ಶ್ರೀ ಗುರು ಬಸವ ಲಿಂಗಾಯನಮಃ.. "ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶೀಲವಾವುದೆಂದರಿಯರು ಇದ್ದುದ ವಂಚನೆಯ ಮಾಡಿದಿಪ್ಪುದೆ ಶೀಲ, ಇಲ್ಲದಿದ್ದುದಕ್ಕೆ ಕಡನ ಬೇಡದಿಪ್ಪುದೆ ಶೀಲ, ಪರಧನ ಪರಸತಿಗೆಳಸದಿಪ್ಪುದೆ ಶೀಲ, ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ, ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ, ಕೂಡಲಚೆನ್ನಸಂಗನ ಶರಣರ ಬರವಿಂಗೆ ಮುಯ್ಯಾಂತು ಪರಿಣಾಮಿಸ ಬಲ್ಲರೆ ಅಚ್ಚಶೀಲ.. ✍️ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ

