Rain Alert: ಮುಂದಿನ 72 ಗಂಟೆಗಳ ಕಾಲ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ನೆಚ್ಚರಿಕೆ...
ಮಳೆ ಆರ್ಭಟ ನೋಡುತ್ತಿದ್ದರೆ ಭಯದ ವಾತಾವರಣ ಸೃಷ್ಟಿಯಾಗಿದೆ, ಎಲ್ಲಿ ನೋಡಿದರೂ ಬರೀ ಈ ಮಳೆಯದ್ದೇ ಅಬ್ಬರ. ನೋಡ ನೋಡುತ್ತಲೇ ಯರ್ರಾಬಿರ್ರಿ ಸುರಿಯಲು ಶುರು ಮಾಡಿರುವ ವರಣದೇವ ಭರ್ಜರಿ ಆರ್ಭಟ ತೋರಿಸುತ್ತಿದ್ದಾನೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 12 ಗಂಟೆ ಸತತ ಸುರಿದ ಭರ್ಜರಿ ಮಳೆ ನೂರಾರು ಸಮಸ್ಯೆ ಸೃಷ್ಟಿ ಮಾಡಿದೆ. ಹಾಗೇ ಇನ್ನೂ 72 ಗಂಟೆಗಳ ಕಾಲ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಮಳೆರಾಯ ಸಾಕು ನಿಲ್ಲಿಸು ಮಾರಾಯ ನಿನ್ನ ರಗಳೆ... ಹಿಂಗೆ ಜನ ಬೇಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜೋರಾಗಿ ಮಳೆ ಬರಲಿ ದೇವರೆ ಅಂತಾ ಬೇಡುತ್ತಿದ್ದ ಜನರೇ ಇದೀಗ, ಮಳೆಗೆ ಶಾಪ ಹಾಕಿ ನಿಲ್ಲುವಂತಹ ಸ್ಥಿತಿ ನಿರ್ಮಾಣ ಆಗಿದೆ. 2025 ಏಪ್ರಿಲ್ & ಮೇ ತಿಂಗಳಲ್ಲಿ ಶುರು ಆಗಿದ್ದ ಮಳೆ ಅಕ್ಟೋಬರ್ ತಿಂಗಳ ತನಕ ಸುರಿದು ಸಾಕು ಸಾಕು ಎನಿಸಿದೆ. ಇಷ್ಟಾದರೂ ಮತ್ತೆ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಕಟ್ಟೆಚ್ಚರ ಕೂಡ ವಹಿಸಲು ಖಡಕ್ ಮುನ್ಸೂಚನೆ ನೀಡಲಾಗಿದೆ. #🛑ಮುಂದಿನ 72 ಗಂಟೆಗಳ ಕಾಲ ಅಬ್ಬರಿಸಲಿದೆ ಭಾರಿ ಮಳೆ!❌
