ShareChat
click to see wallet page
#📜ಪ್ರಚಲಿತ ವಿದ್ಯಮಾನ📜 ಹಿರಿಯರ ಆದರ್ಶ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅಭಿಮತ ದಾವಣಗೆರೆ: ಸಮಾಜಕ್ಕೆ ಹಿರಿಯ ನಾಗರಿಕರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಇಲ್ಲವಾದಲ್ಲಿ ಹಿರಿಯರ ಆದರ್ಶ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕಣ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸದ್ಯೋಜಾತ ಮಠದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು. ಈಗಿನ ಮಕ್ಕಳಿಗೆ ಆದರ್ಶ, ಮೌಲ್ಯಯುತ ಸಲಹೆಗಳು ಅಗತ್ಯವಾಗಿ ಹೇಳಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರ ಮಾರ್ಗದರ್ಶನ ಮುಖ್ಯವಾದದ್ದು. ಹಿಂದೆ ಮನುಷ್ಯನ ಆಯಸ್ಸು 100 ರಿಂದ 125 ವರ್ಷಗಳಾಗಿತ್ತು, ಆದರೆ ಇಂದಿನ ಪೀಳಿಗೆಯವರ ಆಯಸ್ಸು 65 ರಿಂದ ಗರಿಷ್ಠ 80 ವರ್ಷ ಆಗಿದೆ. ಹಿರಿಯ ನಾಗರಿಕರು ಯೋಚನೆ ಮಾಡುವುದನ್ನು ಬಿಡಬೇಕು, ಜೊತೆಗೆ ದಿನ ನಿತ್ಯದ ಬದುಕಿನಲ್ಲಿ ಕ್ರೀಡೆಯಲ್ಲಿ ತೊಡಕೊಳ್ಳಬೇಕು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು. ಈ ಹಿಂದೆ ಯಾವುದೇ ಪೊಲೀಸರ ರಕ್ಷಣೆ ಇಲ್ಲದೆ ಹಬ್ಬ ಆಚರಣೆ ಮಾಡುತ್ತಿದ್ದೆವು, ಆದರೆ ಇಂದು ಪೊಲೀಸರ ಮತ್ತು ಡ್ರೋಣ್ ಕಣ್ಗಾವಲಿನಲ್ಲಿ ಹಬ್ಬಗಳ ಆಚರಣೆ ಮಾಡುವಂತಾಗಿದೆ. ನಾವು ಸೌಹಾರ್ಧತಯುತವಾಗಿ ಹಬ್ಬ ಆಚರಣೆ ಮಾಡುವ ವ್ಯವಸ್ಥೆ ಆಗಬೇಕು ಮತ್ತು ಸರ್ವರಿಗೂ ಶಿಕ್ಷಣ, ಆರೋಗ್ಯ ಸೇವೆ ಉಚಿತವಾಗಿ ನೀಡಿದಾಗ ಮಾತ್ರ ದೇಶ ಹೆಚ್ಚು ಅಭಿವೃದ್ದಿಯಾಗಲು ಸಾಧ್ಯ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಮಾತನಾಡಿ, ಚಿಕ್ಕವರಿದ್ದಾಗ ಅಜ್ಜಿ, ತಾತ ಅವರುಗಳು ನಮಗೆ ಪಂಚತಂತ್ರ, ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಹೇಳುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ಕೂಟಗಳಲ್ಲಿ ಮಕ್ಕಳೊಂದಿಗೆ ಭಾಗವಹಿಸುತ್ತಿದ್ದರು. ಇದರಿಂದ ಸಂಸ್ಕೃತಿ ಹೆಚ್ಚುತಿತ್ತು. ಆದರೆ ಇಂದು ಸಹಕುಟುಂಬ ವ್ಯವಸ್ಥೆಯಿಂದ ವಿಮುಖರಾಗಿ ವಯೋವೃದ್ಧರನ್ನು ನೋಡಿಕೊಳ್ಳಲು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದರು. ಆದರೆ ಹಿರಿಯರೊಂದಿಗೆ ಇಂದಿನ ಯುವ ಪಿಳಿಗೆಗೆ ಮಾರ್ಗದರ್ಶನ ಮುಖ್ಯವಾಗಿದೆ. ಹಿರಿಯರು ಜೊತೆಗೆ ಇಲ್ಲದ ಕಾರಣ ನಾವು ಏನು ಮಾಡಬೇಕು ಮತ್ತು ಮಾಡಬಾರದು ಎಂಬುದು ತಿಳಿ ಹೇಳುವವರು ಯಾರೂ ಇಲ್ಲವಂತಾಗಿದೆ. ಆದ್ದರಿಂದ ಹಿರಿಯರು ತಮ್ಮ ಜೀವನ ಭದ್ರತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಹಿರಿಯ ವಕೀಲ ಬಳ್ಳಾರಿ ರೇವಣ್ಣ ಕಾನೂನು ಅರಿವು ಬಗ್ಗೆ ಉಪನ್ಯಾಸ ನೀಡಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮತ್ತು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ.ಪ್ರಕಾಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗುರುಮೂರ್ತಿ, ಹಿರಿಯ ವೈದ್ಯರಾದ ಡಾ. ವೀರಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರಕುಮಾರ್ ಬಿ.ಯು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಹಾಗೂ ಇತರರು ಹಾಜರಿದ್ದರು. #situation #ideals #values ​ #elders #lost #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat

More like this