ShareChat
click to see wallet page
Pooja Hegde Marriage: ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರ ಮದುವೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಹೃತಿಕ್ ರೋಷನ್ ಜೊತೆ ತಮ್ಮ ಸಿನಿಮಾ ವೃತ್ತಿಜೀವನ ಆರಂಭಿಸಿದ ಪೂಜಾ ಹೆಗ್ಡೆ, ಕ್ರಿಕೆಟಿಗನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗುತ್ತಿದೆ.. ಇದಕ್ಕೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ..  ಮೊಹೆಂಜೊ ದಾರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪೂಜಾ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ. ಪೂಜಾ ಮುಂಬೈನಲ್ಲಿ ವಾಸಿಸುವ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.  ಆದರೆ, ಈಗ ನಟಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪೂಜಾ ಹೆಸರು ಕ್ರಿಕೆಟಿಗರೊಂದಿಗೆ ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ನಟಿ ಕರ್ನಾಟಕದ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಮತ್ತು ಅವರು ತಮ್ಮ ಸಹೋದರನ ಮದುವೆಯಲ್ಲೂ ಭಾಗವಹಿಸಿದ್ದರು ಎಂಬ ವರದಿಗಳು ಬಂದಿದ್ದವು.ಆದರೆ ನಟಿ ಪೂಜಾ ವದಂತಿಗಳನ್ನು ನಿರಾಕರಿಸಿದ್ದು, "ನನ್ನ ಸಂಪೂರ್ಣ ಗಮನ ನನ್ನ ಕೆಲಸದ ಮೇಲೆ ಮಾತ್ರ ಮತ್ತು ನಾನು ಒಂಟಿಯಾಗಿದ್ದೇನೆ.. ನನ್ನ ಮದುವೆಯ ಬಗ್ಗೆ ನಾನು ಸುದ್ದಿ ಓದಿದ್ದೇನೆ, ಆದರೆ ನಾನು ಅದರ ಬಗ್ಗೆ ಗಮನ ಹರಿಸುವುದಿಲ್ಲ" ಎಂದು ನಟಿ ಸ್ಪಷ್ಟವಾಗಿ ಹೇಳಿದ್ದಾರೆ.. ನಿರ್ದೇಶಕ ಫರ್ಹಾದ್ ಸಾಮ್ಜಿ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಪೂಜಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. #😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞
😍ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ💞 - ShareChat

More like this