ShareChat
click to see wallet page
#💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು ಕೃಷಿಕನ ಮನದಾಳದ ನೋವು ಕೃಷಿಕ ಎಂದಿಗೂ ಸ್ವಾರ್ಥ ಬಯಸಲಾರ. ಏಕೆಂದರೆ ಅವನ ಶ್ರದ್ಧೆಯಿಂದ ಮಾಡುತ್ತಿರುವ ಕೃಷಿಯ ಫಲದಿಂದಲೇ ನಾವೆಲ್ಲರಿಗೂ ಹೊಟ್ಟೆಗೆ ತುತ್ತು ಸಿಗುತ್ತದೆ. ಆತ ಬೆಳೆದರೆ ಮಾತ್ರ ನಮ್ಮ ಬದುಕು ಸಾಗುತ್ತದೆ ಇಲ್ಲದಿದ್ದರೆ ಏನೂ ಸಾಧ್ಯವಿಲ್ಲ ಅಲ್ವಾ ಸುಮಾರು ಹತ್ತು ಎಕರೆ ಕೃಷಿಭೂಮಿಯಲ್ಲಿ ಶ್ರಮಿಸುತ್ತಿರುವ ರೈತನು, ಸಾಫ್ಟ್‌ವೇರ್ ಇಂಜಿನಿಯರಿಂಗ್‌ ಅಥವಾ ಎಂ.ಬಿ.ಎ. ಮಾಡಿದವರಿಗಿಂತ ವಿಭಿನ್ನ. ಯಾಕೆಂದರೆ ವಿದ್ಯಾಭ್ಯಾಸದಿಂದ ಎಷ್ಟು ಉನ್ನತಿಗೆ ಹೋದರೂ, ಅನ್ನದ ಮಹತ್ವವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಊಟಕ್ಕೆ ಅನ್ನವನ್ನು ಕೊಡುವವರು ರೈತರು ಮಾತ್ರ. ಗದ್ದೆಯನ್ನು ಹದಮಾಡಿ, ನೇಜಿ ನೆಟ್ಟು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿ, ನಿರಂತರ ನೀರಾವರಿ ಒದಗಿಸಿ, ಹವಾಮಾನ ವೈಪರೀತ್ಯಗಳನ್ನೆಲ್ಲ ಎದುರಿಸಿ ನಾಲ್ಕು ತಿಂಗಳು ಶ್ರಮಿಸುವ ಕೃಷಿಕನಿಗೆ ಮಾತ್ರ ಗೊತ್ತು ಅದರ ನಿಜವಾದ ಬೆಲೆ. ಹಳ್ಳಿಯಲ್ಲಿ ಎಲ್ಲರೂ “ಮಷಿನರಿ ಬಳಸಿ ಕೃಷಿ ಮಾಡಿ” ಎಂದು ಸಲಹೆ ನೀಡುವರು. ಆದರೆ ಕೃಷಿ ಕಾಲ ಬಂದಾಗ ಆ ಯಂತ್ರೋಪಕರಣಗಳು ಸಕಾಲಕ್ಕೆ ಸಿಗದೆ, ಗದ್ದೆ ಪಡೀಲು ಇಡುವ ಸಂದರ್ಭಗಳು ಬಂದೇ ಬರುತ್ತವೆ. ಒಮ್ಮೆ ಹಳ್ಳಿಯೊಬ್ಬ ರೈತನ ಜೀವನ ಇದೇ ರೀತಿಯಾಗಿ ತಿರುಗಿತು. ಆತ ಶ್ರಮಜೀವಿ ರೈತನಾದರೂ, ತನ್ನ ಮಗನು ರೈತನಾಗಿ ಕಷ್ಟಪಡುವುದನ್ನು ಬಯಸಲಿಲ್ಲ. ಅದಕ್ಕಾಗಿ ಅವನನ್ನು ಉತ್ತಮವಾಗಿ ಓದಿಸಿ, ವಿದೇಶಕ್ಕೆ ಕಳುಹಿಸಿ ವಿದ್ಯಾಭ್ಯಾಸ ಮಾಡಿಸಿದ. ಮಗನೂ ಅಲ್ಲಿ ಉತ್ತಮ ಉದ್ಯೋಗವನ್ನು ಪಡೆದು ವಿದೇಶದಲ್ಲೇ ನೆಲೆಸಿದ. ಈಗ ತಂದೆ ವಯೋವೃದ್ಧನಾಗಿದ್ದ. ತಾನು ಕೈಯಿಂದಲೇ ಬೆಳೆಸಿದ ಗದ್ದೆಗಳು ಬಾಡಿಬಿಟ್ಟಿದ್ದವು. ಸೊಪ್ಪುಗಳು, ಕಾಳುಗಳು, ಕಾಡುಕುರುಚಲು ಗಿಡಗಳು ಎಲ್ಲೆಡೆ ಆವರಿಸಿಕೊಂಡಿದ್ದವು. ಹತ್ತಿರದಲ್ಲಿ ಸಹಾಯ ಮಾಡಲು ಯಾರೂ ಇಲ್ಲ. ಮಗ ದೂರದ ದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ತಂದೆಯು ಬಾವುಕನಾಗಿ, “ನಾನು ಶ್ರಮಿಸಿ ಉಳಿಸಿಕೊಂಡ ಗದ್ದೆ ಹಾಳಾಗುತ್ತಿದೆ” ಎಂಬ ನೋವಿನಿಂದ ಬದುಕುತ್ತಿದ್ದ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ರಾಂ ಅಜೆಕಾರು ಕಾರ್ಕಳ http://ramajekar.travel.blog/2025/11/01/daily-stories-23/ #ಕೃಷಿಬದುಕು #ಕರಾವಳಿ #ramajekar #karavalikarnataka #dailystories #udupikarkala #ರಾಂಅಜೆಕಾರು
💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ - CPam CPam - ShareChat

More like this