ್ವಾರ್ಥತೆ.. ಎಲ್ಲಾ ಕಾಲದಲ್ಲೂ ಕ್ರಿಕೆಟ್ ಆಡುವ ಎಲ್ಲರಿಗೂ ಮಾದರಿ..’’ ಕೊನೆಗೊಂದು ಮಾತು. ನರಿಗಳು ಊಳಿಡುತ್ತವೆ, ಸಿಂಹ ಘರ್ಜಿಸುತ್ತಲೇ ಇರುತ್ತದೆ. ಸೋಮು ಗೌಡ #viratkohli #kohli #kingkohli #cricket #bcci #indiancricketteam #INDvsSA PC: BCCI
🫂ಕಿಂಗ್ ಕೊಹ್ಲಿ❤️️🫂 - JioHotstar = apelo | -0 JioHotstar = apelo | -0 - ShareChat

More like this