ShareChat
click to see wallet page
ಕಾಂತರಾ 1 ರಿವ್ಯೂ ಈಶ್ವರನ ಹೂದೋಟದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಗುಳಿಗ, ಚಾವುಂಡಿ ರುದ್ರ ನರ್ತನ.. ಶಿವನ ಧರ್ಶನ ಮಹಾದೇವ 🔱🕉️🙏🚩 ಅಪಾರ ನಿರೀಕ್ಷೆ, ಕಾಂತಾರ ನೋಡಿದವರ ಕಲ್ಪನೆಗಳು, ನಂಬಿಕೆಗಳು. ಅದರ ಜತೆಗೆ ನೆಲದ ಆಚಾರ- ವಿಚಾರಕ್ಕೆ ಧಕ್ಕೆಯಾಗದಂತೆ ಕಾಪಾಡುವುದು. ಇದೆಲ್ಲದರ ನಡುವೆ ಕಾಂತಾರ 1 ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅದರಲ್ಲಿ Rishab Shetty ಯಶಸ್ವಿಯಾಗಿದ್ದಾರೆ ಅನಿಸುತ್ತದೆ. ಸಾಮಾನ್ಯವಾಗಿ ಮೊದಲ ಸಿನೆಮಾದ ಯಶಸ್ಸಿನ ಮೇಲೆಯೆ ಎರಡನೆ ಸಿನೆಮಾ ಗೆದ್ದುಬಿಡುತ್ತದೆ. ಆದರೆ ಮೊದಲ ಭಾಗವೆ ಚೆನ್ನಾಗಿತ್ತು ಎಂಬ ಮಾತೇ ಎಲ್ಲೆಡೆ ಕೇಳಿಬರುತ್ತದೆ. ಕಾಂತಾರ 1 ನೋಡಿದಾಗ ಹಾಗೆ ಅನಿಸಲಿಲ್ಲ. ಕಾಂತಾರ- ಕಾಂತಾರ 1 ಎರಡೂ ಕತೆಯಲ್ಲಿ ವ್ಯತ್ಯಾಸ ಉಳಿಸಿಕೊಳ್ಳಲು ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ದೊಡ್ಡ ಬಜೆಟ್, ತಂತ್ರಜ್ಞಾನ, ಗ್ರಾಫಿಕ್ಸುಗಳ ಅಬ್ಬರದಲ್ಲಿ ಮೂಲ ಕತೆ ಎಲ್ಲಿ ಕಳೆದುಹೋಗುತ್ತದೊ, ನೆಲದ ಕತೆಯಲ್ಲಿ ನೆಲವೆ ಕಾರಣದಂತಾಗುತ್ತದೊ‌ ಎಂಬ ಆತಂಕ ನನಗಿತ್ತು. ಆದರೆ ಗ್ರಾಫಿಕ್ಸ್ ಎಲ್ಲೂ ಕತೆಯ ಮೇಲೆ ಸವಾರಿ ಮಾಡದಂತೆ ಎಚ್ಚರ ವಹಿಸಲಾಗಿದೆ. ಸಿನೆಮಾ ಅಂತ್ಯದಲ್ಲಿ ಸ್ವಲ್ಪ ಗ್ರಾಫಿಕ್ಸ್ ಅಬ್ಬರ ಹೆಚ್ಚಾಯಿತು ಅನ್ನಿಸುವ ಹಾಗಿದ್ದರೂ, ಪ್ರೇಕ್ಷಕರನ್ನು ಅಂತ್ಯದ ಉಚ್ಛ್ರಾಯ ಸ್ಥಿತಿಗೆ ಕರೆದುಕೊಂಡು ಹೋಗಲು ಅದನ್ನು ಬಳಸಿಕೊಂಡಿದ್ದಾರೆ. ಕಾಂತಾರ ನೋಡಿ‌ಈ ಸಿನೆಮಾ ನೋಡಿದವರಿಗೆ, ಕೆಲವು ಹಾಡಿನ ಸಾಲು, ಸಂಗೀತದ ತುಣುಕು ಬಿಟ್ಟರೆ ಬೇರೆಲ್ಲ ಬೇರೆಯೆ ಅನಿಸುವಂತಿದೆ ಸಿನೆಮಾ.