ShareChat
click to see wallet page
ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದರಿಂದ ಡ್ಯಾನ್ಸರ್ ಸುಧೀಂದ್ರ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲ್ಲೂಕಿನ ಪೆಮ್ಮನಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆಯಷ್ಟೇ ಹೊಸ ಕಾರು ಡಿಲಿವರಿ ಪಡೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಸುಧೀಂದ್ರ ಹೊಸ ಇಕೋ ಕಾರಿನಲ್ಲಿ ಹೋಗುವಾಗ ರಸ್ತೆ ಮಧ್ಯೆ ಕಾರ್ ಕೆಟ್ಟು ನಿಂತಿದೆ. ಇದರಿಂದಾಗಿ ಕಾರ್ ಪರೀಕ್ಷಿಸಲು ಸುಧೀಂದ್ರ ಕಾರ್ ನಿಂದ ಇಳಿದು ಕಾರ್ ಹಿಂಭಾಗ ನಿಂತಿದ್ದಾಗ, ಹಿಂದಿನಿಂದ ಬಂದ ಕ್ಯಾಂಟರ್‌, ಸುಧೀಂದ್ರಗೆ ಡಿಕ್ಕಿ ಹೊಡೆದಿದೆ. ಇದರಿಂದ ಸುಧೀಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಕಾರ್‌ಗೆ ಕ್ಯಾಂಟರ್‌ ಡಿಕ್ಕಿ ಹೊಡೆಯುವ ದೃಶ್ಯ ಸಮೀಪದಲ್ಲೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯವನ್ನು ನೋಡಿದರೇ, ಇದು ಅಪಘಾತದಂತೆ ಕಾಣುತ್ತಿಲ್ಲ. ದುರುದ್ದೇಶಪೂರ್ವಕವಾಗಿಯೇ ಕ್ಯಾಂಟರ್‌ ಚಾಲಕ, ಇಕೋ ಕಾರಿನ ಬಳಿಗೆ ಬಂದು ಡಿಕ್ಕಿ ಹೊಡೆದು ಮರ್ಡರ್ ಮಾಡಿದಂತೆ ಕಾಣುತ್ತಿದೆ. ಹೆದ್ದಾರಿ ಸಂಪೂರ್ಣ ಖಾಲಿ ಇತ್ತು. ಬಲಭಾಗದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಆದರೂ, ಕ್ಯಾಂಟರ್‌ ಚಾಲಕ ಹೆದ್ದಾರಿಯ ಎಡಭಾಗದಲ್ಲಿ ನಿಂತಿದ್ದ ಇಕೋ ಕಾರಿನ ಬಳಿಗೆ ಲಾರಿ ಬಂದು ಹೆದ್ದಾರಿಯಲ್ಲಿ ನಿಂತಿದ್ದ ಡ್ಯಾನ್ಸರ್ ಸುಧೀಂದ್ರ ಹಾಗೂ ಇಕೋ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. #💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭
💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭 - ShareChat

More like this