#😭ಏಕಾಏಕಿ ಕುಸಿದು ಬಿದ್ದ ಖ್ಯಾತ ನಟ: ICUಗೆ ದಾಖಲು!🔴 ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ನಂತರ ಗೋವಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿಲಾಯಿತು. ನಟ ಗೋವಿಂದ ಅವರ ವಕೀಲ ಲಲಿಲತ್ ಬಿಂದಾಲ್ ಅವರು ನಟರಿಗೆ ಅಸ್ವಸ್ಥತೆ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ.ಗೋವಿಂದ ಅವರು ನಟ ಧರ್ಮೇಂದ್ರ ಅವರನ್ನ ಭೇಟಿ ಮಾಡಿ ಒಂದೇ ದಿನದ ನಂತರ ಈ ಘಟನೆ ಸಂಭವಿಸಿದೆ. ಧರ್ಮೇಂದ್ರ ಅವರು ಚೇತರಿಕೆ ಹಂತದಲ್ಲಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಅವರಿಗೆ ಗೊಂದಲವಾಗುತ್ತಿತ್ತು. ಎಲ್ಲಾ ಪರೀಕ್ಷೆಗಳನ್ನ ಮಾಡಲಾಗಿದೆ. ನಾವು ವರದಿಗಳು ಮತ್ತು ನರಶಾಸ್ತ್ರಜ್ಞರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ. ಅವರು ಈಗ ಸ್ಥಿರವಾಗಿದ್ದಾರೆ" ಎಂದು ಲಲಿತ್ ಬಿಂದಾಲ್, ಗೋವಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰

