ನಟ ದರ್ಶನ್ ಸಾಕಿದ್ದ ಕುದುರೆ ಮಾರಾಟಕ್ಕಿಟ್ಟ ಕುಟುಂಬಸ್ಥರು, ಕಾರಣ ಇಲ್ಲಿದೆ
ನಟ ದರ್ಶನ್ ತೂಗುದೀಪ ಅವರು ಪ್ರಾಣಿಪ್ರಿಯರಾಗಿಯೂ ಗಮನ ಸೆಳೆದಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರಿನಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ಅವರು ಸಾಕಿರುವುದು ಗೊತ್ತೇ ಇದೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಮತ್ತೆ ಜೈಲಿಗೆ ಮರಳಿದ್ದಾರೆ. ಈ ನೋವಿನಲ್ಲೇ ಅವರ ಕುಟುಂಬ ಕೂಡ ದಿನಗಳನ್ನು ದೂಡುತ್ತಿದೆ. ಇದೀಗ ದರ್ಶನ್ ಪ್ರೀತಿಯಿಂದ ಸಾಕಿದ್ದ ಕುದುರೆಗಳನ್ನು ಮಾರಾಟ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೇನು ಎಂದು ಅವರ ಮ್ಯಾನೇಜರ್ ವಿಡಿಯೋದಲ್ಲಿ ಹೇಳಿದ್ದಾರೆ.ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ಹೌಸ್ನಲ್ಲಿ ಕುದುರೆಗಳನ್ನು ಸಾಕಿದ್ದರು. ಬಿಡುವಾದಾಗೆಲ್ಲ ಅಲ್ಲಿಗೆ ತೆರಳಿ ಕುದುರೆ ಸವಾರಿಯೂ ಮಾಡುತ್ತಿದ್ದರು. ಈ ಕುದುರೆಗಳು ಅಂದ್ರೆ ದರ್ಶನ್ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಎಂದೇ ಹೇಳಲಾಗಿತ್ತು. ಪ್ರತಿ ಸಂಕ್ರಾಂತಿಯಂದು ಅದ್ದೂರಿಯಾಗಿ ಹಬ್ಬ ಆಚರಿಸುತ್ತಿದ್ದರು. ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕಾಗಲೂ ದರ್ಶನ್ ಈ ಫಾರ್ಮ್ಹೌಸ್ನಲ್ಲೇ ವಿಶ್ರಾಂತಿ ಪಡೆದಿದ್ದರು. ಈಗ ಅವರ ನೆಚ್ಚಿನ ಕುದುರೆಗಳು ಮಾರಾಟಕ್ಕೆ ಇಡಲಾಗಿದೆ.ದರ್ಶನ್ ಫಾರ್ಮ್ಹೌಸ್ನಲ್ಲಿರುವ ಬೋರ್ಡ್ನಲ್ಲಿಯೂ ಕುದುರೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಲಾಗಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದರ್ಶನ್ ಅವರು ಪ್ರಾಣವೇ ಇಟ್ಟುಕೊಂಡಿದ್ದ ಈ ಕುದುರೆಗಳನ್ನು ದಿಢೀರ್ ಮಾರಾಟ ಮಾಡಲು ಕಾರಣವೇನು ಎಂದು ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದರು. ಇದಕ್ಕೆ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.ಕೆಲ ವರ್ಷಗಳ ಹಿಂದೆ ತಮ್ಮ ನೆಚ್ಚಿನ ಕುದುರೆ ಸ್ಯಾಂಡಿ ಮೃತಪಟ್ಟಾಗ ದರ್ಶನ್ ನೊಂದಿದ್ದರು.ಅದರ ನೆನಪಿಗಾಗಿ ಕುದುರೆಯ ಟ್ಯಾಟೋ ಕೂಡ ಹಾಕಿಸಿಕೊಂಡಿದ್ದರು. ಈಗ ಕುದುರೆ ಮಾರಾಟಕ್ಕಿಟ್ಟಿರುವ ಬಗ್ಗೆ ಮಾತನಾಡಿರುವ ಮ್ಯಾನೇಜರ್, ದರ್ಶನ್ ಸರ್ ತೊಂದರೆಯಲ್ಲಿರುವ ಕಾರಣಕ್ಕೆ ಕುದುರೆ ಮಾರಾಟಕ್ಕಿಟ್ಟಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ.ಇದು ನಮ್ಮ ಕೆಟ್ಟ ಸಮಯ, ಏನೂ ಮಾಡೋಕಾಗಲ್ಲ. ಒಳ್ಳೆಯವರಿಗೆ ಒಳ್ಳೆಯದೇ ನಡೆಯುತ್ತೆ ಎಂದಿದ್ದಾರೆ.ಯಜಮಾನ್ರು ಹೊರಗಡೆ ಇದ್ದಾಗ ಎಷ್ಟು ಜನರ ಬದುಕು ನಡೀತಿತ್ತು ಅನ್ನೋದು ಗೊತ್ತಿದೆ. ಲಾಕ್ಡೌನ್ ಸಮಯದಲ್ಲಿ ಮೂಕಪ್ರಾಣಿಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ದಯವಿಟ್ಟು, ತೋಟದ ವಿಚಾರವಾಗಿ, ಫ್ಯಾಮಿಲಿ ವಿಚಾರವಾಗಿ ತಪ್ಪು ಸಂದೇಶ ಕೊಡಬೇಡಿ. ಈಗ ಈ ತೋಟ ನೋಡಿಕೊಳ್ತಿರೋದು ನಾನೇ, ಸುಮ್ಮನೆ ಕುದುರೆ ಮಾರಾಟಕ್ಕಿದೆ ಅಂತ ಹೇಳ್ತಿದ್ದಾರೆ. ಆ ಬೋರ್ಡ್ ಹಾಕಿರೋದು ಈಗಲ್ಲ, ಒಂದು ವರ್ಷದಿಂದಲೂ ಹಾಗೇಯೇ ಇದೆ ಎಂದು ಹೇಳಿದ್ದಾರೆ.ಕೆಲವರಿಗೆ ಕುದುರೆ ಸಾಕುವ ಆಸೆ ಇರುತ್ತೆ. ಅವರು ಯಾರನ್ನು ಸಂಪರ್ಕ ಮಾಡಬೇಕು ಅಂತ ಗೊತ್ತಿರಲ್ಲ. ಕೆಲವರು ಕುದುರೆ ಖರೀದಿಸುವಾಗ ಮೋಸ ಹೋಗ್ತಾರೆ. ಇದನ್ನು ತಪ್ಪಿಸಲು, ಕುದುರೆ ನಾವೇ ತಂದು ಚೂರ ಲಾಭಕ್ಕೆ ಮಾರೋಣ ಎಂದು ನಮ್ಮ ಯಜಮಾನ್ರೇ ಹೇಳ್ತಿದ್ರು. ಸಾಕುವವರ ಅನುಕೂಲಕ್ಕಾಗಿ ಮಾತ್ರವೇ ಆ ರೀತಿ ಬೋರ್ಡ್ ಹಾಕಿದ್ದೀವಿ. ಅದು ಬಿಟ್ಟರೆ ಬೇರೆ ಇನ್ಯಾವ ಉದ್ದೇಶ ಇಲ್ಲ.ಕುದುರೆ ತಂದು ಮಾರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. #🔴ನಟ ದರ್ಶನ್ ಸಾಕಿದ್ದ ಕುದುರೆ ಮಾರಾಟಕ್ಕಿಟ್ಟ ಕುಟುಂಬಸ್ಥರು🐴