ಕಾಂತಾರ 1ರ ಕತೆ ಚೆನ್ನಾಗಿ ಹೆಣೆಯುವಲ್ಲಿ ಮತ್ತು ಪ್ರಸ್ತುತ ಪಡಿಸುವಲ್ಲಿ ನಿರ್ದೇಶಕ ರಿಷಬ್ ಗೆದ್ದಿದ್ದಾರೆ. ಆದರೆ ವಿಜೃಂಭಿಸುವುದು ಮಾತ್ರ ನಟ ರಿಷಬ್. ಕಾಂತಾರದಲ್ಲಿ ಕೊನೆಯ ದೃಶ್ಯದಲ್ಲಿ ರಿಷಬ್ ನಟನೆ ಅಚ್ಚಳಿಯದೆ ಮನಸಲ್ಲಿ ಇಂದಿಗೂ ಉಳಿದಿದೆ. ಅದನ್ನು ಮೀರಿಸಿದ ನಟನೆ ಕಾಂತಾರ 1ರಲ್ಲಿ ಕಾಣಬಹುದು. ಆ ದೃಶ್ಯಗಳನ್ನು ಇನ್ನಷ್ಟು ಅದ್ಭುತ ನಟನೆಯಿಂದ ರಿಷಬ್ ನೋಡುಗರ ಕಣ್ಣುಗಳಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ನೋಡುಗರು ಊಹಿಸಲಾಗದ ತಿರುವು, ಕಥೆಯ‌ ಓಟದೊಂದಿಗೆ ಕಥೆ ಆಗುತ್ತದೆ. ಇಡೀ ಸಿನೆಮಾದಲ್ಲಿ ಒಂದೆರಡು ಬಾರಿ ಮಾತ್ರ ದೈವ ಮೈಮೇಲೆ ಬರುವ ಕ್ಷಣಗಳನ್ನು ನೋಡುಗರು‌, ಊಹಿಸಬಹುದಾದರೂ, ದೈವದ ಮುಂದಿನ ನಡೆಗಳಲ್ಲಿ ಓದುಗರು ಆಶ್ಚರ್ಯಚಕಿತರಾಗುತ್ತಾರೆ. ದೈವದ ಹಲವು ಸ್ವರೂಪಗಳನ್ನು ಕಾಂತಾರ 1 ತೆರೆದಿಡುತ್ತದೆ.ಒಟ್ಟಿನಲ್ಲಿ ಕನ್ನಡಿಗರೊಬ್ಬರು ಒಳ್ಳೆಯ ಚಿತ್ರ ನಿರ್ಮಿಸಿದ್ದಾರೆ. ನೋಡಿ ಬೆಂಬಲಿಸುತ್ತೀರೊ, ಟೀಕಿಸಿ ಖುಷಿಪಡುತ್ತೀರೊ ನಿಮಗೆ ಬಿಟ್ಟಿದ್ದು. ಆದರೆ ಸಿನೆಮಾ ನೋಡಲು ಬಂದವರಿಗೆ ಮೋಸವಂತೂ ಆಗಿಲ್ಲ.ನನಗೆ ಯಾರನ್ನೂ ಹೊಗಳಬೇಕಾದ ಅಗತ್ಯ, ಅನಿವಾರ್ಯ ಎರಡೂ ಇಲ್ಲ.‌ ಇದು ಸಿನೆಮಾ ಬಗ್ಗೆ ನನಗೆ ಅನ್ನಿಸಿದ ಅಭಿಪ್ರಾಯವಷ್ಟೆ. ನಿಮ್ಮ ಅಭಿಪ್ರಾಯ. 🕉️🙏🚩🌷❤️✅⭐⭐⭐⭐⭐ #🎥ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕನ್ನಡ ಸಿನಿಮಾ🔥
🎥ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕನ್ನಡ ಸಿನಿಮಾ🔥 - HOMRALEFILMS RISHAB SHETTY @ ఒా నెరిశది మది శినా ఆన్తా ర ಅದರಯ -೧ HOMRALEFILMS RISHAB SHETTY @ ఒా నెరిశది మది శినా ఆన్తా ర ಅದರಯ -೧ - ShareChat

More like this